ETV Bharat / entertainment

ಮಾಲ್​ನಲ್ಲಿ ಜಮಾಯಿಸಿದ ಅಭಿಮಾನಿಗಳು.. ತಳ್ಳುಮಾಲಾ ಚಿತ್ರದ ಪ್ರಚಾರ ಕಾರ್ಯಕ್ರಮ ರದ್ದು

author img

By

Published : Aug 12, 2022, 6:48 AM IST

ಹೈಲೈಟ್ ಮಾಲ್​ನಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ ಹಿನ್ನೆಲೆ ತಳ್ಳುಮಾಲಾ ಚಿತ್ರದ ಪ್ರಚಾರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

Thallumaala promotion cancelled in Kozhikode due to massive crowd
ಮಾಲ್​ನಲ್ಲಿ ಜಮಾಯಿಸಿದ ಅಭಿಮಾನಿಗಳು....ತಳ್ಳುಮಾಲಾ ಚಿತ್ರದ ಪ್ರಚಾರ ಕಾರ್ಯಕ್ರಮ ರದ್ದು

ಕೋಯಿಕ್ಕೋಡ್(ಕೇರಳ): ಕೋಯಿಕ್ಕೋಡ್​ನ ಹೈಲೈಟ್ ಮಾಲ್​ನಲ್ಲಿ ಇಂದು ಬಿಡುಗಡೆಯಾಗಲಿರುವ ಮಲೆಯಾಳಂ ತಳ್ಳುಮಾಲಾ (Thallumaala film) ಚಿತ್ರದ ಪ್ರಚಾರ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಮಾಲ್​ನಲ್ಲಿ ಬೃಹತ್ ಜನಸಮೂಹ ಜಮಾಯಿಸಿದ ಹಿನ್ನೆಲೆ ತಳ್ಳುಮಾಲಾ ಚಿತ್ರದ ಪ್ರಚಾರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

ಮಾಲ್‌ನ ಜನಸಂದಣಿ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚಿತ್ರದ ನಾಯಕ ನಟ ಟೊವಿನೋ ಥಾಮಸ್ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಲೈವ್‌ಗೆ ಹೋಗಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇಷ್ಟು ದೊಡ್ಡ ಮಟ್ಟದ ಜನಸಂದಣಿಯನ್ನು ನಾನು ನೋಡಿಲ್ಲ. ಮಾಲ್‌ನಲ್ಲಿ ಈ ಮಟ್ಟದ ಜನಸಂದಣಿಯನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಜೀವಂತವಾಗಿ ಹಿಂತಿರುಗುವುದು ಖಚಿತವಾಗಿರಲಿಲ್ಲ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ನಟ ಟೊವಿನೋ ಥಾಮಸ್ ತಿಳಿಸಿದ್ದಾರೆ.

ಮಾಲ್‌ನ ದೃಶ್ಯಗಳು ವೈರಲ್​​ ಆಗಿವೆ. ಮಾಲ್‌ನ ಎಲ್ಲ ಮಹಡಿಗಳಲ್ಲಿ ಇರುವೆಗಳಂತೆ ಜನರು ಕಾಣುತ್ತಿದ್ದಾರೆ. ಮಾಲ್‌ನ ಹೊರಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ವರದಿಯಾಗಿದೆ. ಈ ಹಿಂದೆ ಘೋಷಿಸಿದ್ದ ಇಡೀ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು.

ಇದನ್ನೂ ಓದಿ: ಗಾಳಿಪಟ 2 ದೊಡ್ಡ ಮಟ್ಟದಲ್ಲಿ ಹಾರುತ್ತೆ: ನಿರ್ದೇಶಕ ಯೋಗರಾಜ್ ಭಟ್‌

ಚಿತ್ರದ ಕಲರ್ ಫುಲ್ ಪೋಸ್ಟರ್ ಮತ್ತು ಟ್ರೇಲರ್ ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಟ್ರೇಲರ್‌ನ ಡೈಲಾಗ್‌ಗಳು ಮತ್ತು ಸಂಗೀತವು ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳ ಗಮನವನ್ನೂ ಸೆಳೆದಿದೆ. ಖಲೀದ್ ರೆಹಮಾನ್ ನಿರ್ದೇಶನದ ಈ ಚಿತ್ರದಲ್ಲಿ ನಟ ಟೊವಿನೋ ಥಾಮಸ್, ಕಲ್ಯಾಣಿ ಪ್ರಿಯದರ್ಶನ್ ಮತ್ತು ಶೈನ್ ಟಾಮ್ ಚಾಕೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಲ್ಲುಮಾಲಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.