ETV Bharat / entertainment

ಸೂಪರ್​ಸ್ಟಾರ್​ ರಜನಿಕಾಂತ್​ 170ನೇ ಸಿನಿಮಾಗೆ ಇವರೇ ನೋಡಿ ನಾಯಕಿಯರು.. - etv bharat kannada

'ತಲೈವರ್ 170'ನೇ ಚಿತ್ರಕ್ಕೆ ಬಹುಭಾಷಾ ನಟಿಯರಾದ ರಿತಿಕಾ ಸಿಂಗ್​, ಮಂಜು ವಾರಿಯರ್​ ಮತ್ತು ದುಶಾರಾ ವಿಜಯನ್​ ನಾಯಕಿಯರಾಗಿದ್ದಾರೆ.

Thalaivar 170 movie heoines
ಸೂಪರ್​ಸ್ಟಾರ್​ ರಜನಿಕಾಂತ್​ 170ನೇ ಸಿನಿಮಾಗೆ ಇವರೇ ನೋಡಿ ನಾಯಕಿಯರು..
author img

By ETV Bharat Karnataka Team

Published : Oct 2, 2023, 10:51 PM IST

'ತಲೈವರ್​ 170' ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿರುವ ಹೆಸರು. ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ಅವರ 'ಜೈಲರ್'​ ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಆದ ನಂತರ ಅವರ 170ನೇ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ತುಸು ಹೆಚ್ಚೇ ಇದೆ. ಈಗಾಗಲೇ ನಿರ್ದೇಶಕ, ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕರ ಕುರಿತಾದ ಮಾಹಿತಿಗಳು ಲಭ್ಯವಾಗಿದೆ. ಇದೀಗ ಈ ಸಿನಿಮಾದ ನಾಯಕಿಯರ ಬಗ್ಗೆಯೂ ಅಧಿಕೃತ ಘೋಷಣೆಯಾಗಿದೆ.

ತಲೈವರ್​ 170ನೇ ಸಿನಿಮಾವನ್ನು 'ಜೈ ಭೀಮ್​' ಖ್ಯಾತಿಯ ಟಿ.ಜೆ.ಜ್ಞಾನವೇಲ್​ ನಿರ್ದೇಶಿಸಲಿದ್ದಾರೆ. ಜವಾನ್​, ಜೈಲರ್​ನಂತಹ ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಅನಿರುದ್ಧ್​ ರವಿಚಂದರ್ ಈ ಸಿನಿಮಾಗೂ​ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಮೂಲಕ ಸುಭಾಸ್ಕರನ್​ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂಬ ವಿಚಾರ ಈಗಾಗಲೇ ಗೊತ್ತಿದೆ. ಚಿತ್ರತಂಡ ನಿನ್ನೆಯಷ್ಟೇ ಈ ಮಾಹಿತಿಯನ್ನು ಹಂಚಿಕೊಂಡಿತ್ತು.

ಇದೀಗ ತಲೈವರ್ 170ನೇ ಚಿತ್ರದ ನಾಯಕಿಯರ ಮಾಹಿತಿ ಹೊರಬಿದ್ದಿದೆ. ಬಹುಭಾಷಾ ನಟಿಯರಾದ ರಿತಿಕಾ ಸಿಂಗ್​, ಮಂಜು ವಾರಿಯರ್​ ಮತ್ತು ದುಶಾರಾ ವಿಜಯನ್​ ಅವರು ರಜನಿಕಾಂತ್​ ಮುಂದಿನ ಸಿನಿಮಾದ ಭಾಗವಾಗಿದ್ದಾರೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಘೋಷಿಸಿದೆ. ಯಾರು, ಯಾವ್ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ. ಜೊತೆಗೆ ರಜನಿಕಾಂತ್​ಗೆ ನಾಯಕಿ ಯಾರಾಗಲಿದ್ದಾರೆ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇನ್ನೂ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಲು ನಿರ್ದೇಶಕ ಟಿ.ಜೆ.ಜ್ಞಾನವೇಲ್ ಅವರು ಟಾಲಿವುಡ್​ ನಟ ನಾನಿ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಆದರೆ ನಾನಿ ಇದಕ್ಕೆ ನೋ ಹೇಳಿರುವುದಾಗಿ ವರದಿಯಾಗಿದೆ. ಅಲ್ಲದೇ ಆ ಜಾಗಕ್ಕೆ ಶರ್ವಾನಂದ್​ ಅವರನ್ನು ಕರೆಸಿಕೊಳ್ಳುವ ಸಾಹಸ ಕೂಡ ನಡೆದಿತ್ತು. ಆದರೆ ಅವರು ಕೂಡ ನಿರಾಕರಿಸಿದ್ದರಿಂದ ರಾಣಾ ದಗ್ಗುಬಾಟಿಗೆ ಈ ಅವಕಾಶ ಸಿಗಲಿದೆ ಎಂಬ ವಿಚಾರ ಕೇಳಿಬಂದಿತ್ತು. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Thalaivar171: ಲೋಕೇಶ್​ ಕನಕರಾಜ್​ ಜೊತೆ ರಜನಿಕಾಂತ್ ಮುಂದಿನ ಸಿನಿಮಾ ಘೋಷಣೆ

ಇದರ ಹೊರತಾಗಿ, ಬಿಗ್​ ಬಿ ಅಮಿತಾಭ್​ ಬಚ್ಚನ್​ ಮತ್ತು ಮಲಯಾಳಂ ನಟ ಫಹಾದ್​ ಪಾಸಿಲ್​ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಆ್ಯಕ್ಷನ್​ ಪ್ಯಾಕ್ಡ್​ ಎಂಟರ್ಟೈನರ್​ ಆಗಿರಲಿದೆ. ರಜನಿಕಾಂತ್​ ವಿಶೇಷ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕಥೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ತಲೈವಾ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 2024ರಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ ರಜನಿಕಾಂತ್​​ 171ನೇ ಸಿನಿಮಾ ಬಗ್ಗೆಯೂ ಅಭಿಮಾನಿಗಳಿಗೆ ಈಗಾಗಲೇ ಅಪ್​ಡೇಟ್ಸ್​ ಸಿಕ್ಕಿದೆ. ಸ್ಟಾರ್​ ನಿರ್ದೇಶಕ ಲೋಕೇಶ್​ ಕನಕರಾಜ್ ನಿರ್ದೇಶನದಲ್ಲಿ ಬ್ಲಾಕ್​ಬಸ್ಟರ್​ ಚಿತ್ರ ಬರಲಿದೆ ಎಂದು ಅಧಿಕೃತ ಘೋಷಣೆಯಾಗಿದೆ. 'ಜೈಲರ್'​ ಸೂಪರ್​ ಹಿಟ್​ ಆದ ನಂತರ, ರಜನಿಕಾಂತ್​ ಅವರು ತಮ್ಮ 171ನೇ ಚಿತ್ರಕ್ಕಾಗಿ ಸನ್​ಪಿಕ್ಚರ್ಸ್​ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಅವರ ಮ್ಯೂಸಿಕ್​ನಲ್ಲಿ ಈ ಚಿತ್ರದ ​ಹಾಡುಗಳು ಕೂಡ ಬರಲಿದೆ.

ಇದನ್ನೂ ಓದಿ: ಗೆಳೆಯ ರಜನಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವ ಅಭಿಮಾನಿ; ಕಮಲ್​ ಹಾಸನ್​ ರಿಯಾಕ್ಷನ್​ ಹೀಗಿತ್ತು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.