ETV Bharat / entertainment

ಮೇಘನಾರಾಜ್​ ಅಭಿನಯದ 'ತತ್ಸಮ ತದ್ಭವ' ಸೆಪ್ಟೆಂಬರ್​ 15ರಂದು ತೆರೆಗೆ - ತತ್ಸಮ ತದ್ಭವ

ನಟಿ ಮೇಘನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ ಅಭಿನಯದ ಕ್ರೈಂ ಥ್ರಿಲ್ಲರ್​ ಸಿನಿಮಾ 'ತತ್ಸಮ ತದ್ಭವ' ಸೆಪ್ಟೆಂಬರ್​ 15ರಂದು ತೆರೆ ಕಾಣಲಿದೆ.

tatsama-tadbhava-kannada-movie-releasing-on-sept-15
ಮೇಘನಾರಾಜ್​ ಅಭಿನಯದ ತತ್ಸಮ ತದ್ಭವ ಸಿನೆಮಾಗೆ ಸಾಥ್ ಕೊಟ್ಟ ಧನಂಜಯ್, ಧ್ರುವ ಸರ್ಜಾ
author img

By ETV Bharat Karnataka Team

Published : Aug 28, 2023, 9:38 PM IST

ರಾಜಾಹುಲಿ ಸಿನಿಮಾ ಖ್ಯಾತಿಯ ನಟಿ ಮೇಘನಾರಾಜ್ ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ಬಳಿಕ ಅಭಿನಯಿಸುತ್ತಿರುವ ಚಿತ್ರವೇ ತತ್ಸಮ ತದ್ಭವ. ವಿಭಿನ್ನ ಟೈಟಲ್‌ನಿಂದಲೇ ಸ್ಯಾಂಡಲ್​​ವುಡ್‌ನಲ್ಲಿ ಟಾಕ್ ಆಗುತ್ತಿದ್ದ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಹಿರಿಯ ನಟ ಸುಂದರರಾಜ್ ಹಾಗೂ ಮತ್ತಿತರು ಇದ್ದರು.

ನಟಿ ಮೇಘನಾರಾಜ್ ಮಾತನಾಡಿ, ನಾನು ಸಿನಿಮಾದಲ್ಲಿ ನಟಿಸಬಾರದು ಎಂದು ನಿರ್ಧರಿಸಿದ್ದಾಗ ಬಂದ ಸಿನಿಮಾವಿದು. ಈ ಚಿತ್ರ ಆರಂಭವಾಗಲು ಕಾರಣ ನನ್ನ ಪತಿ ಚಿರು. ಅವರಿಗೆ ಪ್ರಜ್ವಲ್ ಹಾಗೂ ಪನ್ನಗ ಅವರೊಂದಿಗೆ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ಆ ನಂತರ ಪನ್ನಗಾಭರಣ ಕಥೆ ಹೇಳಲು ನಿರ್ದೇಶಕರನ್ನು ಮನೆಗೆ ಕಳುಹಿಸಿದರು. ಕಥೆ ಇಷ್ಟವಾಯಿತು. ಅಭಿನಯಿಸಿದ್ದೇನೆ. ಪನ್ನಗಾಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಅಭಿನಯಿಸಿದ್ದಾರೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸುತ್ತದೆ. ನಾನು ಈ ಚಿತ್ರ ಮಾಡಲು ಸಹಕಾರ ನೀಡಿದ ನನ್ನ ಎರಡೂ ಕುಟುಂಬಕ್ಕೆ ಧನ್ಯವಾದ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಹಾಗೂ ಧನಂಜಯ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು.

ಪ್ರಜ್ವಲ್ ದೇವರಾಜ್ ಮಾತನಾಡಿ, ನಾನು ಈವರೆಗೂ ಮಾಡದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ಬಹಳ ಇಷ್ಟಪಟ್ಟು ಮಾಡಿರುವ ಸಿನಿಮಾವಿದು. ಟ್ರೇಲರ್​ಗೆ ನಮ್ಮ ತಂದೆ ದೇವರಾಜ್ ಅವರು ಧ್ವನಿ ನೀಡಿದ್ದಾರೆ ಎಂದು ಹೇಳಿದರು.

ತತ್ಸಮ ತದ್ಭವ ಒಂದು ಕ್ರೈಮ್ ಥ್ರಿಲ್ಲರ್ ಚಿತ್ರ. ಆದರೆ ಮಾಮೂಲಿ ಕ್ರೈಮ್ ಥ್ರಿಲ್ಲರ್‌ಗಳಿಗಿಂತ ವಿಭಿನ್ನ. ನನ್ನ ಕಥೆ ಮೆಚ್ಚಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ, ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನಾನು ಆಭಾರಿ ಎಂದು ನಿರ್ದೇಶಕ ವಿಶಾಲ್ ಆತ್ರೇಯ ತಿಳಿಸಿದರು.

ನಿರ್ಮಾಪಕ ಪನ್ನಗಾಭರಣ ಮಾತನಾಡಿ, ನಾನು ಸಾಮಾನ್ಯವಾಗಿ ಭಾವುಕನಾಗುವುದಿಲ್ಲ. ಇಂದು ಏಕೋ ಗೊತ್ತಿಲ್ಲ ಸ್ವಲ್ಪ ಭಾವುಕನಾಗುತ್ತಿದ್ದೇನೆ. ನನಗೆ ನಿರ್ಮಾಪಕನಾಗಬೇಕೆಂದು ಇರಲಿಲ್ಲ. ನಿರ್ಮಾಪಕನಾದೆ. ನನ್ನೊಟ್ಟಿಗೆ ಕೆಲವು ಸ್ನೇಹಿತರು ಕೈ ಜೋಡಿಸಿದರು. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ, ನಮ್ಮ ಚಿತ್ರದ ಟಿಕೇಟ್ ಪಡೆದುಕೊಂಡವರು ಕೊನೆಯಲ್ಲಿ ಆ ಟಿಕೆಟ್​​ನಲ್ಲಿರುವ ಕ್ಯೂಆರ್ ಕೋಡ್​ ಸ್ಕ್ಯಾನ್ ಮಾಡಬೇಕು. ಆಗ ಗಿಫ್ಟ್ ಕೂಪನ್​ಗಳು ದೊರೆಯಲಿವೆ ಎಂದರು.

ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿದ್ದು, ಶ್ರೀನಿವಾಸ ರಾಮಯ್ಯ ಛಾಯಾಗ್ರಹಣವಿದೆ. ಈ ಚಿತ್ರದ ಬಗ್ಗೆ ಮಾತನಾಡಿದ ಕೆ.ಆರ್.ಜಿ ಸ್ಟುಡಿಯೋಸ್ ಯೋಗಿ ಜಿ. ರಾಜ್, ಸೆಪ್ಟೆಂಬರ್ 15 ಚಿತ್ರ ತೆರೆಗೆ ಬರ್ತಿದೆ. ರಾಜ್ಯಾದ್ಯಾಂತ ಸಿನಿಮಾ ಬಿಡುಗಡೆ ಮಾಡ್ತಿದ್ದೀವಿ ಎಂದರು.

ಇದನ್ನೂ ಓದಿ : ರಾಜ್​ ಬಿ ಶೆಟ್ಟಿ ಸಿನಿಮಾಗೆ ಪ್ರೇಕ್ಷಕರಿಂದ ಬಹುಪರಾಕ್​.. ಮೂರು ದಿನಗಳಲ್ಲಿ 'ಟೋಬಿ' ಗಳಿಸಿದ್ದಿಷ್ಟು...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.