ETV Bharat / entertainment

ನೈಜ ಘಟನೆ ಆಧಾರಿತ ತನುಜಾ ಟ್ರೈಲರ್​ ಬಿಡುಗಡೆ: ಮಾಜಿ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ನಟನೆ - ETV Bharath Kannada

ಕೋವಿಡ್​ ಕಾಲದ ನೈಜ ಘಟನೆ ಆಧರಿಸಿ ಸಿದ್ಧವಾಗಿರುವ ತನುಜಾ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ ಬಣ್ಣ ಹಚ್ಚಿದ್ದಾರೆ.

tanuja-movie-trailer-released
ನೈಜ ಘಟನೆ ಆಧರಿತ ತನುಜಾ ಟ್ರೈಲರ್​ ಬಿಡುಗಡೆ
author img

By

Published : Dec 7, 2022, 11:14 AM IST

ತನುಜಾ ಶೀರ್ಷಿಕೆಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಗಮನ‌‌ ಸೆಳೆಯುತ್ತಿರೋ ಚಿತ್ರ. ಇಡೀ ದೇಶವೇ ಕೊರೊನಾ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಮಯದಲ್ಲಿ ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆಯುತ್ತಾರೆ. ಆಕೆ ಪರೀಕ್ಷೆ ಬರೆಯಲು ಮುಖ್ಯ ಕಾರಣ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ಪತ್ರಕರ್ತರಾದ ವಿಶ್ವೇಶ್ವರ್ ಭಟ್ ಅವರು ಹಾಗೂ ಪ್ರದೀಪ್ ಈಶ್ವರ್. ಇವರೆಲ್ಲರ ಸಹಾಯದಿಂದ ತನುಜಾ ನೀಟ್ ಪರೀಕ್ಷೆ ಬರೆದು, ಇಂದು ಬೆಳಗಾವಿಯಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ಅಭ್ಯಾಸ ಮಾಡುತ್ತಿದ್ದಾರೆ.

tanuja-movie-trailer-released
ತನುಜಾ ಚಿತ್ರತಂಡ

ಈ ವಿಷಯವನ್ನಿಟ್ಟುಕೊಂಡು ಹರೀಶ್ ಎಂ ಡಿ ಹಳ್ಳಿ ಚಿತ್ರ ಮಾಡಿದ್ದಾರೆ. ಈ ಚಿತ್ರದ ಟ್ರೈಲರನ್ನು ವೈದ್ಯಕೀಯ ಸಚಿವರಾದ ಸುಧಾಕರ್ ಬಿಡುಗಡೆ ಮಾಡಿದರು. ಪತ್ರಕರ್ತ ವಿಶ್ವೇಶ್ವರ ಭಟ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

tanuja-movie-trailer-released
ವಿಶ್ವೇಶ್ವರ ಭಟ್

ಟ್ರೇಲರ್​ ಬಿಡುಗಡೆ ಮಾಡಿ ಮಾತನಾಡಿದ ಸುಧಾಕರ್​, ನಾನು ಸಮಾನ್ಯವಾಗಿ ಎಲ್ಲರ ಟ್ವಿಟ್ ಫಾಲೋ ಮಾಡುತ್ತಿರುತ್ತೇನೆ. ನನ್ನ ಆತ್ಮೀಯ ಸ್ನೇಹಿತರಾದ ವಿಶ್ವೇಶ್ವರ ಭಟ್ ಅವರು ತನುಜಾ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಟ್ವಿಟ್ ಮಾಡಿದ್ದನ್ನು ಗಮನಿಸಿ, ಆ ಹುಡುಗಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ನಮ್ಮ ನಾಯಕರೂ ಹಾಗೂ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಸಹಕಾರವಂತೂ ಅಪಾರ ಎಂದು ಸ್ಮರಿಸಿದರು.

  • " class="align-text-top noRightClick twitterSection" data="">

ವಿಶ್ವೇಶ್ವರ ಭಟ್ ಅವರು ನಿರ್ದೇಶಕ ಹರೀಶ್ ಅವರನ್ನು ಪರಿಚಯ ಮಾಡಿಸಿ, ತನುಜಾ ಕುರಿತಾದ ಸಿನಿಮಾ ಮಾಡುತ್ತಿದ್ದಾರೆ‌ ಎಂದರು. ಹರೀಶ್ ಅವರು ನೀವು ಸಹ ಸಚಿವರಾಗಿಯೇ ಇದರಲ್ಲಿ ಅಭಿನಯಿಸಬೇಕು ಎಂದು ಕೇಳಿಕೊಂಡರು. ಡಾಕ್ಟರ್ ಆಗಿರುವ ನನ್ನನ್ನು ಆ್ಯಕ್ಟರ್​ ಮಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆ ತನುಜಾ ಅಂದುಕೊಂಡಿದ್ದನ್ನು ಸಾಧಿಸಿ ವೈದ್ಯೆ ಆಗುತ್ತಿದ್ದಾಳೆ. ತನುಜಾ ಸಿನಿಮಾ ಕೂಡ ಯಶಸ್ವಿಯಾಗಲಿ ಎಂದು ಸಚಿವ ಸುಧಾಕರ್ ಹಾರೈಸಿದರು.

ನನ್ನ ಪರಿಚಯದವರೊಬ್ಬರಿಂದ ಕೋವಿಡ್ ಸಮಯದಲ್ಲಿ ತನುಜಾ ಪರೀಕ್ಷೆ ‌ಬರೆಯಲು ಮುಂದಾಗಿರುವ ವಿಷಯ ತಿಳಿಯಿತು. ತಕ್ಷಣ ನಾನು ಈ ವಿಷಯದ ಕುರಿತು ಟ್ವಿಟ್ ಮಾಡಿದೆ. ತನುಜಾ ತಾಯಿ ಸಹ ನನಗೆ ಫೋನ್ ಮಾಡಿ ಮಗಳು ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಕೇಳಿಕೊಂಡರು. ನನ್ನ ಟ್ವಿಟ್​ಗೆ ಕೊರೋನದಂತಹ ಕಷ್ಟ ಸಮಯದಲ್ಲಿ, ಅದರಲ್ಲೂ ಅವರೇ ಆರೋಗ್ಯ ಸಚಿವರಾಗಿ ಸಾಕಷ್ಟು ಒತ್ತಡವಿದ್ದರೂ ನನ್ನ ಮನವಿಗೆ ಸ್ಪಂದಿಸಿ ತನುಜಾ ನೀಟ್ ಪರೀಕ್ಷೆ ಬರೆಯಲು ಸುಧಾಕರ್ ಸಹಾಯ ಮಾಡಿದರು.

ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಆ ಹುಡುಗಿಗೆ ನಮ್ಮ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ನಾನು ಈ ಘಟನೆಯನ್ನು ಅಂಕಣದಲ್ಲಿ ಬರೆದುಕೊಂಡಿದ್ದೆ. ಅಂಕಣ ಓದಿದ್ದ ಹರೀಶ್ ಚಿತ್ರ ಮಾಡಲು ಮುಂದಾದರು. ಕಷ್ಟಪಟ್ಟು ನಿರ್ಮಾಪಕರನ್ನು ಹುಡುಕಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ವಿಶ್ವೇಶ್ವರ ಭಟ್ ಮನವಿ ಮಾಡಿದರು.

ಇನ್ನು, ತನುಜಾ ಪಾತ್ರದಲ್ಲಿ ಅಭಿನಯಿಸಿರುವ ಸಪ್ತ ಪಾವೂರ್ ಮಾತನಾಡಿ ತನುಜಾ‌ನಿಜಕ್ಕೂ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿ. ಆಕೆಯ ಪಾತ್ರ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದರು. ಇನ್ನು ಚಿತ್ರದಲ್ಲಿ ನಟ ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿ ನಿರ್ದೇಶನವಿದ್ದು, ಬಿಯಾಂಡ್​ ವಿಷನ್​ ಸಿನಿಮಾಸ್​ (Beyond Visions Cinemas) ಬಂಡವಾಳ ಹೂಡಿದೆ. ಚಿತ್ರವು ಶಿವಮೊಗ್ಗ ಸುತ್ತಮತ್ತ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. ರಘುನಂದನ್ ಎಸ್ ಕೆ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್. ಟಿ ಅವರ ಛಾಯಾಗ್ರಹಣವಿದೆ. ಉಮೇಶ್ ಆರ್.ಬಿ.ಸಂಕಲನವಿದ್ದು, ಆರ್.ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ.ಪ್ರಹ್ಲಾದ್ ಸಂಭಾಷಣೆ ಬರೆದಿದ್ದಾರೆ. ಚಂದ್ರಶೇಖರ್ ಗೌಡ, ಮನೋಜ್ ಬಿ.ಜಿ ಈ‌ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ತನುಜಾ ತಾಯಿ ಹಿರಿಯಮ್ಮ ಅವರು ಸಮಾರಂಭಕ್ಕೆ ಆಗಮಿಸಿ, ಮಗಳು ಪರೀಕ್ಷೆ ಬರೆಯಲು ಸಹಕಾರ ನೀಡಿದ್ದ ಸಕಲರಿಗೂ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಸಿಎಂ ಆಗಿ ಕನ್ನಡ ಚಿತ್ರರಂಗಕ್ಕೆ ಯಡಿಯೂರಪ್ಪ ಎಂಟ್ರಿ: ಯಾವ ಚಿತ್ರ, ಕಥೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.