ನಟಿ ತಮನ್ನಾ ಭಾಟಿಯಾ ಅಂತಿಮವಾಗಿ ನಟ ವಿಜಯ್ ವರ್ಮಾ ಅವರ ಜೊತೆಗಿನ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಗೋವಾದಲ್ಲಿ ನಡೆದ ನ್ಯೂ ಇಯರ್ ಪಾರ್ಟಿ ವೇಳೆ ಇಬ್ಬರೂ ಚುಂಬಿಸಿರುವ ವಿಡಿಯೋ ವೈರಲ್ ಆದ ಹಿನ್ನೆಲೆ ಡೇಟಿಂಗ್ ವದಂತಿ ಹಬ್ಬಿತು. ತಮ್ಮ ಸಂಬಂಧದ ಬಗ್ಗೆ ಮೌನವಾಗಿರಲು ನಿರ್ಧರಿಸಿದ್ದರೂ ಸಹ, ಮುಂಬೈನಲ್ಲಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡರು. ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಲವ್ ಬರ್ಡ್ಸ್ನಂತೆ ಸೆರೆಯಾದರು.
ಇತ್ತೀಚೆಗೆ, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನಟಿ ತಮನ್ನಾ ಭಾಟಿಯಾ, 'ನಮ್ಮ ನಡುವಿನ ಎಲ್ಲವೂ' ನೆಟ್ಫ್ಲಿಕ್ಸ್ನ 'ಲಸ್ಟ್ ಸ್ಟೋರೀಸ್ 2'ರ ಸೆಟ್‌ನಲ್ಲಿ ಪ್ರಾರಂಭವಾಯಿತು ಎಂದು ಒಪ್ಪಿಕೊಂಡರು. ವಿಜಯ್ ಅವರು ನಾನು ಬಹಳ ಕಾಳಜಿ ವಹಿಸುವ ವ್ಯಕ್ತಿ ಮತ್ತು ಅವರು ನನ್ನ 'ಸಂತೋಷದ ಸ್ಥಳ' ಎಂದು ಉಲ್ಲೇಖಿಸಿದರು.
ಸಂದರ್ಶನದಲ್ಲಿ ವಿಜಯ್ ಬಗ್ಗೆ ಮಾತನಾಡಿದ ತಮನ್ನಾ, "ನಿಮ್ಮ ಸಹನಟ ಎಂಬ ಕಾರಣಕ್ಕೆ ನೀವು ಅವರಿಗೆ ಆಕರ್ಷಿತರಾಗಬಹುದು ಎಂದು ನಾನು ಭಾವಿಸುವುದಿಲ್ಲ. ನಾನು ಅನೇಕ ನಟರೊಂದಿಗೆ ಕೆಲಸ ಮಾಡಿದ್ದೇನೆ" ಎಂದು ಹೇಳಿದರು. 'ಯಾರನ್ನಾದರೂ ಪ್ರೀತಿಸುವುದು ಅಥವಾ ಅವರ ಬಗ್ಗೆ ವಿಶೇಷ ಭಾವನೆಗಳನ್ನು ಹೊಂದುವುದು ತೀರಾ ವೈಯಕ್ತಿಕ ವಿಚಾರ. ಅವರ ವೃತ್ತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಪ್ರಕಾರ ಪ್ರೀತಿ ಹುಟ್ಟಿಕೊಳ್ಳಲು ವೃತ್ತಿ ಕಾರಣವಲ್ಲ' ಎಂದು ಹೇಳಿದರು. ವಿಜಯ್ ಅವರು ಪ್ರಾಮಾಣಿಕ ವ್ಯಕ್ತಿ ಎಂದು ಕೂಡ ಸಮರ್ಥಿಸಿಕೊಂಡರು.
ಉನ್ನತ ಸಾಧನೆ ಮಾಡುವ ಮಹಿಳೆಯರು ಎಲ್ಲದಕ್ಕೂ ಕಷ್ಟಪಟ್ಟು ಕೆಲಸ ಮಾಡಬೇಕು ಎಂದೇನಿಲ್ಲ. ಏನಾದರೂ ತುಂಬಾ ಸರಳ ಎನಿಸಿದಾಗ ಮತ್ತು ನೀವು ಕೇವಲ ನೀವೇ ಆಗಿರಲು ಕಠಿಣ ಮಾರ್ಗದಲ್ಲಿ ನಡೆಯಬೇಕಾಗಿಲ್ಲ. ಮಹಿಳೆ ತನ್ನ ಸಂಪೂರ್ಣ ಜೀವನವನ್ನು ತನ್ನ ಸಂಗಾತಿಗಾಗಿ ಬದಲಾಯಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಆದರೆ ನಾನು ನನಗಾಗಿ ಜಗತ್ತನ್ನು ಸೃಷ್ಟಿಸಿಕೊಂಡೆ ಮತ್ತು ಇಲ್ಲಿ ನಾನು ಏನನ್ನೂ ಮಾಡದೆಯೇ ಆ ಜಗತ್ತನ್ನು ನಿಜವಾಗಿಯೂ ಅರ್ಥಮಾಡಿಕೊಂಡ ವ್ಯಕ್ತಿ ಇದ್ದಾರೆ. ಅವರೇ ನಾನು ಆಳವಾಗಿ ಕಾಳಜಿ ವಹಿಸುವ ವ್ಯಕ್ತಿ. ಹೌದು, ಅವರು 'ನನ್ನ ಸಂತೋಷದ ಸ್ಥಳ" ಎಂದು ಹೇಳಿದಳು.
ಇದನ್ನೂ ಓದಿ: Adipurush: 24 ಗಂಟೆಯಲ್ಲಿ 36 ಸಾವಿರ 'ಆದಿಪುರುಷ್' ಟಿಕೆಟ್ಗಳ ಮಾರಾಟ.. ಆರ್ಆರ್ಆರ್, ಪಠಾಣ್ ದಾಖಲೆಗಳು ಉಡೀಸ್!
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಮುಂದೆ ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಅಮಿತ್ ರವೀಂದ್ರನಾಥ್ ಶರ್ಮಾ, ಕೊಂಕಣ ಸೇನ್ಶರ್ಮಾ, ಆರ್ ಬಾಲ್ಕಿ ಮತ್ತು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. ಜೂನ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.
ಇದನ್ನೂ ಓದಿ: Weekend with Ramesh: ಡಿಕೆಶಿ ಬದುಕಿನ ಅನಾವರಣದೊಂದಿಗೆ ಮುಕ್ತಾಯಗೊಂಡ ಸಾಧಕರ ಶೋ 'ವೀಕೆಂಡ್ ವಿತ್ ರಮೇಶ್'
ಗೋವಾದಲ್ಲಿ 2023 ಹೊಸ ವರ್ಷಾಚರಣೆ ವೇಳೆ ತಮನ್ನಾ ಮತ್ತು ವಿಜಯ್ ಚುಂಬಿಸಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಸದ್ದು ಮಾಡಿತು. ಬಳಿಕ ರೆಸ್ಟೋರೆಂಟ್, ಈವೆಂಟ್ ಎಂದು ಒಟ್ಟೊಟ್ಟಿಗೆ ಕಾಣಿಸಿಕೊಂಡು ಡೇಟಿಂಗ್ ವದಂತಿಗೆ ತುಪ್ಪ ಸುರಿದಿದ್ದರು. ಇದೀಗ ಅಂತಿಮವಾಗಿ ವಿಜಯ್ ವರ್ಮಾ ಅವರ ಜೊತೆಗಿನ ತಮ್ಮ ಸಂಬಂಧವನ್ನು ನಟಿ ತಮನ್ನಾ ಭಾಟಿಯಾ ಖಚಿತಪಡಿಸಿದ್ದಾರೆ.