ಹೈದರಾಬಾದ್: ಹೊಸ ವರ್ಷಾಚರಣೆ ನಿಮಿತ್ತ ಗೋವಾಗೆ ತೆರಳಿದ್ದ ಖ್ಯಾತ ನಟಿ ತಮನ್ನಾ ಭಾಟಿಯಾ ಅಲ್ಲಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹತ್ತು ಹಲವು ಸುಂದರ ಹಾಗೂ ಮನಮೋಹ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹಂಚಿಕೊಂಡ ಫೋಟೋಗಳಲ್ಲಿ ನಟ ಹಾಗೂ ಸ್ನೇಹಿತ ವಿಜಯ್ ವರ್ಮಾ ಕಾಣದಿರುವ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ 'ವಿಜಯ್ ವರ್ಮಾ ಎಲ್ಲಿದ್ದಾರೆ'?, ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಳ್ಳಬಹುದಲ್ಲ ಎಂದು ಪ್ರಶ್ನೆ ಮಾಡಲಾಂಭಿಸಿದ್ದಾರೆ. ಆದರೆ, ನಟಿ ತಮನ್ನಾ ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
- " class="align-text-top noRightClick twitterSection" data="
">
ಲಿಪ್ - ಲಾಕ್ ವಿಡಿಯೋ: ತಮನ್ನಾ ಹೊಸ ವರ್ಷ ಆಚರಣೆಗೆ ಗೋವಾಗೆ ತೆರಳಿದ್ದಾಗ ನಟ ವಿಜಯ್ ವರ್ಮಾ ಜೊತೆ ಕಾಲ ಕಳೆದಿದ್ದರು. ಅಲ್ಲದೇ ಇಬ್ಬರೂ ಕಿಸ್ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅಂದಿನಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಖಚಿತವಾಗಿತ್ತು. ಈಗ ನಟಿ ತಮನ್ನಾ ಅವರು ಗೋವಾದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಹಂಚಿಕೊಂಡಿದ್ದಾರೆ. ಸದ್ಯ ಹಂಚಿಕೊಂಡಿರುವ ಫೋಟೋಗಳಲ್ಲಿ ವಿಜಯ್ ವರ್ಮಾ ಕಾಣದಿರುವ ಬಗ್ಗೆ ನೆಟಿಜನ್ಗಳು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿರುವ ಫೋಟೋಗಳು: ಅಭಿಮಾನಿಗಳನ್ನು ಇನ್ಸ್ಟಾಗ್ರಾಮ್ಗೆ ಕರೆದುಕೊಂಡು ಹೋಗಿರುವ ತಾರೆ ತಮನ್ನಾ, ತಮ್ಮ ಫ್ಯಾಷನ್ ಪ್ರಪಂಚವನ್ನೇ ತೆರೆದಿಟ್ಟಿದ್ದಾರೆ. ಬೀಚ್‌ನಲ್ಲಿ ಓಡಾಡುತ್ತಿರುವ ಫೋಟೋ, ಹೋಟೆಲ್ನಲ್ಲಿ ಉಳಿದುಕೊಂಡಿರುವ ಫೋಟೋ, ಸಂಗೀತ ಕೇಳುತ್ತಿರುವುದು, ಸಮುದ್ರದ ತೆರೆಗಳ ಜೊತೆ ಎಂಜಾಯ್ ಮಾಡುತ್ತಿರುವುದು, ಹಸಿ ಮೀನು ತಿನ್ನುವುದು ಸೇರಿದಂತೆ ಹಲವು ಫೋಟೋಗಳನ್ನು ಕಾಣಬಹುದು. ತಾರೆಯ ಈ ಮಿನಿ ಪ್ರವಾಸ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಅಭಿಮಾನಿಗಳ ಪ್ರಶ್ನೆಗಳು: ಬೀಚ್ನಲ್ಲಿರುವ ಫೋಟೋ, ಹೋಟೆಲ್ನಲ್ಲಿ ಊಟ ಮಾಡುತ್ತಿರುವ ಫೋಟೋಗಳನ್ನು ಯಾರು ಕ್ಲಿಕ್ಕಿಸಿದ್ದು ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ನಿಮ್ಮ ಫೋಟೋಗಳನ್ನು ವಿಜಯ್ ವರ್ಮಾ ಕ್ಲಿಕ್ಕಿಸಿದ್ದು ಅಂತ ಗೊತ್ತು. ಹಾಗಾಗಿ ಈ ಕ್ರೆಡಿಟ್ ಅವರಿಗೆ ಕೊಡಿ ಎಂದು ಸಲಹೆ ಸಹ ನೀಡಿದ್ದಾರೆ. ಇನ್ನು ಕೆಲವರು ಈ ತಾರಾ ಜೋಡಿ ಬಗ್ಗೆ ಬಗೆ ಬಗೆಯಾಗಿ ಕಾಮೆಂಟ್ ಮಾಡುವ ಮೂಲಕ ಹಾಡಿ ಹೊಗಳಿದ್ದಾರೆ. ಎಲ್ಲಾ ಚೆನ್ನಾಗಿದೆ. ಆದರೆ, ವಿಜಯ್ ವರ್ಮಾ ಎಲ್ಲಿದ್ದಾರೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ವಿಜಯ್ ವರ್ಮಾ ಅವರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಿ. ಜೋಡಿ ಚೆನ್ನಾಗಿ ಕಾಣುತ್ತದೆ ಎಂದು ಸಹ ಕೇಳಿಕೊಂಡಿದ್ದಾರೆ.
ಡೇಟಿಂಗ್ ವದಂತಿ: ಇಷ್ಟು ದಿನಗಳ ಕಾಲ ಸಿಂಗಲ್ ಆಗಿದ್ದ ತಮನ್ನಾ ಇದೇ ಮೊದಲ ಬಾರಿಗೆ ವಿಜಯ್ ವರ್ಮಾ ಜೊತೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸದ್ಯ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತಮನ್ನಾ ಆಗಲಿ ಅಥವಾ ವರ್ಮಾ ಹೇಳಿಕೆ ನೀಡಿಲ್ಲ. ಸದ್ಯ ಅವರ ಡೇಟಿಂಗ್ ಮಾಡುವ ವಿಚಾರ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶುಕ್ರವಾರ ಇಬ್ಬರೂ ಮುಂಬೈ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದನ್ನು ಗಮನಿಸಬಹುದು.
ಲಸ್ಟ್ ಸ್ಟೋರಿಸ್: ‘ಲಸ್ಟ್ ಸ್ಟೋರಿಸ್ 2’ ಎಂಬ ಚಿತ್ರದಲ್ಲಿ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಇಬ್ಬರೂ ಒಟ್ಟಾಗಿ ನಟಿಸಿದ್ದು ಸದ್ಯ ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾದ ಸೆಟ್ನಲ್ಲಿಯೇ ಇಬ್ಬರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗಿದೆ. ಈ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.