ETV Bharat / entertainment

ಈ ವಿಚಾರ ಅಗತ್ಯವೆಂದು ನಾನು ಭಾವಿಸುವುದಿಲ್ಲ: ಡೇಟಿಂಗ್​ ವದಂತಿಗೆ ತಮನ್ನಾ ಭಾಟಿಯಾ ಪ್ರತಿಕ್ರಿಯೆ - Vijay Varma

ವಿಜಯ್​ ವರ್ಮಾ ಜೊತೆ ಡೇಟಿಂಗ್ ವಿಚಾರವಾಗಿ ತಮನ್ನಾ ಭಾಟಿಯಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Tamannaah Bhatia Vijay Varma dating rumors
ತಮನ್ನಾ ಭಾಟಿಯಾ ವಿಜಯ್​ ವರ್ಮಾ ಡೇಟಿಂಗ್ ವದಂತಿ
author img

By

Published : Mar 12, 2023, 7:46 PM IST

ಬಹುಭಾಷೆಗಳಲ್ಲಿ ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್​ ವರ್ಮಾ ಡೇಟಿಂಗ್​ ಗುಸುಗುಸು ಮುಂದುವರಿದಿದೆ. ಗೋವಾದಲ್ಲಿ ನಡೆದ ನ್ಯೂ ಇಯರ್ ಪಾರ್ಟಿ ವೇಳೆ ನಟ ವಿಜಯ್​ ವರ್ಮಾರಿಗೆ ತಮನ್ನಾ ಕಿಸ್​ ಮಾಡಿದ್ದ ವಿಡಿಯೋ ವೈರಲ್​ ಆಗಿ ಸುದ್ದಿ ಮಾಡಿತ್ತು. ಆಗ ಕೆಲ ದಿನಗಳ ಕಾಲ ಮಾಧ್ಯಮಗಳಲ್ಲಿ ನಟಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿರಲಿಲ್ಲ. ನಂತರ ಒಟ್ಟಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ಗಾಸಿಪ್​ಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ತಮನ್ನಾ ಭಾಟಿಯಾ ವಿಜಯ್​ ವರ್ಮಾ ಡೇಟಿಂಗ್ ವದಂತಿ: ತಮನ್ನಾ ಮತ್ತು ವಿಜಯ್ ಲಸ್ಟ್ ಸ್ಟೋರೀಸ್ 2 ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಡೇಟಿಂಗ್​ ಆರಂಭವಾದದ್ದು ಈ ಸಿನಿಮಾ ಶೂಟಿಂಗ್​​ ನಂತರವೇ ಎಂದು ಹೇಳಲಾಗ್ತಿದೆ. ಆದ್ರೆ ಡೇಟಿಂಗ್ ವದಂತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಈವರೆಗೂ ನೀಡಿಲ್ಲ. ಇತ್ತೀಚೆಗೆ ನಟಿ ತಮನ್ನಾ ಭಾಟಿಯಾ ಅವರಲ್ಲಿ ಬಗ್ಗೆ ಕೇಳಿದಾಗ, ಸ್ಟೀರಿಯೊಟಿಪಿಕಲ್ ಉತ್ತರವನ್ನು ಆಯ್ದುಕೊಂಡಿದ್ದಾರೆ.

ತಮನ್ನಾ ಭಾಟಿಯಾ ವಿಜಯ್​ ವರ್ಮಾ ಕಿಸ್: ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿ ವೇಳೆ ಅವರ ಚುಂಬನದ ವಿಡಿಯೋ ವೈರಲ್​ ಆದಾಗಿನಿಂದ ಜೋಡಿಯ ಡೇಟಿಂಗ್​ ವದಂತಿ ಮುಂದುವರೆದಿದೆ. ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುವುದರಿಂದ ಹಿಡಿದು ವಿಜಯ್ ಅವರ ಪ್ರೇಮಿಗಳ ದಿನದ ಪೋಸ್ಟ್‌ವರೆಗೆ ಬಂದು ನಿಂತಿದೆ. ಡೇಟಿಂಗ್ ವಿಚಾರದ ಸುತ್ತಲಿನ ಅಂತೆ ಕಂತೆಗಳು ಬಲವಾಗಿ ಬೆಳೆಯುತ್ತಿದೆ. ಆದರೆ ಬಾಹುಬಲಿ ಸ್ಟಾರ್ ತಮನ್ನಾ ಪ್ರೀತಿಯಲ್ಲಿ ಇರುವ ವಿಚಾರವನ್ನು ನಿರಾಕರಿಸಿದ್ದಾರೆ.

ಇದು ಅಗತ್ಯ ವಿಚಾರವಲ್ಲ: ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ವೇಳೆ ವಿಜಯ್ ಅವರೊಂದಿಗೆ ಡೇಟಿಂಗ್ ಕುರಿತು ತಮನ್ನಾರಲ್ಲಿ ಪ್ರಶ್ನಿಸಿದಾಗ, ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದೇವೆ, ವದಂತಿಗಳನ್ನು ನಿರಾಕರಿಸುವಲ್ಲಿ ತೊಡಗುವುದಿಲ್ಲ, ಏಕೆಂದರೆ ಈ ವಿಚಾರ ಅಗತ್ಯ ಎಂದು ನಾನು ಭಾವಿಸುವುದಿಲ್ಲ ಎಂದು ಉತ್ತರಿಸಿದ್ದಾರೆ.

ಮದುವೆ ವಿಚಾರದಲ್ಲೇಕೆ ಆಸಕ್ತಿ? ವೈದ್ಯರು ಅಥವಾ ಉದ್ಯಮಿಯೊಂದಿಗೆ ತನ್ನ ವಿವಾಹದ ವರದಿಗಳು ಆಗೊಮ್ಮೆ ಈಗೊಮ್ಮೆ ನೋಡಿದ್ದೆ. ತನ್ನ ಮದುವೆ ವಿಚಾರದಲ್ಲಿ ಜನರು ಏಕೆ ಆಸಕ್ತಿ ವಹಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲಳಾಗಿದ್ದೇನೆ ಎಂದು ನಟಿ ತಮನ್ನಾ ಭಾಟಿಯಾ ಹೇಳಿದರು.

ಇದನ್ನೂ ಓದಿ: ಅಮೆರಿಕದ ಅಭಿಮಾನಿಗಳೊಂದಿಗೆ ಭಾರತೀಯ ಶ್ರೇಷ್ಠ ನಟ ರಾಮ್​ಚರಣ್​​

ಪ್ರೇಮಿಗಳ ದಿನದಂದು ವಿಜಯ್ ವರ್ಮಾ ಅವರ ಪೋಸ್ಟ್ ಸದ್ದು ಮಾಡಿತ್ತು. ಅಂದಿನ ಪೋಸ್ಟ್‌ನಲ್ಲಿ ಒಂದು ಬದಿಯಲ್ಲಿ ವಿಜಯ್ ಕಾಲು ಮತ್ತು ಇನ್ನೊಂದು ಬದಿಯಲ್ಲಿ ತಮನ್ನಾರ ಕಾಲು ಹಾಗೂ ರೆಡ್​ ಹಾರ್ಟ್ ಎಮೋಜಿ ಇತ್ತು. ಈ ಪೋಸ್ಟ್ ಬಳಿಕ ಡೇಟಿಂಗ್​​ ಗುಸುಗುಸು ಕೊಂಚ ಜೋರಾಗಿಯೇ ಇದೆ.

ಇದನ್ನೂ ಓದಿ: 'ಮಾಹಿತಿಯಿಲ್ಲದೇ ಮಾತನಾಡಬಾರದು': ಮಿಥುನ್ ರೈಗೆ ಪರೋಕ್ಷ ಟಾಂಗ್​ ಕೊಟ್ಟ ರಕ್ಷಿತ್​ ಶೆಟ್ಟಿ

33 ವರ್ಷದ ನಟಿ ಇತ್ತೀಚೆಗಷ್ಟೇ ಮನೋರಂಜನಾ ಕ್ಷೇತ್ರದಲ್ಲಿ 18 ವರ್ಷಗಳನ್ನು ಪೂರೈಸಿದ್ದಾರೆ. ಸೂಪರ್​ ಸ್ಟಾರ್​​ ರಜನಿಕಾಂತ್ ಅವರ ಮುಂಬರುವ ಚಿತ್ರ ಜೈಲರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ವಿಜಯ್​ ವರ್ಮಾ ಜೊತೆಗೆ ನಿರ್ದೇಶಕ ಸುಜೋಯ್​ ಘೋಷ್ ಅವರ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.