ಕನ್ನಡ ಚಿತ್ರರಂಗಕ್ಕೆ ಹೊಸ ಕಲಾವಿದರ ಆಗಮನ ಹೊಸತೇನಲ್ಲ. ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿಯಾದ ಮನೋಜ್ ಅಭಿನಯಿಸಿರುವ ಟಕ್ಕರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸೈಬರ್ ಕ್ರೈಮ್ ಕಥೆ ಒಳಗೊಂಡಿರುವ ಸಿನೆಮಾ ಕೊರೊನಾದಿಂದಾಗಿ ಈ ಹಿಂದೆ ಬಿಡುಗಡೆಯಾಗಿರಲಿಲ್ಲ. ಸದ್ಯ ಮೇ 6 ರಂದು ಟಕ್ಕರ್ ಸಿನೆಮಾ ಬಿಡುಗಡೆಗೊಳ್ಳುತ್ತಿರುವುದಾಗಿ ಚಿತ್ರತಂಡ ಹೇಳಿದೆ.
ಟಕ್ಕರ್ ಸಿನೆಮಾ ಒಂದು ವಿನೂತನ ಪ್ರಯತ್ನವಾಗಿದ್ದು, ಮುಖ್ಯಭೂಮಿಕೆಯಲ್ಲಿ ನಟ ಮನೋಜ್,ನಟಿ ರಂಜಿನಿ ರಾಘವನ್, ನಟ ಭಜರಂಗಿ ಲೋಕಿ ನಟಿಸಿದ್ದಾರೆ. ಸಿನೆಮಾವನ್ನು ರನ್ ಆಂಟೋನಿ ಸಿನಿಮಾ ನಿರ್ದೇಶಿಸಿರುವ ರಘು ಶಾಸ್ತ್ರೀ ನಿರ್ದೇಶನ ಮಾಡಿದ್ದಾರೆ. ನಾಗೇಶ್ ಕೋಗಿಲು ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ.
ಸಿನೆಮಾದ ಆಡಿಯೋ ಲಾಂಚ್ ಬಳಿಕ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ನಾಗೇಶ್ ಮಾತನಾಡಿ, ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ, ಮೊಬೈಲ್ ನಿಂದಾಗಿ ಏನೆಲ್ಲ ತೊಂದರೆ ಆಗುತ್ತದೆ ಎಂಬುದನ್ನು ಸಿನೆಮಾ ಒಳಗೊಂಡಿದೆ ಎಂದು ಹೇಳಿದರು. ಬಳಿಕ ಮಾತನಾಡಿದ ನಾಯಕ ನಟ ಮನೋಜ್, ಈ ಸಿನಿಮಾವನ್ನು ಒಟಿಟಿಗೆ ನೀಡುವಂತೆ ಸಾಕಷ್ಟು ಜನ ಕೇಳಿದರು. ಆದರೆ, ನಮ್ಮ ನಿರ್ಮಾಪಕರು ಚಿತ್ರಮಂದಿರದಲ್ಲೇ ಇದನ್ನು ಬಿಡುಗಡೆ ಮಾಡಬೇಕೆಂದು ಹೇಳಿ, ಚಿತ್ರ ಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ನಾನು ಈ ಸಿನಿಮಾದಲ್ಲಿ ಸೈಬರ್ ಕ್ರೈಮ್ ವಿರುದ್ಧ ಹೇಗೆ ಹೋರಾಡುವ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿದ್ದಾರೆ.
ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸಿನೆಮಾದ ಸಾಹಸ ನಿರ್ದೇಶನವನ್ನು ಮಾಡಿದ್ದಾರೆ. ಮಣಿಕಾಂತ್ ಕದ್ರಿ ಅವರು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು, ಡಾ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಿದ್ದಾರೆ. ಸಿನೆಮಾದಲ್ಲಿ ಸುಮಿತ್ರಮ್ಮ, ಸಾಧು ಕೋಕಿಲ, ಲಕ್ಷ್ಮಣ್ ಶಿವಶಂಕರ್, ಅಶ್ವಿನಿ ಹಾಸನ್, ಶಂಕರ್ ಅಶ್ವಥ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಸದ್ಯ ಸೈಬರ್ ಕ್ರೈಮ್ ಕಥೆ ಆಧರಿಸಿರೋ ಟಕ್ಕರ್ ಮೇ 6 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಓದಿ : 75ನೇ ಕೇನ್ಸ್ ಚಲನಚಿತ್ರೋತ್ಸವ: ತೀರ್ಪುಗಾರರಾಗಿ ಭಾರತ ಪ್ರತಿನಿಧಿಸಲಿರುವ ದೀಪಿಕಾ ಪಡುಕೋಣೆ