ETV Bharat / entertainment

'ಟಗರು ಪಲ್ಯ'ದ ಎರಡನೇ ಹಾಡು ಬಿಡುಗಡೆ: 'ಸೂರ್ಯಕಾಂತಿ ನಾನು..' ಎಂದು ಕುಣಿದ ಅಮೃತಾ ಪ್ರೇಮ್​ - ಈಟಿವಿ ಭಾರತ ಕನ್ನಡ

Tagaru Palya movie song released: ಟಗರು ಪಲ್ಯ ಸಿನಿಮಾದ 'ಸೂರ್ಯಕಾಂತಿ ನಾನು..' ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ.

Tagaru palya movie second song released
'ಟಗರು ಪಲ್ಯ'ದ ಎರಡನೇ ಹಾಡು ಬಿಡುಗಡೆ: 'ಸೂರ್ಯಕಾಂತಿ'ಯಾಗಿ ಕುಣಿದ ಅಮೃತಾ ಪ್ರೇಮ್​
author img

By ETV Bharat Karnataka Team

Published : Sep 14, 2023, 10:40 PM IST

ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ್​​ ಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಕೊಡುವ ಮೂಲಕ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದಾರೆ. ಡಾಲಿ ಕೇವಲ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಚಲನಚಿತ್ರ ನಿರ್ಮಾಣ ಸಂಸ್ಥೆಯ ಹೆಸರು 'ಡಾಲಿ ಪಿಕ್ಷರ್ಸ್'. ಈ ತಂಡದ ಮೂರನೇ ಪ್ರಯತ್ನವೇ 'ಟಗರು ಪಲ್ಯ'. ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಈ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

ಈಗಾಗಲೇ ರಿಲೀಸ್ ಆಗಿರುವ ಟೈಟಲ್ ಟ್ರ್ಯಾಕ್​ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಚಿತ್ರತಂಡ 'ಸೂರ್ಯಕಾಂತಿ ನಾನು..' ಎಂಬ ಮೆಲೋಡಿ ಹಾಡನ್ನು ಅನಾವರಣಗೊಳಿಸಿದೆ. ಸ್ವತಃ ಧನಂಜಯ್ ಅವರೇ ಕ್ಯಾಚಿ‌ ಪದಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಕಂಠ ಸಿರಿಯಲ್ಲಿ ಹಾಡು ಮೂಡಿಬಂದಿದೆ. ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಹಾಡಿಗೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೆಜ್ಜೆ ಹಾಕಿದ್ದಾರೆ.

ಉಮೇಶ್​​ ಕೆ. ಕೃಪ ಆ್ಯಕ್ಷನ್​ ಕಟ್​ ಹೇಳಿರುವ 'ಟಗರು ಪಲ್ಯ'ಗೆ ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ನಾಗಭೂಷಣ್​ ನಾಯಕನಾಗಿದ್ದಾರೆ. ಅಮೃತಾ ಪ್ರೇಮ್​ ನಾಯಕಿಯಾಗಿದ್ದಾರೆ. ಕಳೆದ ಡಿಸೆಂಬರ್​​ನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಇತ್ತೀಚೆಗಷ್ಟೇ ಶೂಟಿಂಗ್​ ಪೂರ್ಣಗೊಳಿಸಿತ್ತು. ಬಿಡುಗಡೆಗೆ ತಯಾರಿ ಆರಂಭಗೊಂಡಿದ್ದು, ಸಿನಿಮಾ ಪ್ರಮೋಶನ್​​ ಕೂಡ ಶುರುವಾಗಿದೆ. ಅದರ ಒಂದು ಭಾಗವಾಗಿ ಸಿನಿಮಾದ ಟೈಟಲ್​ ಟ್ರ್ಯಾಕ್​ ಅನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಸದ್ಯ ಈ ಹಾಡು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡಿಂಗ್​ ಆಗಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಶೂಟಿಂಗ್​ ಕಂಪ್ಲೀಟ್​​

'ಟಗರು ಪಲ್ಯ' ಟೈಟಲ್​ ಟ್ರ್ಯಾಕ್: 'ಟಗರು ಪಲ್ಯ' ಚಿತ್ರದ ಟೈಟಲ್​ ಟ್ರ್ಯಾಕ್​ ಅನ್ನು ಕೆಲವು ದಿನಗಳ ಹಿಂದೆ ನಾಗಭೂಷಣ್​ ಅವರ ಬರ್ತ್​ಡೇ ಸಲುವಾಗಿ ಚಿತ್ರತಂಡ ಬಿಡುಗಡೆಗೊಳಿಸಿತ್ತು. ಈ ಹಾಡಿಗೆ ಧನಂಜಯ್​ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್​ ಸಂಗೀತ ನೀಡಿದ್ದಾರೆ. ಹೆಸರಾಂತ ಗಾಯಕ ವಿಜಯ್​ ಪ್ರಕಾಶ್​ ಧ್ವನಿಯಾಗಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ: ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ 'ಟಗರು ಪಲ್ಯ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್.ಕೆ.ರಾವ್ ಕ್ಯಾಮರಾ ಹಿಡಿದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಡಾಲಿ ಧನಂಜಯ್​ ಬ್ಯಾನರ್ ಸಿನಿಮಾಗೆ ನೆನಪಿರಲಿ ಪ್ರೇಮ್​ ಮಗಳು ನಟಿ: ಹಳ್ಳಿ ಹುಡುಗಿ ಪಾತ್ರದಲ್ಲಿ ಅಮೃತಾ ಮಿಂಚಿಂಗ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.