ನವದೆಹಲಿ: ನವದಂಪತಿಗಳಾದ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಗಾಗಿ ಮಾರ್ಚ್ 16 ರಂದು ದೆಹಲಿಯಲ್ಲಿ ಆರತಕ್ಷತೆ ಸಮಾರಂಭ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಚಿತ್ರರಂಗದವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕೆಲ ದಿನಗಳ ಹಿಂದೆ ನಟಿ ಸ್ವರಾ ಭಾಸ್ಕರ್ ಮತ್ತು ರಾಜಕೀಯ ಮುಖಂಡ ಫಹಾದ್ ಅಹ್ಮದ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆಗ ಅದ್ಧೂರಿ ಮದುವೆ ಆಗುವುದಾಗಿ ಹೇಳಿದ್ದರಂತೆ, ಅದರಂತೆ ಈ ವಾರ ತಮ್ಮ ವಿವಾಹ ಶಾಸ್ತ್ರಗಳೆಲ್ಲವನ್ನೂ ಆಚರಿಸಿದ್ದಾರೆ. ಸಂಗೀತ, ಮೆಹೆಂದಿ ಮತ್ತು ಹಳದಿ ಸಮಾರಂಭಗಳ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ರಾಜಕೀಯ ನಾಯಕರು ಭಾಗಿ: ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಶಶಿ ತರೂರ್, ಪ್ರಕಾಶ್ ಕಾರತ್, ವೃಂದಾ ಕಾರತ್, ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ರಾಜಕೀಯ ನಾಯಕರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಹಿರಿಯ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಕೂಡ ಈ ಪಾರ್ಟಿಯಲ್ಲಿ ಕಾಣಿಸಿಕೊಂಡರು.
![Swara Bhaskar Fahad Ahmad reception](https://etvbharatimages.akamaized.net/etvbharat/prod-images/18013253_tasdewef.jpg)
ಗುರುವಾರ ನಡೆದ ಈ ಸಮಾರಂಭಕ್ಕೆ ದಂಪತಿ ಪರಸ್ಪರರ ಕೈಗಳನ್ನು ಹಿಡಿದು ಪ್ರವೇಶಿಸಿದರು. ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದ ಸ್ವರಾ ಭಾಸ್ಕರ್ ತಮ್ಮ ಮಾಂಗಲ್ಯ ಸರ ಮತ್ತು ಕುಂಕುಮದಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದರು. ಫಹಾದ್ ಕ್ರೀಮ್ ಬಣ್ಣದ ಶೇರ್ವಾನಿ ಧರಿಸಿದ್ದರು. ಇಂದು ಸ್ವರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅದ್ಧೂರಿ ಮದುವೆಯ ಫೋಟೋ ಹಂಚಿಕೊಂಡಿದ್ದು, "ಶ್ರೀ ಮತ್ತು ಶ್ರೀಮತಿ #SwaadAnusaar" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
![Swara Bhaskar Fahad Ahmad reception](https://etvbharatimages.akamaized.net/etvbharat/prod-images/18013253_tasdewefdsfed.jpg)
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಗಳನ್ನು ಅಭಿನಂದಿಸಿದ್ದಾರೆ ಮತ್ತು ಸಂತೋಷಕರ ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ನವರಸನಾಯಕ ಜಗ್ಗೇಶ್ ಜನ್ಮದಿನ: ಏಳು-ಬೀಳು ಮೆಟ್ಟಿ ನಿಂತ ಸಾಧಕ
ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಜನವರಿ 6 ರಂದು ವಿಶೇಷ ಕಾಯ್ದೆಯಡಿ ಮದುವೆ ಆಗಿದ್ದರು. ನ್ಯಾಯಾಲಯದಲ್ಲಿ ಮದುವೆ ಆಗಿದ್ದ ಈ ಜೋಡಿ ಇದೀಗ ಅದ್ಧೂರಿ ಮದುವೆ ಮೂಲಕ ಗಮನ ಸೆಳೆದಿದ್ದಾರೆ. ಅಂದುಕೊಂಡಂತೆ ಸ್ವರಾ ಮತ್ತು ಫಹಾದ್ ಸಾಂಪ್ರದಾಯಿಕ ವಿವಾಹ ಆಗಿದ್ದಾರೆ.
ಫಹಾದ್ ಅಹ್ಮದ್ ಮಾಹಿತಿ: ಸ್ವರಾ ಭಾಸ್ಕರ್ ಪತಿ ಫಹಾದ್ ಅಹ್ಮದ್ ಅವು ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಯುವಜನ ಸಭಾದ ರಾಜ್ಯಾಧ್ಯಕ್ಷರೂ ಕೂಡ ಹೌದು. ಸ್ವರಾ ಸಿನಿಮಾಗಳ ಜೊತೆಗೆ ಆಗಾಗ್ಗೆ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಪ್ರತಿಭಟನೆಯೊಂದರ ವೇಳೆ ಇವರಿಬ್ಬರೂ ಭೇಟಿ ಆಗಿದ್ದರು. ಅಂದು ಆದ ಸ್ಹೇಹ ಪ್ರೀತಿಗೆ ತಿರುಗಿತು. ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಅದ್ಧೂರಿ ಸಮಾರಂಭ ಮುಗಿಸಿ ಭಾರತಕ್ಕೆ ಮರಳಿದ ಆಸ್ಕರ್ ವಿಜೇತರು