ETV Bharat / entertainment

ನಿಶ್ಚಿತ್​ ಕೊರೋಡಿ ನಟನೆಯ 'ಸಪ್ಲೈಯರ್​ ಶಂಕರ' ಟೀಸರ್​ ರಿಲೀಸ್​ - etv bharat kannada

ನಿಶ್ಚಿತ್​ ಕೊರೋಡಿ ನಟನೆಯ 'ಸಪ್ಲೈಯರ್​ ಶಂಕರ' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

Supplier Shankara teaser release
ನಿಶ್ಚಿತ್​ ಕೊರೋಡಿ ನಟನೆಯ 'ಸಪ್ಲೈಯರ್​ ಶಂಕರ' ಟೀಸರ್​ ರಿಲೀಸ್​
author img

By ETV Bharat Karnataka Team

Published : Oct 20, 2023, 8:17 PM IST

ಸ್ಯಾಂಡಲ್​ವುಡ್​ನಲ್ಲಿ 'ಗಂಟುಮೂಟೆ', 'ಟಾಮ್​ ಅಂಡ್​ ಜೆರ್ರಿ' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟ ನಿಶ್ಚಿತ್​ ಕೊರೋಡಿ. ಸದ್ಯ 'ಸಪ್ಲೈಯರ್​ ಶಂಕರ' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಲವರ್​ ಬಾಯ್​ ಇಮೇಜಿನಿಂದ ಗುರುತಿಸಿಕೊಂಡಿದ್ದ ನಿಶ್ಚಿತ್​ ಈ ಚಿತ್ರದಲ್ಲಿ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಚಿತ್ರದ ಶೂಟಿಂಗ್​ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ ಚಿತ್ರದ ಟೀಸರ್​ ಅನ್ನು ನಿರ್ಮಾಪಕರಾದ ಚಂದ್ರಶೇಖರ್​ ಹಾಗೂ ನಾಗೇಂದ್ರ ಸಿಂಗ್​ ಆನಂದ್​ ವಿಡಿಯೋ ಮೂಲಕ ಬಿಡುಗಡೆಗೊಳಿಸಿದ್ದಾರೆ.

Supplier Shankara teaser release
'ಸಪ್ಲೈಯರ್​ ಶಂಕರ' ಚಿತ್ರತಂಡ

ಈ ವೇಳೆ ಮೊದಲು ಮಾತು ಆರಂಭಿಸಿದ ನಿರ್ದೇಶಕ ರಂಜಿತ್, ಕಳೆದ ವರ್ಷ ಫೆಬ್ರವರಿಯಲ್ಲಿ ಈ ಚಿತ್ರಕ್ಕೆ ಚಾಲನೆ ದೊರೆಯಿತು. 'ಸಪ್ಲೈಯರ್​ ಶಂಕರ' ಚಿತ್ರ ಬಾರ್ ಸಪ್ಲೈಯರ್​ ಒಬ್ಬನ ಕಥೆ. ನಾನೇ ಕಥೆ ಬರೆದಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಪಾತ್ರಕ್ಕಾಗಿ ನಾಯಕ ನಿಶ್ಚಿತ್ ಕೊರೋಡಿ ಬಹಳ ಶ್ರಮಪಟ್ಟಿದ್ದಾರೆ. ನನ್ನ ಕಥೆಗೆ ಜೀವ ತುಂಬಿದ್ದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್. ಈ ಚಿತ್ರದಲ್ಲಿ ಹೆಚ್ಚಾಗಿ ಹೊಸ ತಂಡ ಕಾರ್ಯ ನಿರ್ವಹಿಸಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಕೂಡ ಇಷ್ಟ ಆಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ನಾಯಕ ನಟ ನಿಶ್ಚಿತ್​ ಕೊರೋಡಿ ಮಾತನಾಡಿ, "ನಾನು ಈ ಹಿಂದೆ ಗಂಟು ಮೂಟೆ ಹಾಗೂ ಟಾಮ್ & ಜೆರ್ರಿ ಚಿತ್ರಗಳಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಬಾರ್ ಸಪ್ಲೈಯರ್ ಪಾತ್ರ ನನ್ನದು. ಹಾಗಂತ ಈ ಚಿತ್ರದಲ್ಲಿ ಬರೀ ಸಪ್ಲೈಯರ್ ಕಥೆ ಮಾತ್ರ ಇಲ್ಲ. ಕಾಮಿಡಿ, ಸೆಂಟಿಮೆಂಟ್, ಲವ್, ಥ್ರಿಲ್ಲರ್ ಎಲ್ಲವೂ ಇದೆ. ನಿರ್ದೇಶಕ ರಂಜಿತ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಚಿತ್ರ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ" ಎಂದು ಎಂದರು.

ಇದನ್ನೂ ಓದಿ: ಗನ್ಸ್ ಅಂಡ್​​ ರೋಸಸ್: ಬಾರ್ ಸೆಟ್​ನಲ್ಲಿ ಸಖತ್ ಸ್ಟೆಪ್ ಹಾಕಿದ ಯುವನಟ ಅರ್ಜುನ್

ಚಿತ್ರಕ್ಕೆ ನಾಯಕಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ಇದ್ದಾರೆ. ಇವರು ಶಿಕ್ಷಕಿ ಪಾತ್ರ ಮಾಡಿದ್ದಾರೆ. ಜೊತೆಗೆ ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್​ ಡಿ ಪಡೀಲ್​ ಸೇರಿದಂತೆ ಒಂದಿಷ್ಟು ಹೊಸಬರು ಕೂಡ ಚಿತ್ರದಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾಗೆ ರಂಜಿತ್​ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಚಿತ್ರದ ಹಾಡುಗಳಿಗೆ ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್​, ಅಮ್ಮಾ ನನ್ನೀ ಜನುಮ ಖ್ಯಾತಿಯ ಸುನಿಲ್​ ಕಶ್ಯಪ್​, ಮೋಹನ್​ ಬಿನ್ನಿಪೇಟೆ, ಸಂತೋಷ್​ ವೆಂಕಿ, ನಕುಲ್​ ಅಭಯ್ಯಂಕರ್​, ಐಶ್ವರ್ಯಾ ರಂಗರಾಜನ್​ ಧ್ವನಿಯಾಗಿದ್ದಾರೆ. ರವಿ ಬಸ್ರೂರ್​ ಬಳಿ ಕೆಲಸ ಮಾಡಿರುವ ಆರ್​.ಬಿ ಭರತ್​ ಸಂಗೀತ ನೀಡಿದ್ದಾರೆ. ಸತೀಶ್​ ಚಂದ್ರಯ್ಯ ಸಂಕಲನ, ಸತೀಶ್​ ಕುಮಾರ್.​ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನವಿದೆ. ತ್ರಿನೇತ್ರ ಫಿಲಂಸ್​ ಸಂಸ್ಥೆಯಡಿ ಎಂ ಚಂದ್ರಶೇಖರ್​ ಹಾಗೂ ನಾಗೇಂದ್ರ ಸಿಂಗ್​ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅತೀ ಶೀಘ್ರದಲ್ಲೇ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಬಿಡುಗಡೆಗೆ ಮುಹೂರ್ತ ಫಿಕ್ಸ್: ಅದ್ಭುತ ಪ್ರೇಮಕಥೆ ವೀಕ್ಷಿಸಲು ಪ್ರೇಕ್ಷಕರ ಕಾತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.