ETV Bharat / entertainment

ಇಂದು ರಜನಿಕಾಂತ್​ ನಟನೆಯ 'ಜೈಲರ್'​ ಸಿನಿಮಾ ಬಿಡುಗಡೆ: ಪ್ರೀಮಿಯರ್​ ಶೋ ನೋಡಿದ ಪ್ರೇಕ್ಷಕರು ಹೇಳಿದ್ದೇನು? - ರಮ್ಯಾ ಕೃಷ್ಣನ್

ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ, ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಜೈಲರ್​' ಸಿನಿಮಾ ಇಂದು ತೆರೆ ಕಂಡಿದೆ.

jailer
ಜೈಲರ್
author img

By

Published : Aug 10, 2023, 10:14 AM IST

ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ ಬಹುನಿರೀಕ್ಷಿತ ಚಿತ್ರ 'ಜೈಲರ್​' ಇಂದು ತೆರೆ ಕಂಡಿದೆ. ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಈ ಸಿನಿಮಾದಲ್ಲಿ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​, ಮಾಲಿವುಡ್​ ಸೂಪರ್​ಸ್ಟಾರ್​ ಮೋಹನ್​ಲಾಲ್​, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್​, ಯೋಗಿ ಬಾಬು, ವಸಂತ್​ ರವಿ, ವಿನಾಯಕ್​ ಸೇರಿದಂತೆ ಅನೇಕ ಸ್ಟಾರ್​ ನಟರು ನಟಿಸಿದ್ದಾರೆ.

ಇದೊಂದು ಆಕ್ಷನ್ - ಪ್ಯಾಕ್ಡ್ ಎಂಟರ್‌ಟೈನರ್ ಚಿತ್ರ ಆಗಿದೆ. ಫಸ್ಟ್​ ಲುಕ್​ನಿಂದ ಹಿಡಿದು ಟೀಸರ್​, ಟ್ರೇಲರ್​ವರೆಗೂ ಭಾರಿ ಕುತೂಹಲ ಮೂಡಿಸಿದ್ದ ಈ ಚಿತ್ರ ಇಂದು ತೆರೆ ಕಂಡಿದ್ದು, ಎಲ್ಲೆಡೆ ಥಿಯೇಟರ್​ ಹೌಸ್​ಫುಲ್​ ಆಗಿದೆ. ಈಗಾಗಲೇ ಪ್ರೀಮಿಯರ್​ ಶೋ ನೋಡಿದ ಸಿನಿ ಪ್ರೇಮಿಗಳು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರೇಕ್ಷಕರು ಹೇಳಿದ್ದೇನು?: 'ಜೈಲರ್​'​ ಇದೊಂದು ಫುಲ್​ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎಂದು ಹೇಳಲಾಗುತ್ತಿದೆ. ಪ್ರೇಕ್ಷಕರು ಹೇಳುವ ಪ್ರಕಾರ, ಸಿನಿಮಾದ ಮೊದಲಾರ್ಧ ಭಾಗದಲ್ಲಿ ರಜನಿ ಮತ್ತು ಯೋಗಿ ಬಾಬು ಕಾಂಬಿನೇಷನ್​ ದೃಶ್ಯಗಳು ನೋಡುಗರನ್ನು ಹೊಟ್ಟೆಹುಣ್ಣಾಗುವಂತೆ ನಗಿಸಿದೆಯಂತೆ. ಇಂಟರ್​ವಲ್​ ನಂತರ ಬರುವ ದೃಶ್ಯಗಳಲ್ಲಿ ರಜನಿ ಫುಲ್​ ಆ್ಯಕ್ಷನ್​ ಮೂಡ್​ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಜೊತೆಗೆ ಸೆಕೆಂಡ್​ ಹಾಫ್​ನಲ್ಲಿ ಕೆಲವು ವಿಶೇಷ ಎಂಟ್ರಿಯಿಂದ ಸಿನಿಮಾಗೆ ಮತ್ತಷ್ಟು ಮಾಸ್​ ಅಂಶಗಳು ಸೇರಿಕೊಂಡಿದೆ ಎನ್ನಲಾಗಿದೆ.

ಕೈಮ್ಯಾಕ್ಸ್​ನಲ್ಲಿ ರಿಯಲ್​ ಟ್ವಿಸ್ಟ್​ ಇದೆ ಎಂದು ರಜನಿ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು 'ಜೈಲರ್​' ನಿರಾಸೆಗೊಳಿಸುವುದಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಬಿಗ್​ ಟ್ರೀಟ್​. ಹಲವು ದೃಶ್ಯಗಳು ಪ್ರೇಕ್ಷಕರಿಗೆ ಮುದ ನೀಡುತ್ತದೆ ಎಂದು ಮತ್ತೊಬ್ಬರು ಟ್ವೀಟ್​ ನಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಒಳ್ಳೆಯ ಸಿನಿಮಾ ಕೊಟ್ಟಿದ್ದಕ್ಕೆ ನೆಲ್ಸನ್​ ತುಂಬಾ ಖುಷಿಯಾಗಿದ್ದಾರೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ ಜೈಲರ್​​​ ಯಶಸ್ಸಿಗಾಗಿ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ!

ಸಂಭ್ರಮಿಸಿದ ರಜನಿ ಫ್ಯಾನ್ಸ್​: ಸೂಪರ್​ಸ್ಟಾರ್​ ರಜನಿ ಸಿನಿಮಾ ಬಿಡುಗಡೆಯಾದರೆ ಸಾಕು, ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇಡೀ ದಕ್ಷಿಣ ಭಾರತೀಯ ಜನರು ಇದನ್ನು ಹಬ್ಬದಂತೆ ಸೆಲೆಬ್ರೇಟ್​ ಮಾಡುತ್ತಾರೆ. ಈಗಾಗಲೇ ವಿಶ್ವದಾದ್ಯಂತ ಇರುವ ರಜನಿ ಅಭಿಮಾನಿಗಳು ಥಿಯೇಟರ್​ಗೆ ತೆರಳಿ ಸಿನಿಮಾ ಎಂಜಾಯ್​ ಮಾಡುತ್ತಿದ್ದಾರೆ. ಚೆನ್ನೈ, ಬೆಂಗಳೂರಿನ ಥಿಯೇಟರ್​ಗಳಲ್ಲಿ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ರಜನಿ ಬೃಹತ್​ ಕಟೌಟ್​ಗಳನ್ನು ಹಾಕಲಾಗಿದೆ. ತಮಿಳು ನಾಡಿನ ಚಿತ್ರಮಂದಿರವೊಂದರಲ್ಲಿ ಅಭಿಮಾನಿಗಳು ರಜನಿ ಕಟೌಟ್​ಗೆ ಹಾಲಿನ ಅಭಿಷೇಕ ಮಾಡುತ್ತಿರುವುದು ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

'ಜೈಲರ್'​ ಸಿನಿಮಾ ಸಾಗರೋತ್ತರದಲ್ಲಿ ದಾಖಲೆ ಮಾಡುತ್ತಿದೆ. ಪ್ರೀಮಿಯರ್​ಗೆ ಯುಎಸ್​ಎನಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 800 ಸಾವಿರ ಡಾಲರ್​ (6.64 ಕೋಟಿ ರೂ.) ಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ. 1 ಮಿಲಿಯನ್​ ಡಾಲರ್​ ಗಡಿಯತ್ತ ಚಿತ್ರ ಸಾಗುತ್ತಿದೆ. ಈ ಚಿತ್ರ 1 ಮಿಲಿಯನ್​ ಡಾಲರ್​ ಗಡಿ ತಲುಪಿದರೆ, ಈ ವರ್ಷ ಯುಎಸ್​ ಬಾಕ್ಸ್​ ಆಫೀಸ್​ನಲ್ಲಿ ಮಿಲಿಯನ್​ ಡಾಲರ್​ ಗಡಿ ತಲುಪಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ 'ಜೈಲರ್'​ ಪಾತ್ರವಾಗಲಿದೆ.

ಇದನ್ನೂ ಓದಿ: Jailer: ರಜನಿಕಾಂತ್​ ಜೈಲರ್‌ ಸಿನಿಮಾ ನೋಡಲು ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.