ಕೇನ್ಸ್ (ಫ್ರಾನ್ಸ್): ಫ್ರಾನ್ಸ್ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಕೇನ್ಸ್ನಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರ 'ಕೆನಡಿ' ಚಿತ್ರ ಪ್ರದರ್ಶನಗೊಂಡಿದೆ. ಜನಪ್ರಿಯ ನಟಿ ಸನ್ನಿ ಲಿಯೋನ್ ಮತ್ತು ರಾಹುಲ್ ಭಟ್ ತಾರಾಗಣದ ಈ ಚಿತ್ರ ಮಧ್ಯರಾತ್ರಿ ಪ್ರದರ್ಶನವನ್ನು ಕಂಡಿದೆ. ಈ ಚಿತ್ರ ವೀಕ್ಷಣೆ ಬಳಿಕ ನೆರೆದವರು 7 ನಿಮಿಷಗಳ ಕಾಲ ಎದ್ದು ನಿಂತು ಚಿತ್ರಕ್ಕೆ ಪ್ರಶಂಸೆ ನೀಡಿದ್ದು, ಚಪ್ಪಾಳೆ ಮಳೆಗರೆದರು.
ಚಿತ್ರ ಪ್ರದರ್ಶನಕ್ಕೂ ಮುನ್ನ ಅನುರಾಗ್ ಕಶ್ಯಪ್ ಮತ್ತು ಸನ್ನಿ ಲಿಯೋನ್ ಹಾಗೂ ರಾಹುಲ್ ಭಟ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಇನ್ನು ಕೆನಡಿ ಚಿತ್ರ ಪ್ರದರ್ಶನ ಕುರಿತು ಕೆಲವು ತುಣುಕುಗಳನ್ನು ನಿರ್ಮಾಪಕ ರಂಜನ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರ ಪ್ರದರ್ಶನಕ್ಕೆ ಮುಂಚೆ ರಂಜನ್, ಅನುರಾಗ್, ರಾಹುಲ್ ಭಟ್ ಮತ್ತು ನಿರ್ಮಾಪಕ ಅಬೀರ್ ಅಹುಜಾ ಮತ್ತು ನಿರ್ದೇಶಕ ವಿಕ್ರಮಾದಿತ್ಯ ಮೊಟ್ವಾನೆ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ. ನಾವು ಸಿದ್ದವಿದ್ದೇವೆ. 'ಕೆನಡಿ' ಪ್ರೀಮಿಯರ್ಗೆ, ಲೈಫ್ ಟೈಮ್ ಮೂಮೆಂಟ್ ಎಂದು ಫೆಸ್ಟಿವಲ್ಡೆಕೇನ್ಸ್ ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಕ್ಯಾಪ್ಷನ್ ಪೋಸ್ಟ್ ಮಾಡಿದ್ದರು.
ಕೇನ್ಸ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ ಈ ಮೊದಲು ಕೆಂಪು ಬಣ್ಣದ ವೆಲ್ವೆಟ್ ಬಟ್ಟೆಯಿಂದ ಕಂಗೊಳಿಸಿದ್ದ ಸನ್ನಿ ಲಿಯೋನ್ ಎರಡನೇ ಬಾರಿಗೆ ಗುಲಾಬಿ ಸ್ಯಾಟಿನ್ ಗೌನ್ನಲ್ಲಿ ಕೆನಡಿ ಪ್ರೀಮಿಯರ್ಗೆ ಮುಂಚೆ ಮಿಂಚಿದರು. ಇನ್ನು ಇದಕ್ಕೂ ಮೊದಲು ಅವರು 'ಕೆನಡಿ' ತಂಡದ ಜೊತೆಗೆ ತಮ್ಮ ಸ್ಟನ್ನಿಂಗ್ ಲುಕ್ಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಗುಲಾಬಿ ಬಣ್ಣದ ಸ್ಲಿಟ್ ಗೌನ್ನಲ್ಲಿ ನಟಿ ಅದ್ಬುತವಾಗಿ ಕಂಗೊಳಿಸಿದ್ದರು. ಇದಕ್ಕೆ ಸ್ಲಿಕ್ ಬನ್ ರೀತಿ ಕೂದಲು ಕಟ್ಟಿದ್ದು, ಅವರ ಕಿವಿಯಲ್ಲಿದ್ದ ವಜ್ರದೊಲೆ ಎಲ್ಲರಲ್ಲೂ ಮೋಡಿ ಮಾಡಿತು. ಅನುರಾಗ್ ಕಶ್ಯಪ್ ಮತ್ತು ಸಹ ನಟ ರಾಹುಲ್ ಭಟ್ ಜೊತೆಗಿನ ಫೋಟೋ ಹಂಚಿಕೊಂಡ ನಟಿ ಈ ಕುರಿತು ಇನ್ಸ್ಟಾಗ್ರಾಂನಲ್ಲಿ, "ಇದು ತಮ್ಮ ಇಲ್ಲಿಯವರೆಗಿನ ತಮ್ಮ ವೃತ್ತಿ ಜೀವದ ಹೆಮ್ಮೆಯ ಘಳಿಗೆ. ಈ ಘಳಿಗೆಗೆ ಅನುರಾಗ್ ಕಶ್ಯಪ್ ಅವರಿಗೆ ಧನ್ಯವಾದಗಳು. ರಾಹುಲ್ ಭಟ್ ತಮ್ಮ ಜೊತೆ ತೆರೆ ಹಂಚಿಕೊಂಡು ತಮ್ಮ ಅದ್ಬುತ ಪ್ರದರ್ಶನ ತೋರಿದ್ದಾರೆ. ನಿಮ್ಮಿಬ್ಬರನ್ನು ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಅನುರಾಗ್ ಕಶ್ಯಪ್, "'ಕೆನಡಿ' ವರ್ಲ್ಡ್ ಪ್ರೀಮಿಯರ್ ಕಾಣುತ್ತಿದೆ. ಭಾರತೀಯ ಸಿನಿಮಾವನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡ ಹೆಮ್ಮೆ ಇಲ್ಲ. ಇದು ನನಗೆ ಮತ್ತು ನನ್ನ ತಂಡಕ್ಕೆ ಅದ್ಬತ ಘಳಿಗೆ" ಎಂದಿದ್ದಾರೆ . ಈ ಚಿತ್ರವೂ ನಿದ್ರಾಹೀನತೆಯಿಂದ ಬಳಲುವ ಮಾಜಿ ಪೊಲೀಸ್ ಅಧಿಕಾರಿ ಸುತ್ತ ಹೆಣೆಯುವ ಕಥೆ ಇದಾಗಿದೆ. ಈತ ಸತ್ತಿತ್ತಾನೆ ಎಂದು ಭಾವಿಸಲಾಗುತ್ತದೆ. ಆದರೆ ಆತ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಡುತ್ತಿರುತ್ತಾನೆ. ಕೆನಡಿ ಸೇರಿದಂತೆ ಭಾರತದ ಎರಡು ಚಿತ್ರಗಳು ಪ್ರದರ್ಶನ ಕಾಣುತ್ತಿದೆ
ಇದನ್ನೂ ಓದಿ: 76ನೇ ಕಾನ್ ಚಲನಚಿತ್ರೋತ್ಸವ: ಅನುಷ್ಕಾ ವಿರಾಟ್ ಜೋಡಿ ಮುಂಬೈ ಟು ಫ್ರಾನ್ಸ್ ಪ್ರಯಾಣ