ETV Bharat / entertainment

'ಜಾಕ್ವೆಲಿನ್‌ ಬಗ್ಗೆ ನೋರಾ ಫತೇಹಿ ಅಸೂಯೆ ಹೊಂದಿದ್ದರು': ವಂಚಕ ಸುಕೇಶ್ ಚಂದ್ರಶೇಖರ್ - ನೋರಾ ಫತೇಹಿ

ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ನಟಿ ನೋರಾ ಫತೇಹಿ ವಿರುದ್ಧ ಆರೋಪಗಳ ಮಳೆ ಸುರಿಸಿದ್ದಾನೆ.

Sukesh Chandrasekhar allegations against Nora Fatehi
ನೋರಾ ಫತೇಹಿ ವಿರುದ್ಧ ಸುಕೇಶ್ ಚಂದ್ರಶೇಖರ್ ಆರೋಪ
author img

By

Published : Jan 22, 2023, 5:36 PM IST

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ತಮ್ಮ ವಕೀಲರ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ನಟಿ, ಡ್ಯಾನ್ಸರ್​ ನೋರಾ ಫತೇಹಿ ವಿರುದ್ಧ ಆರೋಪಗಳ ಮಳೆ ಸುರಿಸಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ನಟಿ ನೋರಾ ಫತೇಹಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ಅಸೂಯೆ ಹೊಂದಿದ್ದರು ಎಂದು ಸುಕೇಶ್ ಆರೋಪಿಸಿದ್ದಾನೆ. ನಾನು ಜಾಕ್ವೆಲಿನ್‌ನನ್ನು ಬಿಟ್ಟು ಹೋಗಬೇಕೆಂದು ನೋರಾ ಬಯಸಿದ್ದರು ಎಂದು ಕೂಡ ಹೇಳಿದ್ದಾನೆ. ಅಷ್ಟೇ ಅಲ್ಲ, ನೋರಾ ಫತೇಹಿ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಮಾಡಿರುವ ಆರೋಪಗಳನ್ನು ಸಹ ಅಪರಾಧಿ ಸುಕೇಶ್ ಚಂದ್ರಶೇಖರ್ ತಳ್ಳಿಹಾಕಿದ್ದಾನೆ.

ನಟಿ ನೋರಾ ಫತೇಹಿ ಆರ್ಥಿಕ ಅಪರಾಧಗಳ ಬ್ಯೂರೋ (ಇಒಡಬ್ಲ್ಯೂ) ಮುಂದೆ ತಮ್ಮ ಹೇಳಿಕೆಯನ್ನು ತಪ್ಪಾಗಿ ನೀಡಿದ್ದಾರೆ ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ. ಪತ್ರದಲ್ಲಿ ಈ ಬಗ್ಗೆ ಬರೆದಿರುವ ಸುಕೇಶ್, 'ನಾನು ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಮ್ಮ ಸಂಬಂಧದ ಬಗ್ಗೆ ಗಂಭೀರವಾಗಿದ್ದೆವು. ಈ ಹಿನ್ನೆಲೆ ನೋರಾ ಅವರು ಜಾಕ್ವೆಲಿನ್ ಬಗ್ಗೆ ಅಸೂಯೆ ಪಟ್ಟರು. ಜಾಕ್ವೆಲಿನ್ ಬಗ್ಗೆ ನನ್ನ ಬ್ರೈನ್ ವಾಶ್ ಮಾಡುತ್ತಿದ್ದರು. ನಾನು ಜಾಕ್ವೆಲಿನ್‌ನನ್ನು ಬಿಟ್ಟು ಅವರೊಂದಿಗೆ ಡೇಟಿಂಗ್ ಮಾಡಬೇಕೆಂದು ನೋರಾ ಫತೇಹಿ ಬಯಸಿದ್ದರು. ನೋರಾ ದಿನಕ್ಕೆ ಕನಿಷ್ಠ 10 ಬಾರಿ ನನಗೆ ಕರೆ ಮಾಡುತ್ತಿದ್ದರು. ಕರೆಗಳಿಗೆ ಉತ್ತರಿಸದಿದ್ದಾಗ ಕರೆ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾನೆ.

  • ~Nora Fatehi opens up about Sukesh Chandrashekhar presenting her with an offer to be his ‘girlfriend’~ https://t.co/qNtE9TPVV9
    Earlier, we had reported about how in the third chargesheet filed by the Economics Offences Wing (EOW), they have named Jacqueline Fernandez as the... pic.twitter.com/ejqTMSVkUD

    — Snooper-Scope (@Snooper_Scope) January 22, 2023 " class="align-text-top noRightClick twitterSection" data=" ">

ಈ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆ ನೋರಾ ಅವರು ಪರಿಶೀಲನೆಗೆ ಒಳಗಾಗಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲಿ ತನಗೆ ಯಾವುದೇ ಕಾರು ಬೇಡ ಎಂದು ಹೇಳಿದ್ದರು. ಈ ಕುರಿತು ಸುಕೇಶ್, 'ನೋರಾ ಸುಳ್ಳು ಹೇಳುತ್ತಿದ್ದಾರೆ. ನೋರಾ ತನ್ನ ಕಾರನ್ನು ಬದಲಾಯಿಸುವ ಸಲುವಾಗಿ ನನ್ನ ಬಳಿಗೆ ಬಂದರು. ಆ ಸಮಯದಲ್ಲಿ ಅವರ ಬಳಿ ಮರ್ಸಿಡಿಸ್ ಸಿಎಲ್ಎ ಕಾರು ಇತ್ತು. ನೋರಾ ಅವರು ಇದು ಬಹಳ ಅಗ್ಗದ ಕಾರು ಎಂದು ಭಾವಿಸಿದರು. ಆದ್ದರಿಂದ ನೋರಾ ಮತ್ತು ನಾನು ಒಟ್ಟಿಗೆ ಒಂದು ಕಾರನ್ನು ಆರಿಸಿದೆವು. ಇಡಿ ನನ್ನ ಚಾಟ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಹೊಂದಿದೆ, ಅದು ಎಲ್ಲವನ್ನೂ ನಿಜವೆಂದು ಸಾಬೀತುಪಡಿಸುತ್ತದೆ. ಇದರಲ್ಲಿ ಯಾವುದೇ ಸುಳ್ಳಿಲ್ಲ' ಎಂದು ಹೇಳಿದ್ದಾನೆ.

ಇದನ್ನೂ ಓದಿ: ಆತ ನನ್ನ ಭಾವನೆಗಳೊಂದಿಗೆ ಆಟವಾಡಿ, ನನ್ನ ಜೀವನವನ್ನೇ ನರಕ ಮಾಡಿದ್ದಾನೆ: ನಟಿ ಜಾಕ್ವೆಲಿನ್ ಅಳಲು

'ನಾನು ನಿಜವಾಗಿಯೂ ನೋರಾ ಅವರಿಗೆ ರೇಂಜ್ ರೋವರ್ ನೀಡಲು ಬಯಸಿದ್ದೆ. ಆದರೆ ಆ ಸಮಯದಲ್ಲಿ ಕಾರುಗಳ ಸ್ಟಾಕ್ ಇರಲಿಲ್ಲ. ನೋರಾಗೆ ತಕ್ಷಣವೇ ಕಾರ್ ಬೇಕಿತ್ತು. ಹಾಗಾಗಿ ಅವರಿಗೆ ನಾನು ಬಿಎಂಡಬ್ಲ್ಯೂ ಎಸ್ ಸರಣಿಯ ಕಾರನ್ನು ನೀಡಿದ್ದೇನೆ. ಅದನ್ನು ಅವರು ಬಹು ಸಮಯದವರೆಗೆ ಬಳಸಿದ್ದಾರೆ. ನೋರಾ ಭಾರತೀಯರಲ್ಲದ ಕಾರಣ ತನ್ನ ಸ್ನೇಹಿತೆಯ ಪತಿ ಬಾಬಿ ಹೆಸರಿನಲ್ಲಿ ಕಾರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸುಕೇಶ್ ಹೇಳಿದ್ದಾನೆ. ಇನ್ನೂ ನನ್ನ ಮತ್ತು ನೋರಾ ನಡುವೆ ಯಾವುದೇ ವಾಣಿಜ್ಯ ವಹಿವಾಟು ನಡೆದಿಲ್ಲ. ನೋರಾ ಒಮ್ಮೆ ಭಕ್ತರ್ ಫೌಂಡೇಶನ್‌ನ ಕಾರ್ಯಕ್ರಮಕ್ಕೆ ಹೋಗಿದ್ದರು. ಅದಕ್ಕಾಗಿ ಅವಳು ಸ್ವಲ್ಪ ಹಣವನ್ನು ಪಾವತಿಸಿದ್ದರು ಎಂದು ಕೂಡ ಸುಕೇಶ್​ ಹೇಳಿದ್ದಾನೆ.

ಇದನ್ನೂ ಓದಿ: ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಕರೆ; ಪಠಾಣ್‌ ಪ್ರದರ್ಶನಕ್ಕೆ ಬೆಂಬಲ ನೀಡಿದ ಹಿಮಂತ ಬಿಸ್ವಾ

ವಂಚಕ ಸುಕೇಶ್ ಚಂದ್ರಶೇಖರ್ ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾನೆ. ನನ್ನ ಜೀವನವನ್ನೇ ನರಕ ಮಾಡಿದ್ದಾನೆ. ನಾನು ಮೋಸ ಹೋಗಿದ್ದೇನೆಂದು ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಈ ಹಿಂದೆ ತಮ್ಮ ಅಳಲು ತೋಡಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.