ETV Bharat / entertainment

ಎಂಗೇಜ್​ಮೆಂಟ್​ ಪಾರ್ಟಿ ಆಯೋಜಿಸಿದ್ದ ಅನುರಾಗ್​ ಕಶ್ಯಪ್​ ಪುತ್ರಿ: ಜೋಡಿಯಾಗಿ ಕಾಣಿಸಿಕೊಂಡ ಸ್ಟಾರ್​ ಕಿಡ್ಸ್​ - ಈಟಿವಿ ಭಾರತ ಕನ್ನಡ

ಅನುರಾಗ್​ ಕಶ್ಯಪ್​ ಅವರ ಪುತ್ರಿ ಆಲಿಯಾ ಕಶ್ಯಪ್ ಮತ್ತು ಶೇನ್ ಗ್ರೆಗೊಯಿರ್ ಎಂಗೇಜ್​ಮೆಂಟ್​ ಪಾರ್ಟಿಯಲ್ಲಿ ಸ್ಟಾರ್​ ಕಿಡ್ಸ್​ ಜೋಡಿಯಾಗಿ ಗಮನ ಸೆಳೆದರು.

Aaliyah Kashyap's engagement
ಎಂಗೇಜ್​ಮೆಂಟ್​ ಪಾರ್ಟಿ ಆಯೋಜಿಸಿದ್ದ ಅನುರಾಗ್​ ಕಶ್ಯಪ್​ ಪುತ್ರಿ
author img

By

Published : Aug 4, 2023, 12:19 PM IST

ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ ಪುತ್ರಿ ಆಲಿಯಾ ಕಶ್ಯಪ್​ ತಮ್ಮ ಅಮೆರಿಕದ ಗೆಳೆಯ ಶೇನ್ ಗ್ರೆಗೊಯಿರ್ ಅವರೊಂದಿಗೆ ಎಂಗೇಜ್​ ಆಗಿದ್ದಾರೆ. ಈ ಜೋಡಿ ಗುರುವಾರ ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಪಾರ್ಟಿ ಆಯೋಜಿಸಿತ್ತು. ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾದರು. ಅವರಲ್ಲಿ ಸ್ಟಾರ್​ ಕಿಡ್ಸ್​ ಹೆಚ್ಚು ಗಮನ ಸೆಳೆದರು.

ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​, ಆಕೆಯ ವದಂತಿ ಗೆಳೆಯ ಅಗಸ್ತ್ಯ ನಂದಾ ಜೊತೆ ಕಾಣಿಸಿಕೊಂಡರು. ನಟ ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಅಲಿ ಖಾನ್​ ಅವರು ಗೆಳತಿ ಪಾಲಕ್​ ತಿವಾರಿ ಜೊತೆ ಕ್ಯಾಮರಾದಲ್ಲಿ ಸೆರೆಯಾದರು. ಸುಹಾನಾ ಖಾನ್​ ನೀಲಿ ಬಣ್ಣದ ಮಾರ್ಡನ್​ ಸೀರೆಯಲ್ಲಿ ಎಲ್ಲರನ್ನೂ ಆಕರ್ಷಿಸಿದರು. ಖುಷಿ ಕಪೂರ್​ ಗುಲಾಬಿ ಬಣ್ಣದ ಸೀರೆಯಲ್ಲಿ ಅಂದವಾಗಿ ಕಂಡರು.

ಪಾಲಕ್​ ತಿವಾರಿ ಅವರು ಬ್ರೇಲೆಟ್​ ಬ್ಲೌಸ್​ ಮತ್ತು ಬೀಜ್​ ಸೀರೆಯಲ್ಲಿ ಬಹುಕಾಂತೀಯವಾಗಿ ಕಾಣುತ್ತಿದ್ದರು. ಮತ್ತೊಂದೆಡೆ ಆಕೆಯ ವದಂತಿ ಗೆಳೆಯ ಇಬ್ರಾಹಿಂ ಅಲಿ ಖಾನ್ ಅವರು ಬಿಳಿ ಪ್ಯಾಂಟ್​ಗೆ ಕಪ್ಪು ಬಂಧಗಾಲಾ ಜಾಕೆಟ್​ ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಅನುರಾಗ್​ ಕಶ್ಯಪ್​ ಅವರ ಮಾಜಿ ಪತ್ನಿ ಕಲ್ಕಿ ಕೊಚ್ಲಿನ್​ ಅವರು ತಮ್ಮ ಮಗಳು ಸಫೊ ಮತ್ತು ಗೆಳೆಯ ಗೈ ಹರ್ಷ್​ಬರ್ಗ್​ ಜೊತೆ ಎಂಗೇಜ್​ಮೆಂಟ್​ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ರಾಜಮೌಳಿ - ಮಹೇಶ್​ ಬಾಬು ಸಿನಿಮಾ: ಟಾಲಿವುಡ್​​ ಪ್ರಿನ್ಸ್​ ಬರ್ತ್​ಡೇಯಂದು ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್

ಆಲಿಯಾ ಕಶ್ಯಪ್​ ಮತ್ತು ಶೇನ್ ಗ್ರೆಗೊಯಿರ್ ಸಾಂಪ್ರದಾಯಿಕ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಆಲಿಯಾ ಸುಂದರವಾದ ಬಿಳಿ ಲೆಹಂಗಾ ಧರಿಸಿದ್ದರು. ಶೇನ್​ ಕುರ್ತಾ ಪೈಜಾಮ್​ ಸೆಟ್​ನಲ್ಲಿ ಹ್ಯಾಂಡ್ಸಮ್​ ಆಗಿ ಕಾಣುತ್ತಿದ್ದರು. ಇಬ್ಬರು ಪರಸ್ಪರ ಮ್ಯಾಚಿಂಗ್​ ಮಾಡಿಕೊಂಡಿದ್ದರು. ಆಲಿಯಾ ಮತ್ತು ಶೇನ್​ ತುಂಬಾ ಮುದ್ದಾಗಿ ಕಾಣುತ್ತಿದ್ದರು.

ಎಂಗೇಜ್​ಮೆಂಟ್​ ಪಾರ್ಟಿಯಲ್ಲಿ ಮೀಜಾನ್​ ಜಾಫ್ರಿ, ರಾಜ್​ಕುಮಾರ್​ ಸಂತೋಷಿ ಅವರ ಪುತ್ರಿ ತನಿಶಾ ಸಂತೋಷಿ ಮತ್ತು ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು. ಈವೆಂಟ್​ನಲ್ಲಿ ಅನುರಾಗ್​ ಕಶ್ಯಪ್​ ಅವರು ತಮ್ಮ ಮಗಳೊಂದಿಗೆ ಸುಂದರ ಕ್ಷಣವನ್ನು ಆನಂದಿಸಿದರು. ಇಬ್ಬರು ಜೊತೆಯಾಗಿ ಅದ್ಭುತವಾಗಿ ಕಾಣುತ್ತಿದ್ದರು.

ಆಲಿಯಾ ಕಶ್ಯಪ್​ ಮದುವೆಯಾಗಲಿರುವ ಶೇನ್ ಗ್ರೆಗೊಯಿರ್ ಅವರು ಅಮೆರಿಕನ್​ ವಾಣಿಜ್ಯೋದ್ಯಮಿ ಮತ್ತು ಯೂಟ್ಯೂಬರ್​ ಆಗಿದ್ದಾರೆ. ಜೋಡಿ ಅಮೆರಿಕದಲ್ಲಿ ಲಿವ್​ ಇನ್ ರಿಲೇಷನ್​ಶಿಪ್​ನಲ್ಲಿದ್ದಾರೆ. ಆಗಾಗ ಭಾರತಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ವರ್ಷದ ಆರಂಭದಲ್ಲಿ ಅನನ್ಯಾ ಪಾಂಡೆಯ ಸೋದರ ಸಂಬಂಧಿ ಅಲನ್ನಾ ಪಾಂಡೆ ಅವರ ವಿವಾಹ ಸಮಾರಂಭದಲ್ಲಿ ಇಬ್ಬರೂ ಭಾಗವಹಿಸಿದ್ದರು.

ಇದನ್ನೂ ಓದಿ: ಎಂಗೇಜ್​ ಆದ ಅನುರಾಗ್​ ಕಶ್ಯಪ್ ಪುತ್ರಿ:​ ಬಹುಕಾಲದ ಗೆಳೆಯ ಶೇನ್​ಗೆ 'Yes' ಆಲಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.