ETV Bharat / entertainment

'ಸುಹಾನಾ ಖಾನ್​ ಗಾಸಿಪ್​ ಕ್ವೀನ್​​': ರೂಮರ್ ಬಾಯ್​ಫ್ರೆಂಡ್ ಅಗಸ್ತ್ಯ ನಂದಾ ಗೇಲಿ - ಅಗಸ್ತ್ಯ ನಂದಾ ಸಿನಿಮಾ

ದಿ ಆರ್ಚೀಸ್‌ ಸಿನಿಮಾ ಪ್ರಚಾರದ ವಿಡಿಯೋದಲ್ಲಿ ಸಹ ನಟರಾದ ಅಗಸ್ತ್ಯ ನಂದಾ ಮತ್ತು ಸುಹಾನಾ ಖಾನ್​​ ತಮಾಷೆಯಾಗಿ ಪರಸ್ಪರರ ಕಾಲೆಳೆದುಕೊಂಡಿದ್ದಾರೆ.

Suhana Khan Agastya Nanda
ಸುಹಾನಾ ಖಾನ್ ಅಗಸ್ತ್ಯ ನಂದಾ
author img

By ETV Bharat Karnataka Team

Published : Dec 3, 2023, 5:12 PM IST

ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮತ್ತು ಹಿರಿಯ ನಟ ಅಮಿತಾಭ್​ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ತಮ್ಮ ಚೊಚ್ಚಲ ಚಿತ್ರ 'ದಿ ಆರ್ಚೀಸ್‌' ಬಿಡುಗಡೆಗೆ ಸಜ್ಜಾಗಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಇತ್ತೀಚೆಗೆ ತಮಾಷೆಯ ವಿಡಿಯೋವೊಂದು ಅನಾವರಣಗೊಂಡಿದ್ದು, ರೂಮರ್ ಲವ್​ಬರ್ಡ್ಸ್ ಪರಸ್ಪರ ಮನರಂಜನಾ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ಹಾಸ್ಯವು ಅವರ ವ್ಯಕ್ತಿತ್ವ ಮತ್ತು ಸೌಹಾರ್ದತೆಯ ಮೇಲೆ ಬೆಳಕು ಚೆಲ್ಲಿದೆ. ಬಿಗ್​ ಬಿ ಮೊಮ್ಮಗ ಮತ್ತು ಎಸ್​ಆರ್​ಕೆ ಪುತ್ರಿ ಡೇಟಿಂಗ್​​ನಲ್ಲಿದ್ದಾರೆಂಬುದು ನೆಟ್ಟಿಗರ ಒಂದು ಊಹೆ.

ದಿ ಆರ್ಚೀಸ್‌ನ ಅಧಿಕೃತ ಅಧಿಕೃತ ಇನ್​ಸ್ಟಾಗ್ರಾಮ್​​​​ನಲ್ಲಿ ಎಂಟರ್​ಟೈನಿಂಗ್ ಆಗಿರೋ ವಿಡಿಯೋವೊಂದನ್ನು ಅನಾವರಣಗೊಳಿಸಲಾಗಿದೆ. ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಹಾಸ್ಯಮಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆಯ ಸಂದರ್ಭ ಅಗಸ್ತ್ಯ ಅವರು ಸುಹಾನಾರಿಗೆ ತಮಾಷೆಯಾಗಿ 'ಬಿಗ್ ಗಾಸಿಪ್ ಕ್ವೀನ್' ಎಂದು ಹೇಳಿ ಗೇಲಿ ಮಾಡಿದ್ದಾರೆ.

ಚಾರ್ಮಿಂಗ್, ಮೂಡಿ, ಸರ್ಕಾಸ್ಟಿಕ್, ಲೇಸಿಯಂತಹ ಪದಗಳಿಂದ ಲೇಬಲ್ ಮಾಡಲಾದ ಪದಾರ್ಥಗಳನ್ನು ಬಳಸಿಕೊಂಡು ಈ ಜೋಡಿ ಮಿಲ್ಕ್‌ಶೇಕ್ ಮಾಡುವ ಆಟವಾಡಿದ್ದಾರೆ. ಆ ಸಂದರ್ಭ ಅಗಸ್ತ್ಯ ಅವರು ಸುಹಾನಾರಿಗೆ ಗಾಸಿಪ್‌ ವಿಚಾರ ಹಿಡಿದು ಟೀಸ್ ಮಾಡಿದ್ರು. ಸುಹಾನಾ ಕೂಡ ತಮಾಷೆಯಾಗಿಯೇ ಅಗಸ್ತ್ಯರ ಹಾಸ್ಯ, ಬುದ್ಧಿವಂತಿಕೆಯನ್ನು ಶ್ಲಾಘಿಸಿದರು. ಬಳಿಕ ಯಾರು ಫನ್ನಿ ಎಂಬ ಚರ್ಚೆ ನಡೆಯಿತು. ಅಗಸ್ತ್ಯ ಸುಹಾನಾರಲ್ಲಿ ಹಾಸ್ಯಭಾವದ ಕೊರತೆ ಇದೆ ಎಂದು ಮತ್ತೆ ಕಾಲೆಳೆದರು. ಹೀಗೆ ಸುಹಾನಾ ಅಗಸ್ತ್ಯ ಫನ್​ ಟೈಮ್​​ ಕಳೆದಿದ್ದಾರೆ. ಕೊನೆಗೆ ಇಬ್ಬರೂ ಮಿಲ್ಕ್‌ಶೇಕ್ ಕುಡಿದಿದ್ದು, ಟೇಸ್ಟ್ ಕೆಟ್ಟದಾಗಿದೆ ಎಂಬುದು ಅವರ ಎಕ್ಸ್​​ಪ್ರೆಶನ್​​ನಲ್ಲೇ ಗೊತ್ತಾಗುತ್ತದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಎರಡೇ ದಿನದಲ್ಲಿ 230 ಕೋಟಿ ಕಲೆಕ್ಷನ್​ ಮಾಡಿದ ಅನಿಮಲ್​: ಸ್ಯಾಮ್​ ಬಹದ್ದೂರ್​​ಗೆ ಪಾಸಿಟಿವ್​ ರೆಸ್ಪಾನ್ಸ್

ಈ ಹಿಂದಿನ ಸಂದರ್ಶನದಲ್ಲಿ ಸುಹಾನಾ ಖಾನ್​​ ತಮ್ಮ ಪಾತ್ರ ವೆರೋನಿಕಾರ ಆತ್ಮವಿಶ್ವಾಸ ಸ್ವಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತನ್ನ ಚೊಚ್ಚಲ ಚಿತ್ರದ ಪಾತ್ರವಾಗಿರೋ ವೆರೋನಿಕಾ ಪಾತ್ರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ಉಲ್ಲೇಖಿಸಿ, ಈ ಚಿತ್ರದ ಭಾಗವಾಗಿರುವ ಬಗ್ಗೆ ಉತ್ಸಾಹ ಹಂಚಿಕೊಂಡಿದ್ದರು.

ಇದನ್ನೂ ಓದಿ: 'ಸಲಾರ್' ಟ್ರೇಲರ್ ದಾಖಲೆ: 24 ಗಂಟೆಯೊಳಗೆ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ!

ಜೋಯಾ ಅಖ್ತರ್ ನಿರ್ದೇಶನದ ದಿ ಆರ್ಚೀಸ್ ಸಿನಿಮಾದಲ್ಲಿ ಅಗಸ್ತ್ಯ, ಸುಹಾನಾ ಅಲ್ಲದೇ ದಿವಂಗತ ನಟಿ ಶ್ರೀದೇವಿ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ಸಹ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಮಕ್ಕಳು, ಮೊಮ್ಮಕ್ಕಳ ಚೊಚ್ಚಲ ಚಿತ್ರದಲ್ಲಿ ಅದಿತಿ ಸೈಗಾ, ಮಿಹಿರ್ ಅಹುಜಾ, ವೇದಾಂಗ್ ರೈನಾ ಮತ್ತು ಯುವ್​ರಾಜ್ ಮೆಂದಾ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿ ಆರ್ಚೀಸ್ ಡಿಸೆಂಬರ್ 7 ರಂದು ಒಟಿಟಿ ಪ್ಲಾಟ್​ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.