ETV Bharat / entertainment

ಶುಗರ್ ಫ್ಯಾಕ್ಟರಿ ಟ್ರೇಲರ್​​​ಗೆ ಸಿನಿ ರಸಿಕರ ಮೆಚ್ಚುಗೆ: ಡಾರ್ಲಿಂಗ್ ಕೃಷ್ಣ ಲುಕ್​ಗೆ ಫ್ಯಾನ್ಸ್ ಫಿದಾ - Sugar Factory

Sugar Factory: ಬಹುನಿರೀಕ್ಷಿತ ಶುಗರ್ ಫ್ಯಾಕ್ಟರಿ ಟ್ರೇಲರ್ ಅನಾವರಣಗೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.

Sugar Factory
ಡಾರ್ಲಿಂಗ್ ಕೃಷ್ಣರ ಶುಗರ್ ಫ್ಯಾಕ್ಟರಿ
author img

By ETV Bharat Karnataka Team

Published : Sep 29, 2023, 8:01 PM IST

ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ಡಾರ್ಲಿಂಗ್ ಕೃಷ್ಣ ಇದೀಗ 'ಶುಗರ್​​ ಫ್ಯಾಕ್ಟರಿ' ನಿರ್ಮಾಣ ಮಾಡಿದ್ದಾರೆ. ಅಯ್ಯೋ, ಶುಗರ್ ಫ್ಯಾಕ್ಟರಿಗೂ ಡಾರ್ಲಿಂಗ್ ಕೃಷ್ಣನಿಗೂ ಏನ್​​ ಸಂಬಂಧ ಅಂದುಕೊಂಡ್ರಾ?. ಇದು ಲವ್ ಮಾಕ್ಟೈಲ್​ ಹೀರೋನ ಹೊಸ ಚಿತ್ರ. ವಿಭಿನ್ನ ಶೀರ್ಷಿಕೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದೆ.

  • " class="align-text-top noRightClick twitterSection" data="">

ಶುಗರ್​ ಫ್ಯಾಕ್ಟರಿ ಟ್ರೇಲರ್​​​ ಅನಾವರಣ: ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರುವ ಶುಗರ್​ ಫ್ಯಾಕ್ಟರಿ ಚಿತ್ರದ ಆಫೀಶಿಯಲ್ ಟ್ರೇಲರ್​​​ ಇತ್ತೀಚೆಗೆ ಅನಾವರಣಗೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ. ಸದ್ಯ ಬಿಡುಗಡೆ ಆಗಿರುವ ಶುಗರ್​ ಫ್ಯಾಕ್ಟರಿ ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಲರ್​ನಲ್ಲಿ ಮೂವರು ಬೆಡಗಿಯರ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾನ್ಸ್ ಮಾಡಿದ್ದು, ಟ್ರಯಾಂಗಲ್ ಲವ್ ಸ್ಟೋರಿ ಎನಿಸುತ್ತಿದೆ. ಎರಡು ನಿಮಿಷಗಳ ಟ್ರೇಲರ್​ನಲ್ಲೇ ಇಷ್ಟು ಮನರಂಜನೆ, ಹಾಸ್ಯಭರಿತ ಸಂಭಾಷಣೆಗಳಿದೆ. ಕಂಪ್ಲೀಟ್​ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸೋದು ಪಕ್ಕಾ. ಲವ್​ಸ್ಟೋರಿ ವಿತ್​​ ಕಾಮಿಡಿ ಎಂಟರ್​ಟೈನ್​ಮೆಂಟ್​ ಸಿನಿಮಾ ಬಗ್ಗೆ ಪ್ರೇಕ್ಷಕರು ತಮ್ಮ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Sugar Factory
ಬಹುತಾರಾಗಣದ ಶುಗರ್​​ ಫ್ಯಾಕ್ಟರಿ ನವೆಂಬರ್ 24 ರಂದು ತೆರೆಗೆ

ಬಿಗ್ ಬಜೆಟ್ ಸಿನಿಮಾ: ಡಾರ್ಲಿಂಗ್ ಕೃಷ್ಣ ಅವರ ಸಿನಿ ಜರ್ನಿಯಲ್ಲೇ "ಶುಗರ್ ಫ್ಯಾಕ್ಟರಿ" ಬಿಗ್ ಬಜೆಟ್ ಚಿತ್ರವಾಗಿದೆ. ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಅವರು ಡಾರ್ಲಿಂಗ್​​ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ. ಈ ಹಿಂದೆ ನಿರ್ದೇಶಕ ದೀಪಕ್ ಅರಸ್ ತಿಳಿಸಿದಂತೆ, ಈಗಿನ‌ ಜನರೇಶನ್​ ಅನ್ನು ತಲೆಯಲ್ಲಿ ಇಟ್ಟುಕೊಂಡು ಕಥೆ ಮಾಡಿ ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು, ಶಶಿ ಹಾಗೂ ಮಹಾಂತೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Ragneeti wedding video: ರಾಘವ್​ ಚಡ್ಡಾ - ಪರಿಣಿತಿ ಚೋಪ್ರಾ ಮದುವೆ ವಿಡಿಯೋ ನೋಡಿದ್ರಾ?

ನವೆಂಬರ್ 24ಕ್ಕೆ ಬಿಡುಗಡೆ: ಈ ಚಿತ್ರಕ್ಕೆ ಕಬೀರ್ ರಫಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನ ಇದೆ. ಅದ್ಧೂರಿ ವೆಚ್ಚದಲ್ಲಿ ಗಿರೀಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ದೀಪಕ್ ಅರಸ್ ನಿರ್ದೇಶನದ ಶುಗರ್​ ಫ್ಯಾಕ್ಟರಿ ನವೆಂಬರ್ 24 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸದ್ಯ ಟ್ರೇಲರ್​​ನಿಂದ ಗಮನ ಸೆಳೆಯುತ್ತಿರೋ ಚಿತ್ರ ಸಿನಿ ಪ್ರೇಮಿಗಳ ಮನಸ್ಸು ಕದಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.

ಇದನ್ನೂ ಓದಿ: ಸಿಬಿಎಫ್​ಸಿ ವಿರುದ್ಧ ಭ್ರಷ್ಟಾಚಾರ ಆರೋಪ: ಹೆಚ್ಚಿನ ಮಾಹಿತಿ ಹಂಚಿಕೊಂಡ ತಮಿಳು ನಟ ವಿಶಾಲ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.