ETV Bharat / entertainment

Sudeep nephew Sanchith: ಸ್ಯಾಂಡಲ್​ವುಡ್​ಗೆ 'ಜೂನಿಯರ್​ ಕಿಚ್ಚ' ಎಂಟ್ರಿ; ಸಂಚಿತ್​ ಚೊಚ್ಚಲ ಸಿನಿಮಾಗೆ ಸ್ಟಾರ್​ ನಟರ ಬೆಂಬಲ - etv bharat kannada

ನಟ ಸುದೀಪ್​ ಅಕ್ಕನ ಮಗ ಸಂಚಿತ್​ ಸಂಜೀವ್​ ಅಭಿನಯದ ಚೊಚ್ಚಲ ಸಿನಿಮಾದ ಟೈಟಲ್​ ಮತ್ತು ಕ್ಯಾರೆಕ್ಟರ್​ ಗ್ಲಿಂಪ್ಸ್​ ಅನಾವರಣಗೊಂಡಿದೆ.

sanchith sanjeev
ಸಂಚಿತ್​ ಚೊಚ್ಚಲ ಸಿನಿಮಾ 'ಜಿಮ್ಮಿಗೆ' ಸ್ಟಾರ್​ ನಟರು ಸಾಥ್​
author img

By

Published : Jun 26, 2023, 6:16 PM IST

ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ 'ಆರಡಿ ಕಟೌಟ್'​ ಅಂತಲೇ ಫೇಮಸ್​ ಆಗಿರುವ ನಟ ಕಿಚ್ಚ ಸುದೀಪ್. ಇವರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುದೀಪ್​ ಅವರ ಅಕ್ಕನ ಮಗ ಸಂಚಿತ್​ ಸಂಜೀವ್​ ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಹೆಸರಿಡದ ಚಿತ್ರಕ್ಕೆ ಅದ್ದೂರಿ ಪೂಜೆ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ದೊರಕಿದೆ. ಇದೀಗ ಸಂಚಿತ್​ ನಟನೆ ಹಾಗೂ ನಿರ್ದೇಶನ ಮಾಡ್ತಿರುವ ಈ ಸಿನಿಮಾಗೆ ಟೈಟಲ್​ ಫಿಕ್ಸ್​ ಆಗಿದೆ.

ಸಂಚಿತ್​ ಅವರ ಮೊದಲ ಸಿನಿಮಾದ ಟೈಟಲ್​ ಲಾಂಚ್​ ಕಾರ್ಯಕ್ರಮವು ಖಾಸಗಿ ಹೊಟೇಲ್​ನಲ್ಲಿ ನಡೆಯಿತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ, ಮಗಳು ಸಾನ್ವಿ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಆರ್. ಚಂದ್ರು, ಸಂಗೀತ ನಿರ್ದೇಶಕ ಗುರು ಕಿರಣ್ ಸೇರಿದಂತೆ ಕೆಲವು ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

sanchith sanjeev
ಸಂಚಿತ್​ ಚೊಚ್ಚಲ ಸಿನಿಮಾ 'ಜಿಮ್ಮಿಗೆ' ಸ್ಟಾರ್​ ನಟರು ಸಾಥ್​

ಈ ವೇಳೆ ಟೈಟಲ್​ ಜೊತೆಗೆ ಕ್ಯಾರೆಕ್ಟರ್​ ಗ್ಲಿಂಪ್ಸ್​ ಅನಾವರಣಗೊಳಿಸಲಾಯಿತು. ಸಂಚಿತ್​ ಸಿನಿಮಾಗೆ 'ಜಿಮ್ಮಿ' ಎಂದು ಹೆಸರಿಡಲಾಗಿದೆ. ಬಿಡುಗಡೆಯಾಗಿರುವ ಗ್ಲಿಂಪ್ಸ್​​ ಮಾಸ್​ ರೀತಿಯಲ್ಲಿದೆ. ಕಾರಿನಲ್ಲಿ ಬಂದಿಳಿದ ಸಂಚಿತ್​ ಸ್ಟೈಲಿಶ್​ ಆಗಿ ನಡೆದುಕೊಂಡು ಬಂದು ಸಿಗರೇಟ್​ ಸೇದುತ್ತಾ ರೌಡಿಯೊಬ್ಬನ ಬಳಿ, ಪ್ರೀತಿಲಿ ನಿಯತ್ತಿಲ್ಲ ಅಂದ್ರೆ ಏನಾಗುತ್ತೆ? ಮನಸ್ಸು ಮುರಿದು ಹೋಗುತ್ತೆ. ಅದೇ ನಮ್ಮ ವ್ಯವಹಾರದಲ್ಲಿ ನಿಯತ್ತಿಲ್ಲ ಅಂದ್ರೆ ನೀನೇ ಇರಲ್ಲ ಅಂತ ಖಡಕ್​ ಡೈಲಾಗ್​ ಹೇಳುವ ಮೂಲಕ ಭವಿಷ್ಯದ ಸ್ಟಾರ್​ ಅಂತ ಪ್ರೂವ್​ ಮಾಡಿದ್ದಾರೆ.

ಅದರಲ್ಲೂ ಸಂಚಿತ್​ ಸಂಜೀವ್​ ಕಾಣಿಸಿಕೊಂಡಿರುವ ಪರಿ ಅಂತೂ ನೋಡಿದವರು ವಾವ್​! ಅನ್ನುವಂತಿದೆ. ಒಬ್ಬ ಹೀರೋಗೆ ಬೇಕಾದ ಎಲ್ಲ ಕ್ವಾಲಿಟೀಸ್​ ಸಂಚಿತ್​ನಲ್ಲಿ ಎದ್ದು ಕಾಣುತ್ತಿವೆ. ಇಷ್ಟು ಮಾತ್ರವಲ್ಲದೇ ಸಂಚಿತ್​​ ಧ್ವನಿ ಕೂಡ ಕಿಚ್ಚ ಸುದೀಪ್​ ತರಾನೇ ಇದೆ. ಇದು 'ಜಿಮ್ಮಿ'ಗೆ ಪ್ಲಸ್​ ಪಾಯಿಂಟ್​ ಅಂತಾನೇ ಹೇಳಬಹುದು. ಒಟ್ಟಾರೆಯಾಗಿ ನೋಡುವುದಾದರೆ, ಸಂಚಿತ್ ಅವರು ಪ್ರಸ್ತುತ​ ಚಿತ್ರರಂಗಕ್ಕೆ ಏನು ಬೇಕೋ, ಅದನ್ನೇ ಕೊಡುವುದಕ್ಕಾಗಿ ತಯಾರಿ ಮಾಡಿಕೊಂಡು ಬಂದಂತೆ ಕಾಣಿಸುತ್ತಿದೆ.

  • " class="align-text-top noRightClick twitterSection" data="">

ವಿಶೇಷವೇನೆಂದರೆ, ಸಂಚಿತ್​ ಅವರನ್ನು ಶಿವರಾಜ್ ​ಕುಮಾರ್​ ಹಾಗೂ ರವಿಚಂದ್ರನ್ ಅದ್ದೂರಿಯಾಗಿ ಇಂಡಸ್ಟ್ರಿಗೆ ಸ್ವಾಗತಿಸಿದ್ದಾರೆ. ಶಿವಣ್ಣ ಮಾತನಾಡಿ, "ಮೊದಲನೆಯದಾಗಿ ಸಂಚಿತ್‌ಗೆ ಎಸ್ ಗ್ರೂಪ್‌ಗೆ ಸ್ವಾಗತ. ಸುದೀಪ್‌, ಶಿವರಾಜ್‌ ಕುಮಾರ್, ಈಗ ಸಂಚಿತ್. ಎಸ್​ ಗ್ರೂಪ್​ ಯಾವಾಗಲೂ ಸೂಪರ್​ ಆಗಿರುತ್ತದೆ" ಎಂದರು. ಬಳಿಕ ರವಿಚಂದ್ರನ್​, "ಈ ವೇದಿಕೆ ಮೇಲೆ ಶಿವಣ್ಣ, ನಮ್ಮದು ಎಸ್ ಗ್ರೂಪ್ ಅಂದ್ಬುಟ್ರು. ಹಾಗಾದರೆ ಆರ್​ ಬಗ್ಗೆ ಮಾತಾಡೋದೇ ವೇಸ್ಟ್​" ಎಂದು ಕಿಚಾಯಿಸಿದರು. ಕೂಡಲೇ ಶಿವಣ್ಣ, "ಆರ್​ನಿಂದ ರಾಜ್​ಕುಮಾರ್​ ಅವ್ರೇ ಇದ್ದಾರೆ" ಎಂಬ ಉತ್ತರ ಕೊಟ್ಟು, ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.

ಮಾತು ಮುಂದುವರೆಸಿದ ಕ್ರೇಜಿಸ್ಟಾರ್, "ಸಂಜೀವ್ ಅವರು ನಮಗೆ ಹಳೆಯ ಪರಿಚಯ. ಅವಾಗೆಲ್ಲ ಅಂಬರೀಶ್ ಜೊತೆಗೆ ನಾವೆಲ್ಲ ಸಂಜೀವ ಅವರ ಹೋಟೆಲ್‌, ಮನೆಗೆಲ್ಲ ಹೋಗಿದ್ದೆವು. ಈಗ ಅವರ ಕುಟುಂಬದಿಂದ ನೀವು ಬರುತ್ತಿರುವುದು ನಮಗೆ ತುಂಬಾ ಖುಷಿ ಆಗುತ್ತಿದೆ. ಟೀಸರ್ ನೋಡಿದ ಮೇಲೆ ನನಗೆ ಅನ್ನಿಸಿದ್ದು ಏನಂದ್ರೆ, ಈ ಸಿನಿಮಾದಿಂದ ಒಂದು ವೈಬ್ರೇಷನ್ ಅಂತೂ ಕ್ರಿಯೆಟ್ ಆಗುತ್ತದೆ. ಇನ್ನು ಮುಂದೆ ಸೆನ್ಸೇಷನ್ ಕ್ರಿಯೆಟ್ ಮಾಡಬೇಕು. ಸಂಚಿತ್‌ನ ನೋಡಿದಾಗ ಸುದೀಪ್‌ ಅವರನ್ನು ನೋಡಿದ ಹಾಗೆಯೇ ಆಗುತ್ತದೆ. ವಾಸುಕಿ ವೈಭವ್ ಮ್ಯೂಸಿಕ್ ತುಂಬಾ ಚೆನ್ನಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ​

ಕೊನೆಯಲ್ಲಿ, ಮಾವ ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ಸಂಚಿತ್​​ ಮಾತನಾಡಿ, "ನಾನು ಮಾಮನ ಕೆಲಸವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಏನೇ ಮಾಡಿದರೂ ಬಹಳ ಶ್ರದ್ಧೆಯಿಂದ ಮಾಡಬೇಕು ಅನ್ನೋದನ್ನು ಅವರಿಂದಲೇ ಕಲಿತಿದ್ದೇನೆ" ಎಂದರು. ಸುದೀಪ್​ ಮಾತನಾಡಿ, "ನನಗೆ ನಮ್ಮ ಕುಟುಂಬದ ಕುಡಿಯನ್ನು ಇಂಡಸ್ಟ್ರಿಗೆ ಪರಿಚಯಿಸಬೇಕು ಅಂತ ಬಂದಾಗ ನನಗೆ ಶಿವಣ್ಣ ಹಾಗೂ ರವಿಯಣ್ಣ ಇಬ್ಬರು ಸಂಚಿತ್​ನ ಕರೆದುಕೊಂಡು ಬಂದು ಇಂಟ್ರಡ್ಯೂಸ್​ ಮಾಡಿಸಿದ್ದು ಬಹಳನೇ ಖುಷಿ ಕೊಡ್ತು. ಇವತ್ತು ನಮ್ಮ ಇಂಡಸ್ಟ್ರಿ ಇಷ್ಟು ದೊಡ್ಡದಾಗಿ ಬೆಳೆದಿದೆ ಅಂದ್ರೆ ಅದಕ್ಕೆ ಶಿವರಾಜ್​ ಕುಮಾರ್ ಹಾಗೂ ರವಿಚಂದ್ರನ್ ಅವರಂತಹ ಸ್ಟಾರ್​ ನಟರೇ ಕಾರಣ" ಎಂದು ಹೆಮ್ಮೆಯಿಂದ ಹೇಳಿದರು.

ಸದ್ಯ ಜಿಮ್ಮಿ ಸಿನಿಮಾದ ಟೈಟಲ್, ಜೊತೆಗೆ ಗ್ಲಿಂಪ್ಸ್​ ರಿಲೀಸ್ ಆಗಿದ್ದು, ಮುಂದಿನ ತಿಂಗಳಿನಿಂದ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆಗಳಿವೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆ.ಪಿ. ಶ್ರೀಕಾಂತ್, ಜಿ. ಮನೋಹರನ್ ಹಾಗೂ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: Bengaluru Boys: 'ನನ್ನ ಯೌವ್ವನ‌ ಟಪಾಸ್' ಅಂತಿದ್ದಾರೆ ನಟ ಚಿಕ್ಕಣ್ಣ..ಸಾಂಗ್​ನಿಂದಲೇ ಸೌಂಡ್​ ಮಾಡುತ್ತಿದೆ 'ಬೆಂಗಳೂರು ಬಾಯ್ಸ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.