ETV Bharat / entertainment

ವಿಕ್ರಾಂತ್ ರೋಣನ ಜೊತೆ ನಗು ಮುಖದ ರಾಜಕುಮಾರನಿಗೆ ವಿಶೇಷ ಗೌರವ - ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನದಂದು 50 ಅಡಿ ಕಟೌಟ್​ಗಳ ಮಧ್ಯೆ ಸುದೀಪ್ ಜೊತೆಗೆ ಪುನೀತ್ ರಾಜ್‍ಕುಮಾರ್ ಕಟೌಟ್ ಹಾಕುವ ಮೂಲಕ ಅವರಿಬ್ಬರ ಸ್ನೇಹಕ್ಕೆ ಸಾಕ್ಷಿಯಾಗಲಿದೆ.

ಪುನೀತ್ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್

author img

By

Published : Jul 22, 2022, 4:00 PM IST

'ವಿಕ್ರಾಂತ್ ರೋಣ' ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವಾದ್ಯಂತ ಕ್ರೇಜ್ ಹುಟ್ಟಿಸಿರೋ ಸಿನಿಮಾ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್​ನಿಂದ ಹಿಡಿದು ಹಾಡುಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಕಿಚ್ಚ ಸುದೀಪ್ ಈ‌ ಚಿತ್ರದಲ್ಲಿ ಪವರ್​ಫುಲ್​ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾವನ್ನ ತ್ರಿಡಿಯಲ್ಲಿ ಕಣ್ಣು ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಇನ್ನು ಒಂದು ವಾರವಷ್ಟೇ ಬಾಕಿ ಇದೆ. ಅಷ್ಟರಲ್ಲಿ ಕಿಚ್ಚನ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಕಿಚ್ಚ ಸುದೀಪ್ ಅವರ ಕಟೌಟ್​
ಕಿಚ್ಚ ಸುದೀಪ್ ಅವರ ಕಟೌಟ್​

ಸದ್ಯಕ್ಕೆ ಬೆಂಗಳೂರಿನ ಶೇಷಾದ್ರಿ ರಸ್ತೆಯ ಆನಂದ್ ಆರ್ಟ್ಸ್ ನಲ್ಲಿ ವಿಕ್ರಾಂತ್ ರೋಣ ಕಟೌಟ್​ಗಳು ರೆಡಿಯಾಗುತ್ತಿವೆ. ಮುಖ್ಯವಾಗಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನದಂದು 50 ಅಡಿ ಕಟೌಟ್​ಗಳ ಮಧ್ಯೆ ಸುದೀಪ್ ಜೊತೆಗೆ ಪುನೀತ್ ರಾಜ್‍ಕುಮಾರ್ ಕಟೌಟ್ ಹಾಕುವ ಮೂಲಕ ಅವರಿಬ್ಬರ ಸ್ನೇಹಕ್ಕೆ ಸಾಕ್ಷಿಯಾಗಲಿದೆ. ಹೌದು, ಬೆಂಗಳೂರಿನ ನವರಂಗ್ ಚಿತ್ರಮಂದಿರ ಸೇರಿದಂತೆ ನಾಲ್ಕು ಚಿತ್ರ ಮಂದಿರಗಳ‌ ಮುಂದೆ ಇವರಿಬ್ಬರು ಒಟ್ಟಿಗೆ ಇರುವ ಕಟೌಟ್ ವಿಜೃಂಭಿಸಲಿವೆ.

ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿ ಆನಂದ್ ಆರ್ಟ್ಸ್ ನಲ್ಲಿ ವಿಕ್ರಾಂತ್ ರೋಣ ಕಟೌಟ್​ಗಳು ತಯಾರಾಗುತ್ತಿರುವುದು

ಇನ್ನು ಕನ್ನಡದ ನಗು ಮುಖದ ರಾಜಕುಮಾರ ಅಂತಾ ಕರೆಯಿಸಿಕೊಂಡ ಪುನೀತ್ ಚಿತ್ರರಂಗದ ಎಲ್ಲರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಬಹಳ‌ ಗೌರವದಿಂದ ಕಾಣುತ್ತಿದ್ದರು. ಈ ಕಾರಣಕ್ಕಾಗಿ ಪವರ್ ಸ್ಟಾರ್ ಅಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅದರಲ್ಲಿ ಕಿಚ್ಚ ಸುದೀಪ್​ ಮತ್ತು ಪುನೀತ್​ ರಾಜ್​ಕುಮಾರ್​ ಸ್ನೇಹ ಬಾಲ್ಯದಿಂದಲೂ ಇದೆ.

ಕಟೌಟ್​ ರೂಪದಲ್ಲಿ ಸಿದ್ಧ: ಈ ಇಬ್ಬರು‌ ನಟರು ಸ್ಟಾರ್ ನಟರು ಆಗಿದ್ದರೂ ಆ ಸ್ನೇಹವನ್ನ ಹಾಗೇ ಮುಂದುವರೆಯಿಸಿಕೊಂಡು ಬಂದಿದ್ದರು. ಅದರಲ್ಲಿ ಶಿವಮೊಗ್ಗಕ್ಕೆ ಒಮ್ಮೆ ಪುನೀತ್ ಹೋಗಿದ್ದಾಗ ಸುದೀಪ್ ಜೊತೆ ಬಾಲ್ಯದಲ್ಲಿ ತೆಗೆದಿದ್ದ ಫೋಟೋಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದೇ ಫೋಟೋ ಇದೀಗ ಕಟೌಟ್​ ರೂಪದಲ್ಲಿ ಸಿದ್ಧವಾಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನ ಬೆಂಗಳೂರಿನ ನಾಲ್ಕು ಕಡೆ ಇಬ್ಬರ ಸ್ನೇಹವನ್ನು ಸಾರುವ ಈ ಕಟೌಟ್​ಗಳನ್ನು ಚಿತ್ರಮಂದಿರಗಳ ಮುಂದೆ ನಿಲ್ಲಿಸಲು ಸಿದ್ಧತೆ ನಡೆದಿದೆ.

ವಿಕ್ರಾಂತ್ ರೋಣ ಸಿನಿಮಾದ ಕಟೌಟ್​
ವಿಕ್ರಾಂತ್ ರೋಣ ಸಿನಿಮಾದ ಕಟೌಟ್​

ಹಲವಾರು ಹೈಲೆಟ್ಸ್​​ಗಳಿಗೆ ಸಾಕ್ಷಿ: ಇನ್ನು ವಿಕ್ರಾಂತ್ ರೋಣ ಸಿನಿಮಾದ ಕ್ರೇಜ್ ನೋಡುವುದಾದರೆ ಕರ್ನಾಟಕ ಅಲ್ಲದೇ ಮುಂಬೈ, ದೆಹಲಿ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು,‌ ಕೇರಳಗಳಿಗೆ 50 ಅಡಿ ಎತ್ತರದ ಕಟೌಟ್​ಗಳನ್ನ ಹೊರ ರಾಜ್ಯಗಳಿಗೆ ಬೆಂಗಳೂರಿನಿಂದ ಕಳುಹಿಸಲಾಗುತ್ತಿದೆ. ಈಗಾಗಲೇ ಆನಂದ್ ಆರ್ಟ್ಸ್ ಹಾಗೂ ಕೃಷ್ಣ ನೂರಾರು ಕಟೌಟ್ಸ್ ಗಳನ್ನ ರೆಡಿ ಮಾಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ, ‌ನಿರ್ಮಾಪಕ ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೂ ಮುಂಚೆ ಹಲವಾರು ಹೈಲೆಟ್ಸ್​​ಗಳಿಗೆ ಸಾಕ್ಷಿಯಾಗುತ್ತಿದೆ.

ಓದಿ: ಪೃಥ್ವಿ ಅಂಬರ್ ನಟನೆಯ 'ದೂರದರ್ಶನ' ಸಿನಿಮಾದ ಫಸ್ಟ್ ಲುಕ್ ರಿವೀಲ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.