ETV Bharat / entertainment

ಅರ್ಜುನ್ ಎಷ್ಟು ಸ್ನೇಹಿತರ ಜೊತೆ ಮಲಗಿದ್ದಾರೆ: ಕರಣ್ ಪ್ರಶ್ನೆಗೆ ಸೋನಂ ಕಪೂರ್ ಹೇಳಿದ್ದೇನು? - ಅರ್ಜುನ್ ಕಪೂರ್

ಕರಣ್ ಜೋಹರ್ ಅವರು 'ಕಾಫಿ ವಿತ್ ಕರಣ್' ಶೋಗೆ ಸಂಬಂಧಿಸಿದ ಪ್ರೋಮೋ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈ ವಾರ ಸೋನಂ ಕಪೂರ್ ಮತ್ತು ಅರ್ಜುನ್ ಕಪೂರ್ ಅತಿಥಿಗಳಾಗಿ ಆಗಮಿಸಿದ್ದು, ಈ ಎಪಿಸೋಡ್​ಅನ್ನ ಡಿಸ್ನಿ ಫ್ಲಸ್​ ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 11 ರಂದು ನೋಡಬಹುದು.

Arjun Kapoor
'ಕಾಫಿ ವಿತ್ ಕರಣ್' ಶೋಗೆ ಸಂಬಂಧಿಸಿದ ಪ್ರೋಮೋ ವಿಡಿಯೋ
author img

By

Published : Aug 10, 2022, 7:29 AM IST

Updated : Aug 10, 2022, 8:19 AM IST

ಬಾಲಿವುಡ್​ನ ದೊಡ್ಡ ನಿರ್ದೇಶಕ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುತ್ತಿರುವ 'ಕಾಫಿ ವಿತ್ ಕರಣ್' ಶೋಗೆ ಸಂಬಂಧಿಸಿದ ಹಲವು ವಿಷಯಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಕಾರ್ಯಕ್ರಮಕ್ಕೆ ಬಂದಿದ್ದ ಸೆಲೆಬ್ರಿಟಿಗಳ ಬಳಿ ಕರಣ್ ಬೋಲ್ಡ್ ಆಗಿ ಮಾತನಾಡುತ್ತಾರೆ. ಈ ವಾರ ಸಹೋದರ - ಸಹೋದರಿಯರಿಬ್ಬರು ಕಾಣಿಸಿಕೊಂಡಿದ್ದು, ಹಲವು ಇಂಟ್ರೆಸ್ಟಿಂಗ್​ ಸಂಗತಿ ಹಂಚಿಕೊಂಡಿದ್ದಾರೆ.

ಸೋನಂ ಕಪೂರ್ ಮತ್ತು ಅರ್ಜುನ್ ಕಪೂರ್ 'ಕಾಫಿ ವಿತ್ ಕರಣ್‌' ಶೋಗೆ ಅತಿಥಿಗಳಾಗಿ ಆಗಮಿಸಿದ್ದು, ಕರಣ್ ಜೋಹರ್ ಅವರು ಹಂಚಿಕೊಂಡಿರುವ ಇತ್ತೀಚಿನ ಪ್ರೋಮೋ ವಿಡಿಯೋ ನಗು , ಮನರಂಜನೆಯಿಂದ ಕೂಡಿದೆ. ಸೋನಂ ಬಳಿ ಅರ್ಜುನ್ ಎಷ್ಟು ಸ್ನೇಹಿತರ ಜೊತೆ ಮಲಗಿದ್ದಾರೆ? ಎಂದು ಕರಣ್ ಜೋಹರ್ ಕೇಳಿದಾಗ, ನಟಿ ಪ್ರತಿಕ್ರಿಯಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

'ಕಾಫಿ ವಿತ್ ಕರಣ್' ಶೋಗೆ ಸಂಬಂಧಿಸಿದ ಪ್ರೋಮೋ ವಿಡಿಯೋ

ನಾನು ಈ ಕುರಿತಾದ ವಿಷಯಗಳನ್ನ ಅವನ ಬಳಿ ಚರ್ಚಿಸುವುದಿಲ್ಲ. ಆದರೆ, ನನ್ನ ಸಹೋದರರ ನಡುವೆ ಯಾರೂ ಉಳಿದಿಲ್ಲ ಎಂದರು. ಈ ವೇಳೆ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿತು. ಪ್ರೋಮೋ ವಿಡಿಯೋಗೆ ಸೋನಂ ಸಹೋದರ ಹರ್ಷವರ್ಧನ್ ಕಪೂರ್ ಕೂಡ ಪ್ರತಿಕ್ರಿಯೆ ನೀಡಿದ್ದು, "ಓ ದೇವರೇ" ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೆ, ಅರ್ಜುನ್ ಕಪೂರ್ ತನ್ನ ಫೋನ್‌ನಲ್ಲಿ ಮಲೈಕಾ ಅರೋರಾ ಹೆಸರನ್ನು ಏನಂತ ಸೇವ್ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಎಪಿಸೋಡ್​ ಅನ್ನ ಡಿಸ್ನಿ ಫ್ಲಸ್​ ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 11 ರಂದು ನೋಡಬಹುದು.

ಇದನ್ನೂ ಓದಿ: 'ಕಾಫಿ ವಿತ್ ಕರಣ್' ಶೋನಲ್ಲಿ ಕಾಣಿಸಿಕೊಳ್ಳುತ್ತಾರಾ ಸುಹಾನಾ ಖಾನ್?: ಕರಣ್ ಜೋಹರ್ ಸ್ಪಷನೆ

Last Updated : Aug 10, 2022, 8:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.