ETV Bharat / entertainment

ಸುಶಾಂತ್ ಸಿಂಗ್ ರಜಪೂತ್ ನೆನೆದು ಕಣ್ಣೀರಿಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ

author img

By

Published : Mar 26, 2023, 4:49 PM IST

ಸಂದರ್ಶನವೊಂದರಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜ್​ಪೂತ್ ಬಗ್ಗೆ ಮಾತನಾಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾವುಕರಾಗಿದ್ದಾರೆ.

Smriti Irani on Sushant suicide
ಸುಶಾಂತ್ ಬಗ್ಗೆ ಸ್ಮೃತಿ ಇರಾನಿ ಹೇಳಿಕೆ

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜ್​ಪೂತ್ ಅವರನ್ನು ನೆನೆದು ಮಾಜಿ ನಟಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾವುಕರಾದರು. 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಧಾರವಾಹಿಯಲ್ಲಿ ಬಣ್ಣ ಹಚ್ಚಿರುವ ಸ್ಮೃತಿ ಇರಾನಿ ಸುಶಾಂತ್‌ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ. ಆ ದುರದೃಷ್ಟಕರ ಘಟನೆಯ ಮೊದಲು ನಟನಿಗೆ ತಾವು ಕೊಟ್ಟ ಸಲಹೆಯನ್ನು ನೆನಪಿಸಿಕೊಂಡರು. ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಸುಶಾಂತ್‌ಗೆ ಹೇಳಿದ್ದೆ ಎಂದು ಸ್ಮೃತಿಕ ಕೆಲ ನೆನಪುಗಳನ್ನು ಹಂಚಿಕೊಂಡಿದ್ದಾರೆ.

2020 ರ ಜೂನ್‌ನಲ್ಲಿ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜ್​ಪೂತ್ ಆತ್ಮಹತ್ಯೆಗೆ ಶರಣಾದರು. ದಿವಂಗತ ನಟನನ್ನು ನೆನಪಿಸಿಕೊಂಡು ಸ್ಮೃತಿ ಇರಾನಿ ಕಣ್ಣೀರು ಸುರಿಸಿದ್ದಾರೆ. ಆಗ ನಟನಿಗೆ ಕೇವಲ 34 ವರ್ಷ. ನಟನ ನಿಧನದ ಬಗ್ಗೆ ತಿಳಿದಾಗ ನಾನು ವಿಡಿಯೋ ಕಾನ್ಫರೆನ್ಸ್​​ನಲ್ಲಿದ್ದೆ ಎಂದು ಹೇಳಿದರು.

'ದಯವಿಟ್ಟು ನಿಮ್ಮನ್ನು ನೀವು ಕೊಲ್ಲಬೇಡಿ'.... ಸುಶಾಂತ್ ನಿಧನರಾದ ದಿನ ನಾನು ವಿಡಿಯೋ ಕಾನ್ಫರೆನ್ಸ್​​ನಲ್ಲಿದ್ದೆ. ಬಹಳ ಜನ ಸೇರಿದ್ದರು. ನಟನ ಸುದ್ದಿ ತಿಳಿಯಿತು. ಅವರು ನನಗೆ ಏಕೆ ಕರೆ ಮಾಡಲಿಲ್ಲ ಎಂದು ಆ ಕ್ಷಣ ನಾನು ಆಶ್ಚರ್ಯಪಟ್ಟೆ. ಸುಶಾಂತ್​ ತಕ್ಷಣ ಕರೆ ಮಾಡಬೇಕಿತ್ತು. 'ದಯವಿಟ್ಟು ನಿಮ್ಮನ್ನು ನೀವು ಕೊಲ್ಲಬೇಡಿ' ಎಂದು ನಾನು ತಿಳಿಸಿದ್ದೆ. ಆದ್ರೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿಸಿದರು.

  • " class="align-text-top noRightClick twitterSection" data="">

ಇದನ್ನೂ ಓದಿ: ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ.. ಡ್ರೀಮ್​ ಗರ್ಲ್​ ಸಾವಿನಿಂದ ಅಭಿಮಾನಿಗಳಿಗೆ ಆಘಾತ

ತಕ್ಷಣವೇ ಸುಶಾಂತ್ ಸಿಂಗ್ ರಜಪೂತ್ ಅವರ ಕೈ ಪೋ ಚೆ (Kai Po Che) ಚಿತ್ರದ ಸಹನಟ ಅಮಿತ್ ಸಾಧ್ ಅವರನ್ನು ಸಂಪರ್ಕಿಸಿದೆ. ಅಮಿತ್ ಸಾಧ್ ಬಗ್ಗೆ ನನಗೆ ಭಯವಾಗಿತ್ತು. ನಾನು ಅವರಿಗೆ ಕರೆ ಮಾಡಿ ವಿಚಾರಿಸಿದೆ. ಅವರೂ ಕೂಡ ಏನಾದರೂ ಮೂರ್ಖತನದ ಕೆಲಸ ಮಾಡುತ್ತಾರೆಂದು ನನಗೆ ತಿಳಿದಿತ್ತು. 'ನಾನಿನ್ನು ಇಲ್ಲಿ ಇರಬೇಕಿಲ್ಲ. ಈ ಮೂರ್ಖ ಏನು ಮಾಡಿಬಿಟ್ಟ' ಎಂದು ಅಮಿತ್ ಸಾಧ್ ಹೇಳಿದಾಗ ಈತನೂ ಏನಾದರು ತೊಂದರೆ ಮಾಡಿಕೊಳ್ಳಬಹುದು ಎಂದು ಭಯವಿತ್ತು. ಹಾಗಾಗಿ ಅಂದು ಇಬ್ಬರೂ ಆರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದೇವೆ ಎಂದು ಸ್ಮೃತಿ ತಿಳಿಸಿದರು.

ಇದನ್ನೂ ಓದಿ: 'ಗರ್ಭಪಾತವಾಗಿದ್ರೂ ಮರುದಿನವೇ ಕೆಲಸಕ್ಕೆ ಬನ್ನಿ ಅಂದಿದ್ರು': ಸ್ಮೃತಿ ಇರಾನಿ ಹೇಳಿದ ಕಹಿ ಘಟನೆ

'ಎಂ ಎಸ್​ ಧೋನಿ' ಎಂಬ ಸೂಪರ್​ ಹಿಟ್ ಚಿತ್ರ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸುಶಾಂತ್​ ಸಿಂಗ್​​​ ರಜ್​ಪೂತ್ ತಮ್ಮ 34ನೇ ಹರೆಯದಲ್ಲಿ ​ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಪವಿತ್ರ ರಿಶ್ತಾ ಎಂಬ ಸೀರಿಯಲ್​ ಮೂಲಕ ಕಿರುತರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸುಶಾಂತ್​ ಅವರು 'ಕೈ ಪೋ ಚೆ' ಸಿನಿಮಾ ಮೂಲಕ ಬಾಲಿವುಡ್​​ ಪ್ರವೇಶಿಸಿದ್ದರು. ನಂತರ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದ್ರೆ 2020ರ ಜೂನ್​ 14ರಂದು ಜೀವನದ ಪಯಣ ಮುಗಿಸಿ ಅಸಂಖ್ಯಾತ ಅಭಿಮಾನಿಗಳ ಕಣ್ಣೀರಿಗೆ ಕಾರಣರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.