ಖ್ಯಾತ ಗಾಯಕಿ ಬಾಂಬೆ ಜಯಶ್ರೀ (Carnatic singer Bombay Jayashri) ಅವರು ಇತ್ತೀಚೆಗೆ ಯುಕೆಯಲ್ಲಿ ತಮ್ಮ ಹೋಟೆಲ್ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಲಾಗಿದೆ.
ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ ಖ್ಯಾತಿ ಇವರದ್ದು. ಮೆದುಳಿನ ಕಾಯಿಲೆಯಿಂದ (brain aneurysm) ಬಳಲುತ್ತಿದ್ದು, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ.
58 ವರ್ಷದ ಗಾಯಕಿ ಬಾಂಬೆ ಜಯಶ್ರೀ ಇತ್ತೀಚೆಗೆ ಒಂದು ದಶಕದ ನಂತರ ಇಂಗ್ಲೆಂಡ್ಗೆ ಭೇಟಿ ಕೊಟ್ಟಿದ್ದರು. ಇಂದು ಲಂಡನ್‌ನ ಟಂಗ್ ಸಭಾಂಗಣದಲ್ಲಿ, ಲಿವರ್‌ಪೂಲ್ ವಿಶ್ವವಿದ್ಯಾಲಯದ ಯೊಕೊ ಒನೊ ಲೆನನ್ ಸೆಂಟರ್‌ನಲ್ಲಿ ಸಂಗೀತ ಪ್ರದರ್ಶನ ನೀಡಲಿದ್ದರು.
ಪ್ರಸಿದ್ಧ ಗಾಯಕಿಗೆ ಇತ್ತೀಚೆಗೆ ಚೆನ್ನೈನಲ್ಲಿರುವ ದಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ "ಸಂಗೀತ ಕಲಾನಿಧಿ" ಎಂಬ ಪ್ರತಿಷ್ಠಿತ ಬಿರುದನ್ನು ನೀಡಿತ್ತು. ಇರ್ಫಾನ್ ಅಭಿನಯದ 'ಲೈಫ್ ಆಫ್ ಪೈ' ಚಿತ್ರದ 'Pi's Lullaby' ಶೀರ್ಷಿಕೆಯ ಹಾಡಿಗೆ ಅವರು ಆಸ್ಕರ್ ನಾಮನಿರ್ದೇಶನವನ್ನು ಸ್ವೀಕರಿಸಿದ್ದರು. 2021ರಲ್ಲಿ, ಅವರು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಕ್ಕೆ ಚಾಲನೆ: ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದ ಚಿರಂಜೀವಿ
ವಿಭಿನ್ನ, ಸುಂದರ ಧ್ವನಿ ಮೂಲಕ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ ಹೆಚ್ಚಿನ ಸಂಖ್ಯೆಯ ಹಾಡುಗಳನ್ನು ಹಾಡಿ ಇವರು ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ: ಡೇಟಿಂಗ್ ವದಂತಿ ಬಗ್ಗೆ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯೆ