ETV Bharat / entertainment

ರಿಷಬ್​ ಶೆಟ್ಟಿ ಕೈತುಂಬಾ ಸೈಮಾ ಪ್ರಶಸ್ತಿ​; ವಿಡಿಯೋ ಶೇರ್ ಮಾಡಿದ ಡಿವೈನ್​ ಸ್ಟಾರ್- ನೋಡಿ - Rishab shetty IN SIIMA

SIIMA Awards: ಸೈಮಾ ಅವಾರ್ಡ್ ಹಿಡಿದು ಸಂಭ್ರಮಿಸಿರುವ ವಿಡಿಯೋವನ್ನು ನಟ ರಿಷಬ್​ ಶೆಟ್ಟಿ ತಮ್ಮ ಇನ್​​ಸ್ಟಾ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

Rishab shetty IN SIIMA Awards 2023
ನಟ ರಿಷಬ್​ ಶೆಟ್ಟಿ
author img

By ETV Bharat Karnataka Team

Published : Sep 17, 2023, 10:37 AM IST

ಸೈಮಾ (SIIMA). ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ. ಶುಕ್ರವಾರ ಮತ್ತು ಶನಿವಾರ (ಸೆಪ್ಟೆಂಬರ್​ 15, 16) ಸೌತ್​ ಇಂಡಿಯನ್​​ ಇಂಟರ್​ನ್ಯಾಶನಲ್​​ ಮೂವಿ ಅವಾರ್ಡ್ಸ್-2023 ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸ್ಟಾರ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ಸಾಧಕರು, ತಂತ್ರಜ್ಞರೂ ಸೇರಿದಂತೆ ದಕ್ಷಿಣ ಚಿತ್ರರಂಗ ಈ ವರ್ಣರಂಜಿತ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ದುಬೈನ ವರ್ಲ್ಡ್ ಟ್ರೇಡ್​ ಸೆಂಟರ್‌ನಲ್ಲಿ ನಡೆದ ವೈಭವದ ಕಾರ್ಯಕ್ರಮದಲ್ಲಿ ಕನ್ನಡದ ಕಂಪೂ ಹರಡಿತು.

ಹಲವು ವಿಭಾಗಗಳಲ್ಲಿ ಕನ್ನಡದ ಸಿನಿಮಾಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿವೆ. ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಜಗದಗಲ ಪಸರಿಸಿದ 'ಕಾಂತಾರ' ಸಿನಿಮಾ 10 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಕಾಂತಾರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡ ಸಿನಿಮಾ. ರಿಷಬ್​ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ ಚಿತ್ರಕ್ಕೆ ಪ್ರೇಕ್ಷಕರಷ್ಟೇ ಅಲ್ಲದೇ ಸಿನಿಮಾ ಎಂಬ ಬಣ್ಣದ ಲೋಕದ ಗಣ್ಯಾತಿಗಣ್ಯರು ಫುಲ್​ ಮಾರ್ಕ್ಸ್ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸೂಪರ್​ ಹಿಟ್​ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಖ್ಯಾತನಾಮರು - ರಿಷಬ್​, ರಕ್ಷಿತ್, ಯಶ್​​​​​ ಸೇರಿ ಹಲವರಿಗೆ ಒಲಿದ ಸೈಮಾ

ಸೈಮಾ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸುಂದರ ವಿಡಿಯೋ ಹಂಚಿಕೊಂಡಿದೆ. ಅದನ್ನು ಡಿವೈನ್​ ಸ್ಟಾರ್​ ತಮ್ಮ ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ರಿಷಬ್​ ಶೆಟ್ಟಿ ಕೈ ತುಂಬಾ ಸೈಮಾ ಅವಾರ್ಡ್ಸ್ ಹಿಡಿದು ಕ್ಯಾಮರಾಗೆ ಪೋಸ್ ಕೊಡುತ್ತಿರುವ ದೃಶ್ಯವನ್ನು ನೋಡಬಹುದು. ಪತ್ನಿ ಪ್ರಗತಿ ಶೆಟ್ಟಿ ಜೊತೆಗಿದ್ದರು. ರಿಷಬ್ ಶೆಟ್ಟಿ ಬ್ಲ್ಯಾಕ್​ ಡ್ರೆಸ್​​ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಉಡುಗೆಯಲ್ಲಿ ಕರಾವಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರವಿತ್ತು.

ಕಾಂತಾರ ವಿವಿಧ ವಿಭಾಗಗಳಲ್ಲಿ ಗೆದ್ದ 10 ಸೈಮಾ ಪ್ರಶಸ್ತಿಗಳು:

  1. ರಿಷಬ್​ ಶೆಟ್ಟಿ - ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
  2. ರಿಷಬ್​ ಶೆಟ್ಟಿ - ಅತ್ಯುತ್ತಮ ನಟ ಪ್ರಶಸ್ತಿ (ವಿಮರ್ಷಕರ ಆಯ್ಕೆ).
  3. ರಿಷಬ್​ ಶೆಟ್ಟಿ - ಅದ್ಭುತ ಕಥೆಗೆ ವಿಶೇಷ ಮೆಚ್ಚುಗೆ ಪ್ರಶಸ್ತಿ.
  4. ಅಚ್ಯುತ್​ ಕುಮಾರ್ - ಬೆಸ್ಟ್ ನೆಗೆಟಿವ್​ ರೋಲ್​ ಪ್ರಶಸ್ತಿ.
  5. ವಿಜಯ್​ ಪ್ರಕಾಶ್​​ - ಅತ್ಯುತ್ತಮ ಗಾಯಕ ಪ್ರಶಸ್ತಿ
  6. ಪ್ರಕಾಶ್​ ತುಮಿನಾಡು - ಬೆಸ್ಟ್ ಕಾಮಿಡಿ ನಟ ಪ್ರಶಸ್ತಿ.
  7. ಸಪ್ತಮಿ ಗೌಡ - ಅತ್ಯುತ್ತಮ ನಟಿ ಪ್ರಶಸ್ತಿ ​(ವಿಮರ್ಷಕರ ಆಯ್ಕೆ).
  8. ಅಜನೀಶ್​ ಲೋಕನಾಥ್ - ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ.
  9. ಪ್ರಮೋದ್​ ಮರವಂತೆ - ಅತ್ಯುತ್ತಮ ಸಾಹಿತ್ಯ ಬರಹಗಾರ ಪ್ರಶಸ್ತಿ.
  10. ಮುಕೇಶ್​​ ಲಕ್ಷ್ಮಣ್​​ - ವಿಶೇಷ ಮೆಚ್ಚುಗೆ ಪ್ರಶಸ್ತಿ. ರಿಷಬ್​ ಶೆಟ್ಟಿ ಮೂರು ಪ್ರಶಸ್ತಿಗಳನ್ನು ಪಡೆದಿದ್ದರೆ, ಉಳಿದ ಏಳು ಪ್ರಶಸ್ತಿಗಳು ಚಿತ್ರತಂಡದ ಪಾಲಾಗಿವೆ.

ಇದನ್ನೂ ಓದಿ: SIIMA 2023: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಸುಮಧುರ ಕ್ಷಣಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.