ETV Bharat / entertainment

ಕಿಯಾರಾ ಅಡ್ವಾಣಿ ನಟನೆಯ 'ಸತ್ಯಪ್ರೇಮ್ ಕಿ ಕಥಾ' ಟ್ರೇಲರ್​ ಮೆಚ್ಚಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ - ನಟ ಕಾರ್ತಿಕ್ ಆರ್ಯನ್

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟನೆಯ ಸತ್ಯಪ್ರೇಮ್ ಕಿ ಕಥಾ' ಟ್ರೇಲರ್‌ಗೆ ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಪ್ರತಿಕ್ರಿಯಿಸಿದ್ದಾರೆ.

Satyaprem Ki Katha
ಸತ್ಯಪ್ರೇಮ್ ಕಿ ಕಥಾ
author img

By

Published : Jun 6, 2023, 6:42 PM IST

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಕಾರ್ತಿಕ್ ಆರ್ಯನ್ ತಮ್ಮ ಮುಂಬರುವ ಪ್ರೇಮಕಥೆ 'ಸತ್ಯಪ್ರೇಮ್ ಕಿ ಕಥಾ'ದೊಂದಿಗೆ ಪ್ರೇಕ್ಷಕರನ್ನು ಮನರಂಜಿಸಲು ಸಿದ್ಧರಾಗಿದ್ದಾರೆ. ಮ್ಯೂಸಿಕಲ್ ರೊಮ್ಯಾನ್ಸ್ ಸ್ಟೋರಿ 2023ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಈಗಾಗಲೇ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಚಿತ್ರದ ಟ್ರೇಲರ್‌ಗೆ ಕಿಯಾರಾ ಅಡ್ವಾಣಿ ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಪ್ರತಿಕ್ರಿಯಿಸಿದ್ದಾರೆ. ಇನ್​ಸ್ಟಾದಲ್ಲಿ ಕಿಯಾರಾ ಅವರ ಟ್ರೇಲರ್​ ಪೋಸ್ಟ್​ ಅನ್ನು ಸ್ಟೋರಿ ಹಾಕಿಕೊಂಡಿರುವ ಸಿದ್ಧಾರ್ಥ್​, ಟ್ರೇಲರ್​ ತುಂಬಾ ಚೆನ್ನಾಗಿದೆ. ಕಥಾ ಭೇಟಿಗೆ ಇನ್ನು ಕಾಯಲು ಸಾಧ್ಯವಿಲ್ಲ. ನಿಮಗೆ ಮತ್ತು ತಂಡಕ್ಕೆ ಶುಭವಾಗಲಿ. #SATYAPREMKIKATHA ಎಂದು ಬರೆದಿದ್ದಾರೆ.

  • " class="align-text-top noRightClick twitterSection" data="">

ಇದನ್ನು ತಮ್ಮ ಸ್ಟೋರಿಯಲ್ಲಿ ಮರು ಹಂಚಿಕೊಂಡಿರುವ ಕಿಯಾರಾ ತಮ್ಮ ಪತಿಗೆ "ಥ್ಯಾಂಕ್ಸ್​ ಬಾಬೆ" ಎಂದಿದ್ದಾರೆ. ಜೊತೆಗೆ ಹೃದಯ ಮತ್ತು ಕಿಸ್​ ಎಮೋಜಿಯನ್ನು ಸೇರಿಸಿದ್ದಾರೆ. ನಟ ಕಾರ್ತಿಕ್​ ಆರ್ಯನ್​ ತಮ್ಮ ಇನ್​ಸ್ಟಾದಲ್ಲಿ ಸತ್ಯಪ್ರೇಮ್ ಕಿ ಕಥಾದ ಟ್ರೇಲರ್​ ಹಂಚಿಕೊಂಡಿದ್ದಾರೆ. "ಬಹುಶಃ ನಾನು ನಿನ್ನನ್ನು ಪ್ರೀತಿಸುವುದನ್ನು ಹೊರತುಪಡಿಸಿ ಏನನ್ನೂ ಮಾಡಲು ಈ ಜಗತ್ತಿಗೆ ಬಂದಿಲ್ಲ. #SatyaPremKiKatha ಟ್ರೇಲರ್​ ಈಗ." ಎಂದು ಶೀರ್ಷಿಕೆ ಬರೆದಿದ್ದಾರೆ.

ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್​ನ ಬಹುನಿರೀಕ್ಷಿತ ಚಿತ್ರ 'ಧೂಮಂ'.. ಟ್ರೇಲರ್​ ಬಿಡುಗಡೆಗೆ ಮುಹೂರ್ತ ನಿಗದಿ

ಟ್ರೇಲರ್​ನಲ್ಲೇನಿದೆ?: ಟ್ರೇಲರ್​ ನಮಗೆ ನಟ ಕಾರ್ತಿಕ್​ ಸತ್ಯಪ್ರೇಮ್​ ಆಗಿ ಮತ್ತು ಕಿಯಾರಾ ಕಥಾ ಎಂದು ಪರಿಚಯಿಸುತ್ತದೆ. ಕಾರ್ತಿಕ್​ ಕಿಯಾರಾಳನ್ನು ಮೆಚ್ಚಿಸಲು ಪ್ರಯತ್ನಿಸುವುದು, ಅವಳನ್ನು ಮದುವೆಗಾಗಿ ಒತ್ತಾಯಿಸುವುದು ಎಲ್ಲಾ ಕಂಡುಬರುತ್ತದೆ. ಕೊನೆಗೆ ಅವರಿಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಆ ನಂತರ ಅವರಿಬ್ಬರು ಜೊತೆಯಾಗಿ ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಮದುವೆಯ ನಂತರದ ಪ್ರೀತಿಯ ಕಲ್ಪನೆಯನ್ನು ಚಿತ್ರ ಬಿಂಬಿಸುತ್ತದೆ.

ಸಮೀರ್ ವಿದ್ವಾನ್ಸ್ ನಿರ್ದೇಶನದ ಈ 'ಸತ್ಯಪ್ರೇಮ್ ಕಿ ಕಥಾ' ಚಿತ್ರದಲ್ಲಿ ಕಾರ್ತಿಕ್​, ಕಿಯಾರಾ ಅಲ್ಲದೇ ಸುಪ್ರಿಯಾ ಪಾಠಕ್ ಕಪೂರ್, ಗಜರಾಜ್ ರಾವ್, ಸಿದ್ಧಾರ್ಥ್ ರಂಧೇರಿಯಾ, ಅನೂರಾಧಾ ಪಟೇಲ್, ರಾಜ್ಪಾಲ್ ಯಾದವ್, ನಿರ್ಮಿತೆ ಸಾವಂತ್ ಮತ್ತು ಶಿಖಾ ತಲ್ಸಾನಿಯಾ ಸಹ ನಟಿಸಿದ್ದಾರೆ. ಚಿತ್ರವು ಜೂನ್ 29 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ರಿಲೀಸ್​ ಆಗಿದೆ. ನಸೀಬ್ ಸೇ ಸಾಂಗ್​ ಕೇಳುಗರ ಮನ ಗೆದ್ದಿದೆ. ಹಾಡಿನಲ್ಲಿ ಅದ್ಭುತ ಕೆಮಿಸ್ಟ್ರಿಯೊಂದಿಗೆ ಕಿಯಾರಾ ಮತ್ತು ಕಾರ್ತಿಕ್ ಅಭಿಮಾನಿಗಳ ಮನ ಕದ್ದಿದ್ದಾರೆ. ಇದೊಂದು ಕಂಪ್ಲೀಟ್​ ಲವ್​ ಸ್ಟೋರಿ ಸಿನಿಮಾ ಎಂಬುದು ಬಿಡುಗಡೆ ಆಗಿರುವ ಟ್ರೇಲರ್​ನಿಂದ ತಿಳಿಯುತ್ತದೆ. ಪಾಯಲ್ ದೇವ್ ಮತ್ತು ವಿಶಾಲ್ ಮಿಶ್ರಾ ಹಾಡಿರುವ ಈ ನಸೀಬ್​ ಸೇ ಹಾಡನ್ನು ಕಾಶ್ಮೀರ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ.

ಏತನ್ಮಧ್ಯೆ, ಸಿದ್ಧಾರ್ಥ್ ಮಲ್ಹೋತ್ರಾ ಅವರು ಯೋಧಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ದಿಶಾ ಪಟಾನಿ ಮತ್ತು ರಾಶಿ ಖನ್ನಾ ನಾಯಕಿಯಾಗಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 15 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: ಲಸ್ಟ್ ಸ್ಟೋರಿಸ್ 2 ಟೀಸರ್​: ರೊಮ್ಯಾಂಟಿಕ್​ ಮೂಡ್​ನಲ್ಲಿ ರೂಮರ್​ ಲವ್​ ಬರ್ಡ್ಸ್ ತಮನ್ನಾ ವಿಜಯ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.