ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಬಾಲಿವುಡ್ ತಾರೆಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈಗಾಗಲೇ ಇರುವ ಮಾಹಿತಿಯಂತೆ ತಾರಾ ಜೋಡಿ ಫೆಬ್ರವರಿ 6ರಂದು ಅದ್ಧೂರಿಯಾಗಿ ಜೈಸಲ್ಮೇರ್‌ನ ಸೂರ್ಯಗಢ್ ಅರಮನೆಯಲ್ಲಿ ಹಸೆಮಣೆ ಏರಲಿದ್ದಾರೆ. ಫೆಬ್ರುವರಿ 6ರಂದು ನಡೆಯುವ ಮದುವೆ ಸಮಾರಂಭಕ್ಕೆ ಈಗಾಗಲೇ ತಯಾರಿ ಭರದಿಂದ ಸಾಗುತ್ತಿದ್ದು, ಜೋಡಿ ನಾಳೆ (ಫೆ. 5ರಂದು) ಮದುವೆ ನಡೆಯುವ ಸ್ಥಳಕ್ಕೆ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
- " class="align-text-top noRightClick twitterSection" data="
">
ಆದರೆ ಕುಟುಂಬಗಳು ಮತ್ತು ನಿಕಟ ಸ್ನೇಹಿತರು ಒಂದು ದಿನ ಮುಂಚಿತವಾಗಿ, ಅಂದರೆ ಇಂದೇ ಜೈಸಲ್ಮೇರ್ಗೆ ತಲುಪಲಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮತ್ತು ಸೂಪರ್ಸ್ಟಾರ್ ಸಲ್ಮಾನ್ ಖಾನ್ ಸೇರಿ 150 ಸದಸ್ಯರು ಅತಿಥಿ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಅತಿಥಿಗಳ ಪಟ್ಟಿಯು ಸುಮಾರು 150 ಸದಸ್ಯರನ್ನು ಒಳಗೊಂಡಿದ್ದು, ಅದರಲ್ಲಿ ಚಿತ್ರರಂಗದ ಅತಿಥಿಗಳ ಜೊತೆಗೆ ಹೈ- ಪ್ರೊಫೈಲ್ ವ್ಯಕ್ತಿಗಳೂ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜಸ್ಥಾನದ ಜೈಸಲ್ಮೇರ್‌ನಿಂದ ಸುಮಾರು 16 ಕಿಮೀ ದೂರದಲ್ಲಿರುವ ಸೂರ್ಯಗಢ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸಿದ್ ಮತ್ತು ಕಿಯಾರಾ ಅವರಿಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ.
- " class="align-text-top noRightClick twitterSection" data="
">
ಆದರೆ ಇದುವರೆಗೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ, ಡೇಟಿಂಗ್ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದ ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ವಿವಾಹವನ್ನು ಇನ್ನೂ ಅಧಿಕೃತವಾಗಿಯೇ ಖಚಿತಪಡಿಸಿಲ್ಲ. ಈ ಜೋಡಿ ತಮ್ಮ ಮದುವೆಗೆ ಉದ್ಯಮದ ಆಪ್ತ ಸ್ನೇಹಿತರನ್ನು ಆಹ್ವಾನಿಸಿದ್ದಾರೆ ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ, ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಕರಣ್ ಜೋಹರ್, ಶಾಹಿದ್ ಕಪೂರ್, ಕತ್ರಿನಾ ಮತ್ತು ವಿಕ್ಕಿ ಕೌಶಲ್, ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ, ಕಿಯಾರಾ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್, ರಾಜಸ್ಥಾನದಲ್ಲಿ ನಡೆಯುವ ವಿವಾಹದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
- " class="align-text-top noRightClick twitterSection" data="
">
ವರದಿಗಳ ಪ್ರಕಾರ, ಮುಂಬೈ ಮೂಲದ ಕಂಪನಿಯೊಂದು ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರ ವಿವಾಹ ಸಮಾರಂಭದ ಪ್ಲ್ಯಾನಿಂಗ್ ಮಾಡಿದೆ. ಮದುವೆಗೆ ಆಹ್ವಾನಿಸಲಾದ ಅತಿಥಿಗಳ ಭದ್ರತೆಯನ್ನು ಮೇಲ್ವಿಚಾರಣೆ ಮಾಡಲು ಸಂಘಟಕರು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಭದ್ರತೆಯನ್ನು ಶಾರುಖ್ ಖಾನ್ ಅವರ ಮಾಜಿ ಅಂಗರಕ್ಷಕ ಯಾಸಿನ್ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಈ ಮೊದಲೇ ವರದಿಯಾಗಿರುವಂತೆ ಕಿಯಾರಾ-ಸಿದ್ಧಾರ್ಥ್ ಫೆಬ್ರವರಿ 6 ರಂದು ಸಪ್ತಪದಿ ತುಳಿಯಲಿದ್ದಾರೆ. ಸೂರ್ಯಗಢ್ ಪ್ಯಾಲೇಸ್ ಹೋಟೆಲ್‌ನಲ್ಲಿ ಅತಿಥಿಗಳಿಗಾಗಿ 84 ಐಷಾರಾಮಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಅವುಗಳ ಜೊತೆಗೆ ಅತಿಥಿಗಳಿಗಾಗಿ ಮರ್ಸಿಡಿಸ್, ಜಾಗ್ವಾರ್ ಮತ್ತು BMW 70 ಐಷಾರಾಮಿ ವಾಹನಗಳನ್ನು ಬುಕ್ ಮಾಡಲಾಗಿದೆ. ವಾಹನಗಳ ಗುತ್ತಿಗೆಯನ್ನು ಜೈಸಲ್ಮೇರ್‌ನ ಅತಿದೊಡ್ಡ ಟೂರ್ ಆಪರೇಟರ್ ಲಕ್ಕಿ ಟೂರ್ ಮತ್ತು ಟ್ರಾವೆಲ್ಸ್‌ಗೆ ನೀಡಲಾಗಿದೆ.
ಇದನ್ನೂ ಓದಿ: ದುಬೈ, ಮುಂಬೈ, ಜೈಸಲ್ಮೇರ್‌ನಲ್ಲಿ ಕಿಯಾರಾ ಸಿದ್ದಾರ್ಥ್ ವಿವಾಹ ಸಂಭ್ರಮ.. ಬಾಲಿವುಡ್ ಅಂಗಳದಲ್ಲಿ ಹೀಗೊಂದು ಟಾಕ್