ETV Bharat / entertainment

'ಬಾಲ್ಯದ ಕನಸು ನನಸಾಗಲು ಪ್ರೇಕ್ಷಕರೇ ಕಾರಣ'.. TJMM ಯಶಸ್ಸಿನಲ್ಲಿ ಶ್ರದ್ಧಾ - etv bharat kannada

ಬಾಲ್ಯದ ಕನಸು ನನಸಾಗಲು ಪ್ರೇಕ್ಷಕರೇ ಕಾರಣ ಎಂದು ನಟಿ ಶ್ರದ್ಧಾ ಕಪೂರ್ ಹೇಳಿದ್ದಾರೆ.

Shraddha Kapoor
ನಟಿ ಶ್ರದ್ಧಾ ಕಪೂರ್
author img

By

Published : Mar 25, 2023, 5:45 PM IST

ಬಾಲಿವುಡ್​ ಬಹುಬೇಡಿಕೆಯ ನಟಿ ಶ್ರದ್ಧಾ ಕಪೂರ್​ ತಮ್ಮ 'ತೂ ಜೂಟಿ ಮೇ ಮಕ್ಕರ್'​ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಅವರು, ನಾನಿಂದು ಇಷ್ಟು ಖುಷಿಯಾಗಿರಲು ಪ್ರೇಕ್ಷಕರು ನೀಡುವ ಪ್ರೀತಿಯೇ ಕಾರಣ. ನಾನು ಚಿಕ್ಕಂದಿನಲ್ಲಿ ಕಂಡ ಕನಸು ನನಸಾಗಿದೆ ಎಂದು ನುಡಿದಿದ್ದಾರೆ.

ತೂ ಜೂಟಿ ಮೇ ಮಕ್ಕರ್​ ಸಿನಿಮಾದ ಬಗ್ಗೆ ಅವರಲ್ಲಿ ಕೇಳಿದ ಪ್ರಶ್ನೆಗೆ, ಇದು ಖಂಡಿತವಾಗಿಯೂ ಜವಾಬ್ದಾರಿಯನ್ನು ನೆನಪಿಸುತ್ತದೆ. ನನಗೆ ಗೊತ್ತು ನಾನಿಲ್ಲಿ ಜನರನ್ನು ಮನರಂಜಿಸಲು ನಿಂತಿದ್ದೇನೆ. ಅದಕ್ಕೆ ಸಿನಿಮಾ ಒಂದು ವೇದಿಕೆಯಾಗಿದೆ. ಹೀಗಾಗಿ ನಾನು ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ. ಇದಕ್ಕೆ ಶಕ್ತಿ ಮತ್ತು ಸ್ಫೂರ್ತಿ ಪ್ರೇಕ್ಷಕರಿಂದಲೇ ಸಿಗುತ್ತಿದೆ. ಇಂದು ನನ್ನ ಬಾಲ್ಯದ ಕನಸು ನನಸಾಗಲು ಅವರೇ ಕಾರಣ. ಹೀಗಾಗಿ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದು ಹೇಳಿದ್ದಾರೆ.

ಲವ್ ರಂಜನ್ ನಿರ್ದೇಶನದ ತೂ ಜೂಟಿ ಮೇ ಮಕ್ಕರ್ ಸಿನಿಮಾ ವಿಶ್ವದಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ 11 ದಿನಗಳಲ್ಲಿ 122 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಚಿತ್ರದಲ್ಲಿ ರಣ್​ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೂ ಉತ್ತಮ ಪ್ರದರ್ಶನ ಕಂಡಿದ್ದು, ಬಾಕ್ಸ್​ ಆಫೀಸ್​ ಸಂಖ್ಯೆ ಏರುತ್ತಲೇ ಇದೆ.

ಈ ಚಿತ್ರವು ಜಗತ್ತಿನಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ ಕೇವಲ 11 ದಿನಗಳಲ್ಲಿ 122 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಸಾಲಿನ ಮೆಗಾ ಹಿಟ್​ ಸಿನಿಮಾ ಪಠಾಣ್​ ನಂತರ ತೂ ಜೂಟಿ ಮೇ ಮಕ್ಕರ್ ಎರಡನೇ ಹಿಟ್ ಚಿತ್ರವಾಗಿದೆ. ರಣಬೀರ್ ಮತ್ತು ಶ್ರದ್ಧಾ ಅಭಿನಯದ ಈ ತೂ ಜೂಟಿ ಮೇ ಮಕ್ಕರ್ ಸಿನಿಮಾ ದೇಶೀಯ ಬಾಕ್ಸ್ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ 100 ಕೋಟಿ ಕ್ಲಬ್​ ಸೇರಿದೆ. ಕುತೂಹಲಕಾರಿಯಾಗಿ, ಈವರೆಗೆ ರಣಬೀರ್ ಮತ್ತು ಶ್ರದ್ಧಾ ಅಭಿನಯದ ಚಿತ್ರಗಳ (ಪ್ರತ್ಯೇಕ ಸಿನಿಮಾಗಳು) ಪೈಕಿ 100 ಕೋಟಿ ದಾಟಿದ ಆರನೇ ಚಿತ್ರ ತೂ ಜೂಟಿ ಮೇ ಮಕ್ಕರ್ ಆಗಿದೆ.

ಇದನ್ನೂ ಓದಿ: ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ: ಡೇಟಿಂಗ್ ವದಂತಿ ಬಗ್ಗೆ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯೆ

ಇನ್ನು ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರನ್ನು ಪ್ರೀತಿಸುವ ಪ್ರೇಮಿಯಾಗಿ ರಣ್​ಬೀರ್​ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಸಂಬಂಧದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತಾರೆ, ಅದು ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತದೆ. ಹೇಗೆ ತಮ್ಮ ಸಂಬಂಧವನ್ನು ನಿಭಾಯಿಸುತ್ತಾರೆ ಅನ್ನೋದೇ ಸ್ಟೋರಿ. ರೊಮ್ಯಾಂಟಿಕ್ ಸೀನ್​ಗಳ ಜೊತೆಗೆ ಕಾಮಿಡಿ ದೃಶ್ಯಗಳು ಸಹ ಈ ಚಿತ್ರದಲ್ಲಿದೆ. ಅಲ್ಲದೇ ರಣ್​​ಬೀರ್ ಕಪೂರ್, ಶ್ರದ್ಧಾ ಕಪೂರ್ ಜೊತೆಗೆ ಸ್ಟ್ಯಾಂಡ್​ ಅಪ್​ ಕಾಮಿಡಿಯನ್​​ ಅನುಭವ್​ ಬಸ್ಸಿ, ಬೋನಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಸಿನಿಮಾದಲ್ಲಿ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್​: ಬೊಮ್ಮನ್​, ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ವಿಶೇಷ ಗೌರವ.. ಪ್ರಯಾಣಿಕರಿಂದ ಕರತಾಡನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.