ETV Bharat / entertainment

'ಹಾಯ್ ನಾನ್ನ' ಸಿನಿಮಾಗೆ ಶಿವಣ್ಣ​ ಮೆಚ್ಚುಗೆ: 'ನಾನಿ ಅಭಿಮಾನಿಯಾದೆ' ಎಂದ ಹ್ಯಾಟ್ರಿಕ್ ಹೀರೋ - Hi nanna

ಮೈಸೂರಿನಲ್ಲಿ 'ಹಾಯ್​ ನಾನ್ನ' ಸಿನಿಮಾ ವೀಕ್ಷಿಸಿದ ನಟ ಶಿವ ರಾಜ್​ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Shiva Rajkumar Reacts on Hi nanna movie
'ಹಾಯ್ ನಾನ್ನ' ಸಿನಿಮಾಗೆ ಶಿವಣ್ಣ​ ಮೆಚ್ಚುಗೆ
author img

By ETV Bharat Karnataka Team

Published : Dec 12, 2023, 2:20 PM IST

Updated : Dec 12, 2023, 2:41 PM IST

ನಟ ಶಿವರಾಜ್​ಕುಮಾರ್

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಹಾಯ್​ ನಾನ್ನ' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಮೋಷನಲ್​ ಕಥಾಹಂದರಕ್ಕೆ ಸಿನಿಪ್ರಿಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ ಶಿವರಾಜ್​ಕುಮಾರ್ ಕೂಡ ನಾನಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೈಸೂರಿನಲ್ಲಿ ಸಿನಿಮಾ ವೀಕ್ಷಿಸಿದ ಶಿವಣ್ಣ: ಕೆಲ ದಿನಗಳ ಹಿಂದೆ 'ಹಾಯ್​ ನಾನ್ನ' ಪ್ರಚಾರದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ನಾನಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಶಿವಣ್ಣ ಈ ಚಿತ್ರ ವೀಕ್ಷಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಎಮೋಷನಲ್​ ಸಿನಿಮಾ.. ಸಿನಿಪ್ರಿಯರಿಂದ ಮೆಚ್ಚುಗೆ ಸ್ವೀಕರಿಸಿರುವ ಹಾಯ್ ನಾನ್ನ ಸಿನಿಮಾ ನೋಡಿ ಮಾತನಾಡಿದ ನಟ ಶಿವ ರಾಜ್​ಕುಮಾರ್, ಬಹಳ ಅದ್ಭುತ ಸಿನಿಮಾ. ಎಮೋಷನ್​ ಆಗಿ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದವರಿಗೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಸಿನಿಮಾ ಬೇಗ ಕನೆಕ್ಟ್ ಆಯ್ತು. ಮ್ಯೂಸಿಕ್ ಕೂಡ ಬಹಳ ಚೆನ್ನಾಗಿದೆ. ನಾನಿ ಪಾತ್ರ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರದಲ್ಲಿರುವ ಎಲ್ಲರ ಅಭಿಯನ ಅದ್ಭುತವಾಗಿದೆ. ನನಗೆ ಈ ಸಿನಿಮಾ ಬಹಳ ಟಚ್ ಆಯ್ತು. ಕೊನೆಯ 10 ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ.. ನಾನು ನಿಮ್ಮ ಅಭಿಮಾನಿಯಾಗಿದ್ದೇನೆ ಎಂದು ತಿಳಿಸಿದರು.

ತಂದೆ ಮಗಳ ಬಾಂಧವ್ಯದ ಸುತ್ತ ಈ 'ಹಾಯ್ ನಾನ್ನ' ಕಥೆ ಸುತ್ತುತ್ತದೆ. ನಾಯಕಿ ಮೃಣಾಲ್ ಠಾಕೂರ್ ಜೊತೆ ನಾನಿ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಯುವ ನಿರ್ದೇಶಕ ಶೌರ್ಯುವ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಚಿತ್ರ.

ಇದನ್ನೂ ಓದಿ: ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಫ್ಯಾಮಿಲಿ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ

ಇತ್ತೀಚೆಗೆ ಹಾಯ್ ನಾನ್ನ ಸಿನಿಮಾ ನೋಡಿ ಅಲ್ಲು ಅರ್ಜುನ್ ಕೂಡ ಭಾವುಕರಾಗಿದ್ದಾರೆ. ಈ ಸಿನಿಮಾದಲ್ಲಿನ ಅಪ್ಪ-ಮಗಳ ಸೆಂಟಿಮೆಂಟ್ ನನ್ನ ಮನ ಮುಟ್ಟಿದೆ ಎಂದು ಬನ್ನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಚಿತ್ರದಲ್ಲಿ ನಟಿಸಿದ ನಾನಿ ಮತ್ತು ಇತರೆ ನಟರಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದು ಪತ್ರ ಬರೆದಿದ್ದರು.

ಇದನ್ನೂ ಓದಿ: ವೈಷ್ಣೋದೇವಿ ಸನ್ನಿಧಿಯಲ್ಲಿ ಶಾರುಖ್​​ ಖಾನ್​: ಪಠಾಣ್​​, ಜವಾನ್ ಬಳಿಕ 'ಡಂಕಿ'ಗಾಗಿ ದೇಗುಲಕ್ಕೆ ಬಂದ ಸ್ಟಾರ್

'ಹಾಯ್​ ನಾನ್ನ' ಚಿತ್ರವನ್ನು ವೈರ ಎಂಟರ್​ಟೈನ್ಮೆಂಟ್​ ಬ್ಯಾನರ್​ ಅಡಿ ಮೋಹನ್​ ಚೆರುಕುರಿ, ಡಾ. ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಿರ್ಮಾಣ ಮಾಡಿದ್ದು, ಶೌರ್ಯುವ್​ ನಿರ್ದೇಶಿಸಿದ್ದಾರೆ. ಸಾನು ಜಾನ್​ ವಗೀಸ್​ ಐಎಸ್​ಸಿ ಕ್ಯಾಮರಾ ವರ್ಕ್​, ಹೇಶಮ್​ ಅಬ್ದುಲ್​ ವಹಾಬ್​ ಅವರ ಸಂಗೀತ ನಿರ್ದೇಶನ, ಪ್ರವೀಣ್​ ಆಂಥೋನಿಯವರ ಸಂಕಲನ ಈ ಚಿತ್ರಕ್ಕಿದೆ. ನಾನಿ, ಮೃಣಾಲ್​ ಜೊತೆ ಶ್ರುತಿ ಹಾಸನ್​ ಕೂಡ ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ಜಯರಾಮ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಂಡ ಚಿತ್ರ ಪಂಚ ಭಾಷೆಗಳಲ್ಲಿ ತೆರೆಕಂಡು ಪಾಸಿಟಿವ್​ ರೆಸ್ಪಾನ್ಸ್ ಸ್ವೀಕರಿಸುತ್ತಿದೆ.

Last Updated : Dec 12, 2023, 2:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.