ETV Bharat / entertainment

ಉಪಾಧ್ಯಕ್ಷ ಸಿನಿಮಾ‌ ಶೂಟಿಂಗ್ ಅಡ್ಡಕ್ಕೆ ಶಿವಣ್ಣ ಸರ್​​ಪ್ರೈಸ್​ ಭೇಟಿ.. ಚಿಕ್ಕಣ್ಣ, ಸಾಧು ಖುಷ್​ - Bairagee film

ಬೈರಾಗಿ ಸಿನಿಮಾದ ಪ್ರಚಾರದ ನಡುವೆ ಶಿವರಾಜ್​ ಕುಮಾರ್​ ಮತ್ತು ತಂಡ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಉಪಾಧ್ಯಕ್ಷ ಸಿನಿಮಾದ ಸೆಟ್​ಗೆ ಅಚಾನಕ್​ ಭೇಟಿ ನೀಡಿ ಸಿನಿಮಾದ ಕುರಿತು ಚರ್ಚಿಸಿದ್ದಾರೆ.

Shiva Rajkumar visited upadyaksha film set
ಶಿವರಾಜ್​ ಕುಮಾರ್
author img

By

Published : Jun 25, 2022, 6:03 PM IST

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಅಭಿನಯದ 123ನೇ ಬಹು ನಿರೀಕ್ಷಿತ ಚಿತ್ರ ಬೈರಾಗಿ. ಟೀಸರ್ ಹಾಗು ಹಾಡುಗಳಿಂದ ಇಗಾಗಲೇ ಜನಪ್ರಿಯತೆ ಗಳಿಸಿದೆ. ಬೈರಾಗಿ ಜುಲೈ 1ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಭಜರಂಗಿ 2 ಸಿನಿಮಾ‌ ಆದ ಮೇಲೆ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಮೇಲೆ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಟಗರು ಚಿತ್ರದ ನಂತರ ಶಿವರಾಜ್ ಕುಮಾರ್ ಹಾಗು ಧನಂಜಯ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಹೀಗಾಗಿ ಶಿವಣ್ಣ ಹಾಗೂ ಡಾಲಿ ಅಭಿನಯಿಸಿರುವುದು ಅಭಿಮಾನಿಗಳಲ್ಲಿ ಇನ್ನಷ್ಟು ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ. ಈ ಚಿತ್ರವನ್ನು ವಿಜಯ್​ ಮಿಲ್ಟನ್​ ನಿರ್ದೇಶನ ಮಾಡಿದ್ದಾರೆ.

ಶಿವರಾಜ್ ಕುಮಾರ್, ಧನಂಜಯ್ ಹಾಗು ಪೃಥ್ವಿ ಅಂಬರ್ ಸದ್ಯ ಬೈರಾಗಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಶುಕ್ರವಾರ ಬಂಡಿಮಹಾಕಾಳಮ್ಮ ದೇವಿ ಪೂಜೆ ಸಲ್ಲಿಸಿ ಬೈರಾಗಿ ಸಿನಿಮಾದ ಪ್ರಚಾರಕ್ಕಾಗಿ ಚಾಲನೆ ನೀಡಲಾಯಿತು. ಇಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ನಂತರ ಪ್ರಚಾರ ಮಾಡಿದ್ದಾರೆ. ಬಳಿಕ ಉಪಾಧ್ಯಕ್ಷ ಸಿನಿಮಾ ಶೂಟಿಂಗ್ ಅಡ್ಡಕ್ಕೆ ಭೇಟಿ ಕೊಟ್ಟಿದ್ದಾರೆ.

ಉಪಾಧ್ಯಕ್ಷ ಸಿನಿಮಾ‌ ಶೂಟಿಂಗ್ ಅಡ್ಡಕ್ಕೆ ಅನಿರೀಕ್ಷಿತ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ!

ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ ಉಪಾಧ್ಯಕ್ಷ ಸಿನಿಮಾವನ್ನು ರ್ಯಾಂಬೋ 2 ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ಚಿತ್ರದ ಶೂಟಿಂಗ್ ಸ್ಪಾಟ್​ಗೆ ಶಿವರಾಜ್ ಕುಮಾರ್, ಧನಂಜಯ್, ಪೃಥ್ವಿ ಅಂಬರ್ ಭೇಟಿ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಚಿಕ್ಕಣ್ಣ, ನಟರಾದ ರವಿಶಂಕರ್, ಸಾಧು ಕೋಕಿಲ ಅವರು ಶಿವರಾಜ್ ಕುಮಾರ್ ಅವರ ಅನಿರೀಕ್ಷಿತ​ ಭೇಟಿಯಿಂದ ಅಚ್ಚರಿಗೆ ಒಳಗಾಗಿದ್ದಾರೆ. ಶಿವಣ್ಣನ ಅಚಾನಕ್​ ಭೇಟಿಗೆ ಚಿಕ್ಕಣ್ಣ, ಸಾಧು ಕೋಕಿಲ, ರವಿಶಂಕರ್ ತುಂಬಾನೇ ಖುಷಿಯಾಗಿದ್ದು, ಶಿವಣ್ಣ, ಧನಂಜಯ್ ಜೊತೆ ಕಾಫಿ ಕುಡಿದರು. ನಂತರ ಕೆಲ ಸಮಯ ಸಿನಿಮಾದ ಬಗ್ಗೆ ಮಾತುಕತೆ ಮತ್ತು ಚರ್ಚೆ ನಡೆದವು.

ಇದನ್ನೂ ಓದಿ: ಚಾಮರಾಜನಗರ ನಂದು ಎಂದು ಗುಟುರು ಹಾಕಿದ ಟಗರು.. ಶಿವಣ್ಣ-ಡಾಲಿಗೆ ಭರ್ಜರಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.