ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಶೀರ್ಷಿಕೆಯಿಂದಲೇ ಟಾಕ್ ಆಗುತ್ತಿರುವ ಚಿತ್ರ 'ಉತ್ತರಕಾಂಡ'. ಈ ಚಿತ್ರದ ಮೂಲಕ ಮೋಹಕತಾರೆ ರಮ್ಯಾ ನಟನೆಗೆ ಮರಳುತ್ತಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ರಮ್ಯಾ ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನು ಮಾತನಾಡಲಿದ್ದು, ಚಿತ್ರ ಸಂಪೂರ್ಣ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿಯೇ ಅನಾವರಣವಾಗಲಿದೆ.
ಇನ್ನು, ಡಾಲಿ ಧನಂಜಯ್ ಈ ಚಿತ್ರದಲ್ಲಿ ನೀವು ಹಿಂದೆಂದೂ ನೋಡಿರದ ರೂಪದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ. ಪಾತ್ರಕ್ಕೆ ಒಂದಷ್ಟು ತಯಾರಿಯನ್ನೂ ಮಾಡಿಕೊಳ್ತಿದ್ದಾರೆ. ಇನ್ನೇನು ಉತ್ತರಕಾಂಡದ ಶೂಟಿಂಗ್ ಅಂಗಳಕ್ಕೆ ರಮ್ಯಾ ಮತ್ತು ಡಾಲಿ ಕಾಲಿಡಬೇಕು ಅನ್ನೋವಷ್ಟರಲ್ಲಿ ಚಿತ್ರತಂಡದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಚಿತ್ರದಲ್ಲಿ ಕೇವಲ ಡಾಲಿ ಮತ್ತು ರಮ್ಯಾ ಮಾತ್ರವಲ್ಲ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕೂಡಾ ಇರಲಿದ್ದಾರೆ ಎನ್ನಲಾಗುತ್ತಿದೆ. ಹೌದು, ಗೆಸ್ಟ್ ರೋಲ್ನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಟಗರು ಮತ್ತು ಬೈರಾಗಿ ನಂತರ ಮತ್ತೊಮ್ಮೆ ಶಿವ ರಾಜ್ಕುಮಾರ್ ಹಾಗು ಧನಂಜಯ್ 'ಉತ್ತರಕಾಂಡ'ದಲ್ಲಿ ಮುಖಾಮುಖಿಯಾಗಲಿದ್ದಾರೆ. ಸದ್ಯದ ಸಮಾಚಾರದ ಪ್ರಕಾರ ಚಿತ್ರದ ಡೈರೆಕ್ಟರ್ ರೊಹೀತ್ ಪದಕಿ ಕೆಲ ರೋಚಕ ಸನ್ನಿವೇಶಗಳನ್ನು ಹೆಣೆದಿದ್ದಾರೆ. ಇದಕ್ಕೆ ಪೂರಕವಾಗಿ ಡಾಲಿ ಧನಂಜಯ್ ಮತ್ತು ಶಿವಣ್ಣ ಅವರ ಸನ್ನಿವೇಶ ಇರಲಿದೆಯಂತೆ. ಕೆ.ಆರ್.ಜಿ ಸ್ಟುಡಿಯೋ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಈ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ಉತ್ತರಕಾಂಡ'ದಲ್ಲಿ ಡಾಲಿ ಜೊತೆ ಮೋಹಕ ತಾರೆ ರಮ್ಯಾ ರೊಮ್ಯಾನ್ಸ್