ETV Bharat / entertainment

'ನಿಕಮ್ಮ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಣ್ಣಂಚಲಿ ನೀರು ತಂದುಕೊಂಡ ಶಿಲ್ಪಾ ಶೆಟ್ಟಿ - ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

'ನಿಕಮ್ಮ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ತಾಯಿಯ ವಿಡಿಯೋ ಸಂದೇಶವನ್ನು ನೋಡುತ್ತಿದ್ದಂತೆ ಶಿಲ್ಪಾ ಶೆಟ್ಟಿ ಕಣ್ಣಲ್ಲಿ ನೀರು ತುಂಬಿಕೊಂಡರು.

Bollywood actor Shilpa Shetty
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
author img

By

Published : May 17, 2022, 3:55 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಮುಂಬರುವ 'ನಿಕಮ್ಮ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಣ್ಣಂಚಲಿ ನೀರು ತಂದುಕೊಂಡಿದ್ದಾರೆ. 14 ವರ್ಷಗಳ ನಂತರ ಬೆಳ್ಳಿ ಪರದೆಗಳಿಗೆ ಶಿಲ್ಪಾ ಮರಳುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅವರ ತಾಯಿಯ ವಿಶೇಷ ಸಂದೇಶವನ್ನು ದೊಡ್ಡ ಪರದೆಯಲ್ಲಿ ಪ್ಲೇ ಮಾಡಲಾಯಿತು. ತಮ್ಮ ತಾಯಿಯ ವಿಡಿಯೋ ಸಂದೇಶ ನೋಡುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡರು.

  • " class="align-text-top noRightClick twitterSection" data="">

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ನಿಕಮ್ಮ' ಚಿತ್ರದ ಕತೆಯು ತುಂಬಾ ಪ್ರಬಲವಾಗಿದೆ. ಇಷ್ಟು ದಿನ ಆರಾಮಾಗಿದ್ದ ನನ್ನನ್ನು ಮತ್ತೆ ಶ್ರಮ ವಹಿಸುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರವಿದ್ದ ನಾನು ನಿಜವಾಗಿಯೂ ತುಕ್ಕು ಹಿಡಿದಿದ್ದೇನೆ. ಆದರೆ, ನಿರ್ದೇಶಕ ಸಬ್ಬೀರ್​ ಖಾನ್​ ನನ್ನಿಂದ ಅಭಿನಯಯನ್ನು ಮತ್ತೆ ಹೊರತೆಗೆದಿದ್ದಾರೆ ಎಂದು ಹೇಳಿದರು.

ಅಲ್ಲದೇ, ಅಭಿಮಾನಿಗಳು ಕೇವಲ ಚಿತ್ರದಲ್ಲಿ ನನ್ನನ್ನು ನೋಡಲೆಂದು ಚಿತ್ರಮಂದರಿಗಳಿಗೆ ದಯವಿಟ್ಟು ಅಲೆಯಬೇಡಿ. ಬದಲಿಗೆ, ಚಿತ್ರದಲ್ಲಿನ ನನ್ನ ಪಾತ್ರ 'ಅವ್ನಿ' ಮತ್ತು ನನ್ನ ಅಭಿನಯ ನೋಡಲು ಹೋಗಿ. ಇದುವೇ ನೀವು ಕಲಾವಿದರಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.

ಆಕ್ಷನ್, ರೊಮ್ಯಾಂಟಿಕ್ , ಕಾಮಿಡಿ ಚಿತ್ರದಲ್ಲಿ ನಟಿ ಭಾಗ್ಯಶ್ರೀ ಅವರ ಮಗ ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೆಟಿಯಾ ಪ್ರಮುಖ ಪಾತ್ರ ಕಾಣಿಸಿಕೊಂಡಿದ್ದಾರೆ. ಸೋನಿ ಪಿಕ್ಚರ್ಸ್ ಇಂಟರ್​​ ನ್ಯಾಷನಲ್ ಪ್ರೊಡಕ್ಷನ್ಸ್ ಮತ್ತು ಸಬ್ಬೀರ್ ಖಾನ್ ಫಿಲ್ಮ್ಸ್ ನಿರ್ಮಿಸಿರುವ ಈ 'ನಿಕಮ್ಮ' ಚಿತ್ರ ಎರಡು ವರ್ಷಗಳ ಹಿಂದೆಯೇ ತೆರೆಗೆ ಬರಬೇಕಿತ್ತು. ಆದರೆ, ಈಗ ಎರಡು ವರ್ಷಗಳ ತಡವಾಗಿ ಜೂನ್​ 17ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: ಸನ್ನಿ ಲಿಯೋನ್​ ಜನ್ಮದಿನಕ್ಕೆ ರಕ್ತದಾನ, ಬಾಡೂಟ: ಮಂಡ್ಯ ಬಾಯ್ಸ್‌ ಪ್ರೀತಿಗೆ ಮನಸೋತ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.