ETV Bharat / entertainment

ಕನ್ನಡತಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್​ನಲ್ಲಿ ಆಫರ್​ ಮೇಲೆ ಆಫರ್​​: ಮುಂದಿನ ಹಿಂದಿ ಚಿತ್ರ ಯಾವುದು? - Rashmika Mandanna hindi movie

ನ್ಯಾಶನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣಗೆ ಮತ್ತೊಂದು ಬಾಲಿವುಡ್​ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ.

Shahid Kapoor Rashmika Mandanna movie
ಶಾಹಿದ್ ಕಪೂರ್ ರಶ್ಮಿಕಾ ಮಂದಣ್ಣ ಸಿನಿಮಾ
author img

By

Published : May 11, 2023, 3:47 PM IST

ಕನ್ನಡತಿ ರಶ್ಮಿಕಾ ಮಂದಣ್ಣ ಬಹು ಭಾಷೆ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಸ್ಯಾಂಡಲ್​ವುಡ್​ ಮೂಲಕ ಸಿನಿಮಾ ವೃತ್ತಿಜೀವನ ಆರಂಭಿಸಿದ ಕೊಡಗಿನ ಕುವರಿ ಸದ್ಯ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಈಗಾಗಲೇ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನ್ಯಾಷನಲ್​​ ಕ್ರಶ್​​​ ಮತ್ತೊಂದು ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Shahid Kapoor Rashmika Mandanna movie
ಶಾಹಿದ್ ಕಪೂರ್ ರಶ್ಮಿಕಾ ಮಂದಣ್ಣ ಸಿನಿಮಾ

ಹೌದು, ಸೌತ್ ಸಿನಿಮಾ ಸುಂದರಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ಬಾಲಿವುಡ್​ನಲ್ಲಿ ಹೆಚ್ಚುತ್ತಿದೆ. ಬಹುಬೇಡಿಕೆ ತಾರೆಗೆ ಬಾಲಿವುಡ್‌ನಲ್ಲಿ ನಾಲ್ಕನೇ ಪ್ರಾಜೆಕ್ಟ್ ಸಿಕ್ಕಿದೆ. ಈ ಹಿಂದೆ ರಶ್ಮಿಕಾ ಬಾಲಿವುಡ್‌ನಲ್ಲಿ ಗುಡ್‌ ಬೈ, ಮಿಷನ್ ಮಜ್ನು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅನಿಮಲ್ ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ. ಈಗಾಗಲೇ ಈ ಮೂರು ಚಿತ್ರಗಳಿಗೆ ಕಿರಿಕ್​ ಪಾರ್ಟಿ ಬೆಡಗಿ ಕೆಲಸ ಮಾಡಿದ್ದಾರೆ.

ಇದೀಗ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನೀಸ್ ಬಾಜ್ಮಿ ಅವರ ಆ್ಯಕ್ಷನ್ ಕಾಮಿಡಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಶಾಹಿದ್ ಕಪೂರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಶಾಹಿದ್​ ಕಪೂರ್​ ಅವರೊಂದಿಗೆ ಸ್ಕ್ರೀನ್​ ಶೇರ್ ಮಾಡುತ್ತಿರುವುದು ಇದೇ ಮೊದಲು. ಶಾಹಿದ್​ ಕಪೂರ್ ಕೂಡ ಬಾಲಿವುಡ್​ ಬೇಡಿಕೆ ನಟರಲ್ಲೊಬ್ಬರು. ಈ ಜೋಡಿ ಸಿನಿಮಾದಲ್ಲಿ ಆ್ಯಕ್ಷನ್, ಕಾಮಿಡಿ ಮತ್ತು ರೊಮ್ಯಾನ್ಸ್ ಮಾಡಲಿದ್ದಾರೆ. ಏಕ್ತಾ ಕಪೂರ್ ಮತ್ತು ದಿಲ್ ರಾಜು ಅವರು ಮುಂಬರುವ ಶೀರ್ಷಿಕೆ ಇಡದ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ಸದ್ಯ ಬೇಡಿಕೆ ನಟಿಯಾಗಿ ಎಲ್ಲೆಡೆ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಮೊದಲಿನಿಂದಲೂ ಚಿತ್ರದ ನಿರ್ಮಾಪಕರ ಕಣ್ಣಿಗೆ ಬಿದ್ದಿದ್ದರು ಎನ್ನಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಏಕ್ತಾ ಕಪೂರ್ ಮತ್ತು ದಿಲ್ ರಾಜು ಈ ಚಿತ್ರಕ್ಕಾಗಿ ರಶ್ಮಿಕಾ ಅವರನ್ನು ಒಪ್ಪಿಸಿದ್ದಾರೆ. ಅಮಿತಾಭ್​ ಬಚ್ಚನ್ ಅಭಿನಯದ 'ಗುಡ್ ಬೈ' ಮತ್ತು ಸೂಪರ್ ಸ್ಟಾರ್ ವಿಜಯ್ ಜೊತೆಗಿನ 'ವರಿಸು' ಚಿತ್ರದಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ನಟಿ ರಶ್ಮಿಕಾ ಮಂದಣ್ಣ ಅವರ ಪ್ರತಿಭೆಯನ್ನು ಗಮನಿಸಿ ಈ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂಬುದು ಸದ್ಯದ ಮಾಹಿತಿ.

ಶೀರ್ಷಿಕೆ ಫೈನಲ್​ ಆಗದ ಈ ಚಿತ್ರದಲ್ಲಿ ಬಾಲಿವುಡ್​​ ತಾರೆ ಶಾಹಿದ್ ಕಪೂರ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 2013ರಲ್ಲಿ, ಖ್ಯಾತ ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಪ್ರಭುದೇವ ಅವರ ಚಿತ್ರ 'ಆರ್....ರಾಜ್​ಕುಮಾರ್'ನಲ್ಲಿ ಶಾಹಿದ್​ ಆ್ಯಕ್ಷನ್​ ಕಾಮಿಡಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು. 10 ವರ್ಷಗಳ ಬಳಿಕ ಮತ್ತೊಮ್ಮೆ ನಟ ಆ್ಯಕ್ಷನ್ ಕಾಮಿಡಿ ಚಿತ್ರ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಸಂಪೂರ್ಣ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಕಾಂತಾರ ಸ್ಟಾರ್​ ರಿಷಬ್​ ಕುಟುಂಬ ಭೇಟಿ, ಪೂಜೆ ಸಲ್ಲಿಕೆ

ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗಿನ ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾಹಿದ್​ ಕಪೂರ್ ಅಲ್ಲದೇ ನಟ ವಿಕ್ಕಿ ಕೌಶಲ್ ಜೊತೆಯೂ ಮತ್ತೊಂದು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ನಟ ಶಾಹಿದ್ ಕಪೂರ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರ 'ಬ್ಲಡಿ ಡ್ಯಾಡಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಜೂನ್ 9ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಟೀಸರ್ ಈಗಾಗಲೇ ಶಾಹಿದ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ' ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲು ದೆಹಲಿ ಸಿಎಂಗೆ VHP ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.