ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಸೆಪ್ಟೆಂಬರ್ 7, ಗುರುವಾರ ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರಮಂದಿರಗಳತ್ತ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಸೇರುತ್ತಿದ್ದಾರೆ. ಶ್ರೀನಗರದಿಂದ ಹಿಡಿದು ಚೆನ್ನೈವರೆಗಿನ ಚಿತ್ರಮಂದಿರಗಳ ಎದುರು ಪಟಾಕಿ ಸಿಡಿಸಿ, ಶಾರುಖ್ ಕೌಟ್ಟ್ಗೆ ಹಾರ ಹಾಕಿ, ಡೋಲು ಸದ್ದಿಗೆ ಕುಣಿದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
ಅಟ್ಲೀ ನಿರ್ದೇಶನದ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 'ಪಠಾಣ್' ಸಿನಿಮಾವನ್ನು ಮೀರಿಸಿದೆ. ಇದರ ಜೊತೆಗೆ 'ಜವಾನ್' ಅತ್ಯಧಿಕ ಓಪನಿಂಗ್ ಪಡೆದ ಮೊದಲ ಹಿಂದಿ ಚಲನಚಿತ್ರವಾಗಿದೆ. ಉದ್ಯಮಿ ಟ್ಯ್ರಾಕರ್ ಸ್ಯಾಕ್ನಿಲ್ ಆರಂಭಿಕ ವರದಿಯ ಪ್ರಕಾರ, ಜವಾನ್ ತನ್ನ ಮೊದಲ ದಿನದಂದು ಭಾರತದಾದ್ಯಂತ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ ಭಾಷೆಯಲ್ಲಿಯೇ ಸುಮಾರು 65 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಉಳಿದ ಮೊತ್ತವು ಡಬ್ಬಿಂಗ್ ಆವೃತ್ತಿಗಳಿಂದ ಬಂದಿದೆ.
ಈ ಹಿಂದೆ ಶಾರುಖ್ ಖಾನ್ ನಟನೆಯ, ಸಿದ್ಧಾರ್ಥ್ ಆನಂದ್ ಅವರ 'ಪಠಾಣ್' ಸಿನಿಮಾವು ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡಿತ್ತು. ಭಾರತದಲ್ಲಿ ಆರಂಭಿಕ ದಿನದಂದು 57 ಕೋಟಿ ರೂಪಾಯಿ (ಹಿಂದಿಯಲ್ಲಿ 55 ಕೋಟಿ ರೂ.) ಗಳಿಸಿತ್ತು. ಈ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಲಿವುಡ್ ಚಲನಚಿತ್ರೋದ್ಯಮದ ಕೀರ್ತಿ ಹೆಚ್ಚಿಸಿತ್ತು. ಇದೀಗ ಈ ಚಿತ್ರವನ್ನು ಮೀರಿ 'ಜವಾನ್' ಕಲೆಕ್ಷನ್ ಓಟ ಮುಂದುವರೆಸಿದೆ. ಥಿಯೇಟರ್ಗಳಲ್ಲಿ ಜನರು ಚಿತ್ರ ವೀಕ್ಷಿಸಲು ಮುಗಿಬೀಳುತ್ತಿದ್ದಾರೆ.
ಇದನ್ನೂ ಓದಿ: Jawan celebration: ಚಲೇಯಾ ಹಾಡು ಪ್ರದರ್ಶನವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಗೆಳತಿಗೆ ಪ್ರಪೋಸ್ - ವಿಡಿಯೋ ನೋಡಿ!
ವಿಶೇಷ ದಾಖಲೆ ಬರೆದ ಶಾರುಖ್: ಶಾರುಖ್ ಖಾನ್ ಅವರು 'ಜವಾನ್' ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಈ ವರ್ಷ ತೆರೆಕಂಡ 'ಪಠಾಣ್' ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಇದೀಗ 'ಜವಾನ್' ಚಿತ್ರ ಕೂಡ ಫಸ್ಟ್ ಡೇ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಮೂಲಕ ಒಂದೇ ವರ್ಷದಲ್ಲಿ ಶಾರುಖ್ ಖಾನ್ ಅವರ ಎರಡೂ ಚಿತ್ರಗಳು 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಈ ವಿಶೇಷ ದಾಖಲೆಯನ್ನು ಸೃಷ್ಟಿಸಿದ ಹಿಂದಿ ಚಿತ್ರರಂಗದ ಮೊದಲ ಸ್ಟಾರ್ ಬಾದ್ ಶಾ ಆಗಿದ್ದಾರೆ.
'ಜವಾನ್' ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಅಲ್ಲದೇ, ದಕ್ಷಿಣ ಭಾರತದ ಪ್ರಮುಖ ನಟ ನಟಿಯರಾಗಿರುವ ನಯನತಾರ, ವಿಜಯ್ ಸೇತುಪತಿ ಇದೇ ಮೊದಲ ಬಾರಿಗೆ ಬಾಲಿವುಡ್ನಲ್ಲಿ ಮಿಂಚು ಹರಿಸಿದ್ದಾರೆ. ಇದರ ಜೊತೆಗೆ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ ಕೂಡ ಬಣ್ಣ ಹಚ್ಚಿದ್ದಾರೆ. ಗೌರವ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಸಂಜಯ್ ದತ್ ಮತ್ತು ವಿಜಯ್ ನಟನೆ ಚಿತ್ರದ ಮತ್ತೊಂದು ಹೈಲೈಟ್ ಆಗಿದೆ.
ಇದನ್ನೂ ಓದಿ: ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದ ಶಾರುಖ್ ಖಾನ್...ಜವಾನ್ ನಟನ ಫ್ಯಾನ್ಸ್ ಫುಲ್ ಖುಷ್