ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಂಕಿ' ಕಳೆದ ಗುರುವಾರ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಉತ್ತಮ ಅಂಕಿ-ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಮುಂದುವರಿಸಿರುವ ಎಸ್‌ಆರ್‌ಕೆ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವಲ್ಲಿ ಯಶಸ್ವಿ ಆಗಿದೆ.
ಡಂಕಿ vs ಸಲಾರ್: ಅದಾಗ್ಯೂ, ದೇಶೀಯ ಗಲ್ಲಾಪೆಟ್ಟಿಗೆಯ ಸಂಖ್ಯೆ ಡೊಡ್ಡ ಮಟ್ಟಿಗಿಲ್ಲ. ಸಿನಿಮಾ ತೆರೆಕಂಡು ಮೊದಲ ವಾರದ ಅಂತ್ಯಕ್ಕೆ ಭಾರತದಲ್ಲಿ ಒಟ್ಟೂ 152.01 ಕೋಟಿ ರೂ. ಸಂಪಾದಿಸಿದೆ. 'ಡಂಕಿ' ಕಳೆದ ಗುರುವಾರ (ಡಿಸೆಂಬರ್ 21) ತೆರೆಕಂಡರೆ, ಸಲಾರ್ ಶುಕ್ರವಾರ (ಡಿಸೆಂಬರ್ 22) ದಂದು ಬಿಡುಗಡೆ ಆಗಿ, ಬಾಕ್ಸ್ ಆಫೀಸ್ ಪೈಪೋಟಿ ಏರ್ಪಟ್ಟಿದೆ.
-
The Box Office is buzzing with your love for Dunki...! 🎬💥
— Red Chillies Entertainment (@RedChilliesEnt) December 28, 2023 " class="align-text-top noRightClick twitterSection" data="
Book your tickets right away!https://t.co/DIjTgPqLDI
Watch #Dunki - In Cinemas Now! pic.twitter.com/lO6n6xObJZ
">The Box Office is buzzing with your love for Dunki...! 🎬💥
— Red Chillies Entertainment (@RedChilliesEnt) December 28, 2023
Book your tickets right away!https://t.co/DIjTgPqLDI
Watch #Dunki - In Cinemas Now! pic.twitter.com/lO6n6xObJZThe Box Office is buzzing with your love for Dunki...! 🎬💥
— Red Chillies Entertainment (@RedChilliesEnt) December 28, 2023
Book your tickets right away!https://t.co/DIjTgPqLDI
Watch #Dunki - In Cinemas Now! pic.twitter.com/lO6n6xObJZ
ದೇಶೀಯ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಂಕಿ ತೆರೆಕಂಡ 8ನೇ (ಗುರುವಾರ) ದಿನದಂದು ಭಾರತದಲ್ಲಿ 9 ಕೋಟಿ ರೂ. ಗಳಿಸಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಈವರೆಗೆ 161.01 ಕೋಟಿ ಕಲೆಕ್ಷನ್ ಮಾಡಿದೆ. ದಿನನಿತ್ಯದ ಸಿನಿಮಾ ಕಲೆಕ್ಷನ್ ಒಂದಕಿಗೆ (ಕೋಟಿ ಲೆಕ್ಕದಲ್ಲಿ) ಇಳಿದಿದೆ.
ಡಂಕಿ ಕಳೆದ ಗುರುವಾರ ವಿಶ್ವಾದ್ಯಂತ ತೆರೆಗಪ್ಪಳಿಸಿತು. ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿತ್ತು. ತೆರೆಕಂಡ ಮೊದಲ ದಿನ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 29.2 ಕೋಟಿ ರೂ. ಗಳಿಸಿತ್ತು. ಅದಾಗ್ಯೂ, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಎಸ್‌ಆರ್‌ಕೆ ಅವರ ಪಠಾಣ್ ಮತ್ತು ಜವಾನ್ ಚಿತ್ರಗಳಿಗೆ ಹೋಲಿಸಿದರೆ ಡಂಕಿ ಕೊಂಚ ಹಿನ್ನಡೆ ಕಂಡಿದೆ. ಭಾರತದಲ್ಲಿ ಪ್ರಭಾಸ್ ಅವರ ಸಲಾರ್ ಸಿನಿಮಾದಿಂದ ಡಂಕಿ ಭಾರಿ ಸ್ಪರ್ಧೆ ಎದುರಿಸಿದೆ. ಪ್ರಶಾಂತ್ ನೀಲ್ ನಿರ್ದೇಶನದ ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಪ್ರಾಬಲ್ಯ ಸಾಧಿಸಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: 'ಸಲಾರ್' ಕಲೆಕ್ಷನ್: ಭಾರತದಲ್ಲೇ 300 ಕೋಟಿ ದಾಟಿದ ಪ್ರಭಾಸ್ ಸಿನಿಮಾ!
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಎಕ್ಸ್ ಪೋಸ್ಟ್ ಪ್ರಕಾರ, ಏಳು ದಿನಗಳ ನಂತರ 'ಡಂಕಿ' ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 305 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಭಾರತದಲ್ಲಿ 100 ಕೋಟಿ ರೂಪಾಯಿಗಳ ಗಡಿ ದಾಟಲು ಐದು ದಿನ ಸಮಯ ತೆಗೆದುಕೊಂಡಿದೆ. ಚಿತ್ರ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿರುವ ಹಿನಾ ಖಾನ್ ; ಅಭಿಮಾನಿಗಳಿಗೆ ನಟಿ ಹೇಳಿದ್ದಿಷ್ಟು!
ಅಭಿಜತ್ ಜೋಶಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಸೇರಿ ಕಥೆ ಬರೆದಿದ್ದಾರೆ. ಶಾರುಖ್ ಜೊತೆ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ನಟಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಾಣದ ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಪ್ರಸ್ತುತಪಡಿಸಿದೆ.