ಬೆಂಗಳೂರು: ನವೆಂಬರ್ 2ರಂದು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ 58ನೇ ವಸಂತಕ್ಕೆ ಕಾಲಿರಿಸಿದ್ದರು. ಈ ಜನ್ಮ ದಿನವನ್ನು ಶಾರುಖ್ ಖಾನ್ ತಮ್ಮ ಬಾಲಿವುಡ್ ಮಂದಿ ಮತ್ತು ತಮ್ಮ ಸಹಚರರ ಜೊತೆಗೆ ಆಚರಿಸಿದ್ದಾರೆ. ಈ ಅದ್ದೂರಿ ಪಾರ್ಟಿಯ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ. ನಟಿ ಆಲಿಯಾ ಭಟ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಮಂದಿ ಈ ಪಾರ್ಟಿಯಲ್ಲಿ ಹಾಜರಾಗಿದ್ದರು.
ಮುಂಬೈನಲ್ಲಿ ನಡೆದ ಈ ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸಿದ ಕೆಲವು ಗಣ್ಯರು ಮತ್ತು ಬಾಲಿವುಡ್ ಉದ್ಯಮದ ಮಂದಿ ಈ ಕ್ಷಣಗಳ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಅಲ್ಲದೇ, ಇದನ್ನು ತಮ್ಮ ಸಾಮಾಜಿಕ ಜಾಲತಾಣ, ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ.
ಆಲಿಯಾ ಭಟ್ ಪಾರ್ಟಿಯಲ್ಲಿ ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ್ದು, ಕಾರ್ಯಕ್ರಮದ ಅತಿಥಿಗಳ ಜೊತೆಗೆ ಸೆಲ್ಫಿಗೆ ಫೋಸ್ ನೀಡಿದ್ದಾರೆ. ಇದೇ ವೇಳೆ ಅವರ ಸಹೋದರಿ ಶಹೀನ್ ಭಟ್ ಕೂಡ ಅವರಿಗೆ ಕಂಡು ಬಂದಿದ್ದು, ನೇರಳೆ ಬಣ್ಣದ ಧಿರಿಸಿನಲ್ಲಿ ಅವರು ಕಂಡು ಬಂದಿದ್ದಾರೆ. ಮತ್ತೊಂದು ಚಿತ್ರದಲ್ಲಿ ರಣವೀರ್ ಸಿಂಗ್ ಕಪ್ಪು ಬಣ್ಣದ ಸೂಟ್ನಲ್ಲಿ ಕಂಡು ಬಂದಿದ್ದರೆ, ಅವರ ಮುದ್ದಿನ ಮಡದಿ ದೀಪಿಕಾ ಪಡುಕೋಣೆ ಮಿಂಚುವ (ಶಿಮರಿ) ಮಿನಿ ಡ್ರೆಸ್ನಲ್ಲಿ ಕಾಣಿಸಿಕೊಂಡರು.
ಶಾರುಖ್ ಅಭಿನಯದ ಜವಾನ್ ಚಿತ್ರದ ಯಶ್ಸಸಿನ ನಿರ್ದೇಶಕ ಆಟ್ಲಿ ಕೂಡ ಪಾರ್ಟಿಯಲ್ಲಿ ಹಾಜರಾಗಿದ್ದು, ದಕ್ಷಿಣ ಭಾರತದ ನಿರ್ದೇಶಕ ಅನೇಕ ಹಿಂದಿ ನಟಿಯರೊಂದಿಗೆ ಫೋಟೋಗೆ ಫೋಸ್ ನೀಡಿದರು. ಇನ್ನು ಶಾರುಖ್ ಹುಟ್ಟು ಹಬ್ಬದ ಹಿನ್ನೆಲೆ ಅವರ ಮುಂದಿನ ಬಹು ನಿರೀಕ್ಷೆಯ ಡಂಕಿ ಚಿತ್ರದ ಟೀಸರ್ ಅನ್ನು ನೀಡಿದ ಚಿತ್ರ ನಿರ್ದೇಶ ರಾಜ್ಕುಮಾರ್ ಹಿರಾನಿ ಮತ್ತು ಅವರ ಹೆಂಡತಿ ಕೂಡ ಸಮಾರಂಭದಲ್ಲಿ ಕಂಡರು. ಭಾರತೀಯ ಕ್ರಿಕೆಟಿಗ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಪಾರ್ಟಿಗೆ ಆಗಮಿಸಿ ಶಾರುಖ್ಗೆ ಶುಭ ಕೋರಿದರು. ಶಾಹೀದ್ ಕಪೂರ್ ಹೆಂಡತಿ ಮೀರಾ ರಜ್ಪೂತ್ ಈ ಸಂಭ್ರಮದ ಕ್ಷಣಗಳನ್ನು ಫೋಟೋ ಮೂಲಕ ಸೆರೆ ಹಿಡಿದಿದ್ದಾರೆ.
ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್ ಮತ್ತು ಅಮೃತಾ ಆರೋರ ತಮ್ಮ ಗ್ಲಾಮರ್ ಲುಕ್ನಿಂದ ಪಾರ್ಟಿಯಲ್ಲಿ ಕಂಗೊಳಿಸಿದ್ದಾರೆ. ಕರೀನಾ ಸಾಟಿನ್ ಗೌನ್ನಲ್ಲಿ ಕಂಡರೆ, ಕರಿಷ್ಮಾ ಮಿಂಚುವ ಹಸಿರು ಉಡುಗೆಯಲ್ಲಿ ಕಂಡು ಬಂದಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾರುಖ್ ಖಾನ್: 'ಡಂಕಿ' ಬಗ್ಗೆ ಮತ್ತಷ್ಟು ಡೀಟೆಲ್ಸ್