ETV Bharat / entertainment

ಜವಾನ್‌ನಲ್ಲಿ ಶಾರುಖ್‌ ಡಬಲ್​ ರೋಲ್‌​​: ತಂದೆ-ಮಗನ ಪಾತ್ರದಲ್ಲಿ ಅಭಿನಯ - ಜವಾನ್ ಸಿನಿಮಾ

ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಅವರು ತಂದೆ ಮತ್ತು ಮಗನ ಪಾತ್ರದಲ್ಲಿ (ದ್ವಿಪಾತ್ರ) ಅಭಿನಯಿಸುತ್ತಿದ್ದಾರೆ.

Shah Rukh Khan in Jawan
ಜವಾನ್ ಚಿತ್ರದಲ್ಲಿ ಎಸ್​ಆರ್​ಕೆ ಡಬಲ್​ ರೋಲ್​​​
author img

By

Published : Apr 30, 2023, 3:19 PM IST

ದಕ್ಷಿಣ ಚಿತ್ರರಂಗದ ನಿರ್ದೇಶಕ ಅಟ್ಲೀ ಕುಮಾರ್​ ಆ್ಯಕ್ಷನ್​​ ಕಟ್​​ ಹೇಳುತ್ತಿರುವ 'ಜವಾನ್' ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ಬಹುತಾರಾಗಣದ ಚಿತ್ರ ಬಿಡುಗಡೆಗೆ ಸಿನಿಪ್ರಿಯರು ಕಾದು ಕುಳಿತಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ, ಕಮಲ್ ಹಾಸನ್ ಅವರ 'ಒರು ಕೈದಿಯಿನ್ ಡೈರಿ' ಜವಾನ್​ ಚಲನಚಿತ್ರಕ್ಕೆ ಸ್ಫೂರ್ತಿಯಂತೆ. ಹಿರಿಯ ನಟ ಅಮಿತಾಭ್​​ ಬಚ್ಚನ್ ಅವರ ಆಖ್ರೀ ರಾಸ್ತಾ (1986) ಕೂಡಾ ಕಮಲ್ ಹಾಸನ್ ಅವರ ಒರು ಕೈದಿಯಿನ್ ಡೈರಿಯ ರೂಪಾಂತರ.

ಪ್ರತೀಕಾರದ ಕಥಾ ಹಂದರವಿರುವ ಚಿತ್ರಗಳಲ್ಲಿ ತಂದೆ ಮತ್ತು ಮಗನ ಪಾತ್ರಗಳಲ್ಲಿ ಸೂಪರ್‌ಸ್ಟಾರ್‌ಗಳು ನಟಿಸಿರುವ ಉದಾಹರಣೆಗಳಿವೆ. ಈಗಾಗಲೇ ತೆರೆ ಕಂಡಿರುವ 'ಒರು ಕೈದಿಯಿನ್ ಡೈರಿ', 'ಆಖ್ರೀ ರಾಸ್ತಾ'ಗಳಲ್ಲಿ ದ್ವಿಪಾತ್ರಾಭಿನಯವಿದೆ. ಹಾಗಾಗಿ ಎಸ್‌ಆರ್‌ಕೆ(ಶಾರುಖ್ ಖಾನ್) ತಂದೆ ಮತ್ತು ಮಗನ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಟ್ಲೀ ಅವರು ಕಮಲ್ ಹಾಸನ್ ಅವರ ಅಭಿಮಾನಿ ಕೂಡಾ. 1980ರ ಚಲನಚಿತ್ರಕ್ಕೆ ತಮ್ಮದೇ ಆದ ವಿಶಿಷ್ಟ ವ್ಯಾಖ್ಯಾನ ನೀಡಲು ಇವರು ಬಯಸುತ್ತಿದ್ದಾರೆ. ಆದಾಗ್ಯೂ, ಅಧಿಕೃತವಾಗಿ ಈ ಬಗ್ಗೆ ಏನನ್ನೂ ಘೋಷಿಸಿಲ್ಲ. ಜವಾನ್ ಸಿನಿಮಾ ಒಂದು ರೀಮೇಕ್/ರೂಪಾಂತರವೋ ಅಥವಾ ಕ್ಲಾಸಿಕ್ ಚಿತ್ರಗಳಿಗೆ ಸಲ್ಲಿಸುತ್ತಿರುವ ಗೌರವವೋ ಎಂಬುದು ಮುಂದಿನ ವಾರಗಳಲ್ಲಿ ಬಿಡುಗಡೆ ಆಗಲಿರುವ ಚಿತ್ರದ ಟೀಸರ್‌ ಮೂಲಕ ಸ್ಪಷ್ಟವಾಗಲಿದೆ. ಜೂನ್ 2ರಂದು ಚಿತ್ರ ಬಿಡುಗಡೆಯಾಗಲಿದೆ.

ಈ ಹಿಂದೆ, ಜವಾನ್‌ ಚಿತ್ರದ ಕೆಲವು ದೃಶ್ಯಗಳು ಸೋರಿಕೆ ಆಗಿದ್ದವು. ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಚಲನಚಿತ್ರ ಸಂಬಂಧಿತ ಎರಡು ವಿಡಿಯೋ ತುಣುಕುಗಳು ಸೋರಿಕೆಯಾಗಿವೆ. ಅವುಗಳಲ್ಲಿ ಒಂದು ಹೊಡೆದಾಟದ ದೃಶ್ಯವಾದರೆ, ಇನ್ನೊಂದು ನೃತ್ಯದ ಸೀಕ್ವೆನ್ಸ್​​ ಒಳಗೊಂಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಈ ಸೀನ್​ಗಳು ಸೋರಿಕೆಯಾಗಿವೆ ಎಂದು ಅರ್ಜಿದಾರರು ತಿಳಿಸಿದ್ದರು.

ಇದನ್ನೂ ಓದಿ: 'ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ': ನಟ ದತ್ತಣ್ಣ ಸೇರಿ ಸೆಲೆಬ್ರಿಟಿಗಳಿಂದ ಮನವಿ

ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸಂಶಯಾಸ್ಪದ ವೆಬ್‌ಸೈಟ್‌ಗಳು, ಕೇಬಲ್ ಟಿವಿ ನೆಟ್‌ವರ್ಕ್‌ಗಳು, ಡೈರೆಕ್ಟ್-ಟು-ಹೋಮ್ ಸೇವೆಗಳು ಸೇರಿದಂತೆ ಹಲವಾರು ಪ್ಲಾಟ್‌ಫಾರ್ಮ್‌ಗಳಿಗೆ ಸೋರಿಕೆಯಾದ ಕ್ಲಿಪ್‌ಗಳನ್ನು ತೆಗೆದುಹಾಕಲು ಮತ್ತು ಅವುಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲು ಆದೇಶಿಸಿದೆ.

ಇದನ್ನೂ ಓದಿ: 'ಮಗುವನ್ನು ಹೊಂದುವ ಆಸೆಯಿತ್ತು'.. ಮದುವೆ, ಮಕ್ಕಳ ಬಗ್ಗೆ ಮಾತನಾಡಿದ ಬಾಲಿವುಡ್​​ ಬ್ಯಾಚುಲರ್​​ ಸಲ್ಲು

ಶಾರುಖ್​ ಖಾನ್​ ಅವರು ಜವಾನ್​ ಅಲ್ಲದೇ ಡಂಕಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ಹಾಡೊಂದರ ಶೂಟಿಂಗ್​​ ಮುಗಿಸಿ ಬಂದಿದ್ದಾರೆ. ಎಸ್​ಆರ್​ಕೆ 11 ವರ್ಷಗಳ ಬಳಿಕ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದು ಗಮನ ಸೆಳದಿತ್ತು. ನಟಿ ತಾಪ್ಸಿ ಪನ್ನು ಈ ಚಿತ್ರದಲ್ಲಿ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.