ETV Bharat / entertainment

ನಯನತಾರಾ - ವಿಘ್ನೇಶ್ ಅದ್ಧೂರಿ​ ಮದುವೆ.. ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗಿ

ಬಹುಭಾಷಾ ರಂಗದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್​ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್​ ಶಾ ಶಾರುಖ್ ಖಾನ್ ಭಾಗಿಯಾಗುವ ಸಾಧ್ಯತೆ ದಟ್ಟವಾಗಿದೆ.

nayanthara wedding
nayanthara wedding
author img

By

Published : Jun 9, 2022, 11:21 AM IST

Updated : Jun 9, 2022, 3:02 PM IST

ಮಹಾಬಲಿಪುರಂ(ತಮಿಳುನಾಡು): ನಿರ್ದೇಶಕ ವಿಘ್ನೇಶ್​​ ಶಿವನ್ ಹಾಗೂ ನಯನತಾರಾ ಇಂದು ವಿವಾಹ ಬಂಧನಕ್ಕೆ ಕಾಲಿಡುತ್ತಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಈ ಜೋಡಿಯ ಮದುವೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಲಿದ್ದು, ಬಾಲಿವುಡ್​ನ ಬಾದ್​ಶಾ ಶಾರೂಖ್ ಖಾನ್ ಕೂಡ ಆಗಮಿಸಲಿದ್ದಾರೆಂದು ತಿಳಿದು ಬಂದಿದೆ.

shah rukh khan to attend jawan co actress nayanthara wedding today
ನಯನತಾರಾ - ವಿಘ್ನೇಶ್​ ವಿವಾಹ ಕ್ಷಣ

ನಯನತಾರಾ ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯ ಚಿತ್ರಗಳಲ್ಲಿ ಮಿಂಚು ಹರಿಸಿದ್ದಾರೆ. ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇಂದು ಇಬ್ಬರ ಪ್ರೀತಿಗೆ ಅಧಿಕೃತ ಮುದ್ರೆ ಬೀಳಲಿದೆ. ನಯನತಾರಾ ಹಾಗೂ ಶಾರುಖ್ ಖಾನ್ ಹಿಂದಿ ಜವಾನ್​ ಚಿತ್ರದಲ್ಲಿ ಒಟ್ಟಿಗೆ ನಟನೆ ಮಾಡಿದ್ದು, ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ 2023ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ನಯನತಾರಾ - ವಿಘ್ನೇಶ್ ಅದ್ಧೂರಿ​ ಮದುವೆ.. ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗಿ

ಮಧ್ಯಾಹ್ನ 12 ಗಂಟೆಗೆ ಮದುವೆ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದ ವಿಘ್ನೇಶ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಇಂದಿನ ಮದುವೆ ಕಾರ್ಯಕ್ರಮ ಹಾಗೂ ಜೂನ್​ 11ರಂದು ನಡೆಯಲಿರುವ ಆರಕ್ಷತೆಯಲ್ಲಿ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಪ್ರಮುಖವಾಗಿ ಕಮಲ್ ಹಾಸನ್​, ರಜನಿಕಾಂತ್​, ಸಮಂತಾ ಸೇರಿದಂತೆ ಅನೇಕರು ಆಗಮಿಸಿ, ನವ ಜೋಡಿಗೆ ಶುಭ ಕೋರಲಿದ್ದಾರೆ. ಈ ಜೋಡಿಯ ಮದುವೆ ಕಾರ್ಯಕ್ರಮ ಒಟಿಟಿಯಲ್ಲಿ ಪ್ರಸಾರವಾಗಲಿದೆ.

Last Updated : Jun 9, 2022, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.