ETV Bharat / entertainment

Jawan: ತಿರುಪತಿಯಲ್ಲಿ ಜವಾನ್ ಜೋಡಿ.. ಚಿತ್ರ​ ಬಿಡುಗಡೆಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್, ನಯನತಾರಾ - ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ತಮಿಳು ತಾರೆ ನಯನತಾರಾ ತಮ್ಮ ಚಿತ್ರ ಜವಾನ್ ಬಿಡುಗಡೆಗೆ ಮುನ್ನ ಮಂಗಳವಾರ ಬೆಳಗ್ಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಾಲಿವುಡ್‌ನ ಬಹುನಿರೀಕ್ಷಿತ ಜವಾನ್ ಸಿನಿಮಾ ಸೆ.7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Shah Rukh Khan offers prayers at Tirumala temple
ಈ ವರ್ಷ ತೆರೆಕಂಡ 'ಪಠಾಣ್'​ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಇದೀಗ 'ಜವಾನ್'​ ಚಿತ್ರ ಕೂಡ ಫಸ್ಟ್​ ಡೇ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಲಿದೆ. ಈ ಮೂಲಕ​ ಒಂದೇ ವರ್ಷದಲ್ಲಿ ಶಾರುಖ್​ ಖಾನ್​ ಅವರ ಎರಡೂ ಚಿತ್ರಗಳು 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಲಿದ್ದು, ಈ ವಿಶೇಷ ದಾಖಲೆಯನ್ನು ಸೃಷ್ಟಿಸಿದ ಹಿಂದಿ ಚಿತ್ರರಂಗದ ಮೊದಲ ಸ್ಟಾರ್​ ಬಾದ್​ ಶಾ ಆಗಲಿದ್ದಾರೆ.
author img

By ETV Bharat Karnataka Team

Published : Sep 5, 2023, 11:12 AM IST

ತಿರುಪತಿ(ಆಂಧ್ರ ಪ್ರದೇಶ): ತಮ್ಮ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಜವಾನ್' ಬಿಡುಗಡೆಗೂ ಮುನ್ನ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ಪುತ್ರಿ ಸುಹಾನಾ ಖಾನ್ ಮತ್ತು ಸಹನಟಿ ನಯನತಾರಾ ಅವರೊಂದಿಗೆ ಇಂದು ಮುಂಜಾನೆ ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ತಿರುಪತಿ ದೇವಸ್ಥಾನದ ಅಧಿಕಾರಿಗಳು ಶಾರುಖ್ ಖಾನ್ ಅವರನ್ನು ಸ್ವಾಗತಿಸಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದರು.

ಜಮ್ಮುವಿನ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ ವಾರಗಳ ಬಳಿಕ, ಶಾರುಖ್ ಖಾನ್ ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಈ ವೇಳೆ ಜೊತೆಗಿದ್ದರು. ಇಂದು ಮುಂಜಾನೆ, ಶಾರುಖ್ ತಿಳಿ ಕಂದು ಬಣ್ಣದ ಕಾರ್ಗೋ ಪ್ಯಾಂಟ್, ಕಪ್ಪು ಹೂಡಿ ಮತ್ತು ಟೋಪಿ ಧರಿಸಿ ತಿರುಪತಿಗೆ ಆಗಮಿಸಿದ್ದರು. ಅಂಗ ರಕ್ಷಕರಿಂದ ಸುತ್ತುವರೆದಿದ್ದ ಅವರು, ದೇವರ ದರ್ಶನಕ್ಕೆ ತೆರಳುವ ವೇಳೆ ಬಿಳಿ ಪಂಚೆ ಹಾಗೂ ಶರ್ಟ್ ಧರಿಸಿದ್ದರು. ಸುಹಾನಾ ಖಾನ್ ಕೂಡ ಬಿಳಿಯ ಚೂಡಿದಾರ್ ಧರಿಸಿದ್ದರು. ಜತೆಗೆ ನಟಿ ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಕೂಡ ಬಿಳಿ ಉಡುಗೆಯಲ್ಲಿದ್ದರು.

ಸೆ.7 ರಂದು ಬಿಡುಗಡೆ: ಶಾರುಖ್ ಖಾನ್​ ಅಭಿನಯದ ಜವಾನ್ ಸಿನಿಮಾ ಸೆ.7 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ 6 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದ್ದು, ಚಿತ್ರದ ಕ್ರೇಜ್ ಹೆಚ್ಚಾಗಿದೆ. ಜವಾನ್​ ಬಿಡುಗಡೆಗೆ ಇನ್ನೆರೆಡು ದಿನ ಬಾಕಿಯಿದೆ. ಹೀಗಾಗಿ ಚಿತ್ರ ತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಈ ಚಿತ್ರ ಡಿ.7ರಿಂದ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಇನ್ನು ಜವಾನ್ ಟ್ರೇಲರ್ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವಂತೆ ಅವರ ಹಲವು ಪೋಸ್ಟರ್‌ಗಳು ಹೇಳುತ್ತಿವೆ. ಇದರಲ್ಲಿ ನಟಿ ಪ್ರಿಯಾಮಣಿ, ಗಿರಿಜಾ ಓಕ್, ಸನ್ಯಾ ಮಲ್ಹೋತ್ರಾ, ಲೆಹರ್ ಖಾನ್, ಸಂಜೀತಾ ಭಟ್ಟಾಚಾರ್ಯ ಮತ್ತು ಆಲಿಯಾ ಖುರೇಷಿ ಈ 6 ಮಹಿಳೆಯರ ತಂಡ ಮೆಟ್ರೋವನ್ನು ಹೈಜಾಕ್ ಮಾಡುವುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

ವಿಶೇಷ ದಾಖಲೆ ಬರೆಯಲು ಶಾರುಖ್​ ಸಿನಿಮಾ ಸಿದ್ಧ: ಜವಾನ್​ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈಗಾಗಲೇ ಪ್ರೀ-ಟಿಕೆಟ್​ ಬುಕ್ಕಿಂಗ್​ ಪ್ರೊಸೆಸ್​ ಓಪನ್​ ಆಗಿದ್ದು, ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ. ಜತೆಗೆ 'ಜವಾನ್​' ಬಿಡುಗಡೆಗೂ ಮುನ್ನವೇ ಈವರೆಗಿನ ಅನೇಕ ದಾಖಲೆಗಳನ್ನು ಮುರಿದಿದ್ದು, ಹೊಸ ದಾಖಲೆಯನ್ನು ಸೃಷ್ಟಿಸಿದೆ.

  • ಚಿತ್ರದ ಮುಂಗಡ ಬುಕ್ಕಿಂಗ್​ಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಸಿಕ್ಕಿದ್ದು, ಮೊದಲ ದಿನವೇ​ ಭರ್ಜರಿ ಓಪನಿಂಗ್​ ಹೊಂದುವ ನಿರೀಕ್ಷೆ ಇದೆ.
  • ಫಸ್ಟ್​ ಡೇ 70 ರಿಂದ 75 ಕೋಟಿ ರೂಪಾಯಿ ವ್ಯವಹಾರವನ್ನು 'ಜವಾನ್​' ಮಾಡಲಿದೆ. ಈ ಮೂಲಕ ಬಾಹುಬಲಿ 2 (58 ಕೋಟಿ ರೂ.), ಕೆಜಿಎಫ್​ 2 (61 ಕೋಟಿ ರೂ.) ಮತ್ತು ಪಠಾಣ್​ (55 ಕೋಟಿ ರೂ.) ದಾಖಲೆಗಳನ್ನು ಉಡೀಸ್​ ಮಾಡಲಿದೆ.
  • ಈ ವರ್ಷ ತೆರೆಕಂಡ 'ಪಠಾಣ್'​ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಇದೀಗ 'ಜವಾನ್'​ ಚಿತ್ರ ಕೂಡ ಫಸ್ಟ್​ ಡೇ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಲಿದೆ. ಈ ಮೂಲಕ​ ಒಂದೇ ವರ್ಷದಲ್ಲಿ ಶಾರುಖ್​ ಖಾನ್​ ಅವರ ಎರಡೂ ಚಿತ್ರಗಳು 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಲಿದ್ದು, ಈ ವಿಶೇಷ ದಾಖಲೆಯನ್ನು ಸೃಷ್ಟಿಸಿದ ಹಿಂದಿ ಚಿತ್ರರಂಗದ ಮೊದಲ ಸ್ಟಾರ್​ ಬಾಲಿವುಡ್​ ಬಾದ್​ ಶಾ ಆಗಲಿದ್ದಾರೆ.

ಇದನ್ನೂ ಓದಿ: 'ಜವಾನ್'​ ಹಿಟ್​ ಆಗೋದು ಪಕ್ಕಾನಾ?​: 10 ವಿಶೇಷ ದಾಖಲೆ ಬರೆಯಲು ಶಾರುಖ್​ ಸಿನಿಮಾ ಸಿದ್ಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.