ETV Bharat / entertainment

Jawan: 1 ಮಿಲಿಯನ್​ಗೂ ಹೆಚ್ಚು​ ಮುಂಗಡ ಟಿಕೆಟ್​ ಮಾರಾಟ - 125 ಕೋಟಿ ರೂ. ಕಲೆಕ್ಷನ್​ ಸಾಧ್ಯತೆ! - ಜವಾನ್ ಅಡ್ವಾನ್ಸ್​ ಟಿಕೆಟ್​

Shah Rukh Khan Jawan: ಬಾಲಿವುಡ್​ ಸೂಪರ್​ ಸ್ಟಾರ್ ಶಾರುಖ್​ ಖಾನ್​ ತಮ್ಮ ಸ್ವಂತ ದಾಖಲೆಯನ್ನೇ ಮುರಿಯಲು ಸಜ್ಜಾಗಿದ್ದಾರೆ. ನಟನ ಕೊನೆಯ ಸಿನಿಮಾ 'ಪಠಾಣ್' 105 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಮುಂದಿನ 'ಜವಾನ್' ಸಿನಿಮಾ ​​125 ಕೋಟಿ ರೂ. ಸಂಪಾದಿಸುವ ಸಾಧ್ಯತೆಯಿದೆ.

Shah Rukh Khan Jawan
ಶಾರುಖ್​ ಖಾನ್​ ಜವಾನ್ ಸಿನಿಮಾ
author img

By ETV Bharat Karnataka Team

Published : Sep 6, 2023, 7:09 PM IST

Updated : Sep 6, 2023, 7:30 PM IST

ಬಹುನಿರೀಕ್ಷಿತ ಆ್ಯಕ್ಷನ್​ ಥ್ರಿಲ್ಲರ್​​ 'ಜವಾನ್​' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲಿವುಡ್​ ಕಿಂಗ್​​​ ಶಾರುಖ್​ ಖಾನ್​ ಅಭಿನಯದ ಸಿನಿಮಾ ಕ್ರೇಜ್​​ ಜೋರಾಗೇ ಇದೆ. ದೇಶ ಮಾತ್ರವಲ್ಲದೇ ಸಾಗರೋತ್ತರ ಪ್ರದೇಶಗಳಲ್ಲೂ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಅಡ್ವಾನ್ಸ್​ ಟಿಕೆಟ್​ ಬುಕಿಂಗ್​​ ಪ್ರೊಸೆಸ್​​ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ಸಿನಿಮಾದ ಮುಂಗಡ ಟಿಕೆಟ್​ ಬುಕಿಂಗ್​ ಉತ್ತಮವಾಗಿ ಸಾಗಿದ್ದು, ಸುಮಾರು 45 ಕೋಟಿ ರೂ.ನಷ್ಟು ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ.

ಪಠಾಣ್​ ಹಿಂದಿಕ್ಕುತ್ತಾ ಜವಾನ್​?: ಸಖತ್​ ಸೌಂಡ್​ ಮಾಡುತ್ತಿರುವ ಜವಾನ್​ ಸಿನಿಮಾ ಈಗಾಗಲೇ ಒಂದು ಮಿಲಿಯನ್​ಗೂ ಹೆಚ್ಚು ಟಿಕೆಟ್​ಗಳನ್ನು ಮಾರಾಟ ಮಾಡಿದೆ. 1 ಮಿಲಿಯನ್​ ಮುಂಗಡ ಟಿಕೆಟ್​ ಮಾರಾಟ ಮಾಡಿರುವ ಎರಡನೇ ಬಾಲಿವುಡ್​ ಚಿತ್ರವಿದು. 2023ರ ಆರಂಭದಲ್ಲಿ ತೆರೆಕಂಡು ಧೂಳೆಬ್ಬಿಸಿದ್ದ ಪಠಾಣ್​​ ಸಿನಿಮಾದಂತೆ ಜವಾನ್​ ಸಹ ಸೂಪರ್​ ಹಿಟ್​ ಆಗುವ ಸೂಚನೆ ಕೊಟ್ಟಿದೆ.

ಪಠಾಣ್​ ಸಿನಿಮಾ 1.08 ಮಿಲಿಯನ್​ ಅಡ್ವಾನ್ಸ್​ ಟಿಕೆಟ್ಸ್ ಮಾರಾಟ ಮಾಡಿತ್ತು. ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳು ಬಾಕಿ ಇದ್ದು, ಚಿತ್ರ ಈಗಾಗಲೇ 1 ಮಿಲಿಯನ್​​ ಮೈಲಿಗಲ್ಲನ್ನು (ಬೆಳಗ್ಗಿನ ಮಾಹಿತಿ, ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿದೆ) ದಾಟಿದೆ. ಪಠಾಣ್​ ದಾಖಲೆ ಮೀರಿಸಲಿದೆ ಎಂಬ ವಿಶ್ವಾಸವಿದೆ. ಬಾಲಿವುಡ್​ ಇತಿಹಾಸದಲ್ಲಿ ಮೊದಲ ದಿನಕ್ಕೆ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಅಡ್ವಾನ್ಸ್​ ಟಿಕೆಟ್ಸ್ ಮಾರಾಟ ಮಾಡುವ ಮೂಲಕ ಜವಾನ್​ ದಾಖಲೆ ಬರೆದಿದೆ ಎಂದು ಸಿನಿ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್​​ ತಿಳಿಸಿದ್ದಾರೆ.

  • " class="align-text-top noRightClick twitterSection" data="">

ಮೊದಲ ದಿನ ದಾಖಲೆ ಬರೆಯಲಿದೆಯಾ ಜವಾನ್​​?: ಮೊದಲ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಹಿಂದಿ ಚಿತ್ರರಂಗದಲ್ಲಿ ದಿ ಬೆಸ್ಟ್ ಓಪನರ್​ ಸಿನಿಮಾ ಆಗಿ ಜವಾನ್​ ಹೊರಹೊಮ್ಮಲಿದೆಯೆಂಬ ನಿರೀಕ್ಷೆ ಇದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್​ ಮಾಹಿತಿ ಪ್ರಕಾರ,​ ಜವಾನ್​ ಸಿನಿಮಾ ದೇಶೀಯ ಮಾರುಕಟ್ಟೆಯಲ್ಲೇ ಬರೋಬ್ಬರಿ 80 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ.​ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 125 ಕೋಟಿ ರೂ. ಕಲೆಕ್ಷನ್​ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಬಾಲಿವುಡ್​ನಲ್ಲಿ ಮೊದಲ ದಿನ ಅತ್ಯಧಿಕ ಕಲೆಕ್ಷನ್​ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಶಾರುಖ್​ ಅವರ ಪಠಾಣ್​ ಪಾತ್ರವಾಗಿದೆ. ಈ ಸಿನಿಮಾ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 67 ಕೋಟಿ ರೂ., ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 105 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಜವಾನ್ ಸಿನಿಮಾ ​​125 ಕೋಟಿ ರೂ. ಕಲೆಕ್ಷನ್​ ಮಾಡುವ ಸಾಧ್ಯತೆ ಇದೆ ಎಂದು ಸಿನಿ ವ್ಯವಹಾರ ವಿಶ್ಲೇಷಕರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಸಿಬ್ಬಂದಿ ಮದುವೆಯಲ್ಲಿ ನ್ಯಾಷನಲ್ ಕ್ರಶ್.. ಒಂದೇ ಲೊಕೇಶನ್​ನಲ್ಲಿ ವಿಜಯ್​, ರಶ್ಮಿಕಾ ಫೋಟೋ - ಅಭಿಮಾನಿಗಳಲ್ಲಿ ಗೊಂದಲ

ಆ್ಯಕ್ಷನ್​ ಹೀರೋ ಆಗಬೇಕೆಂಬ ಕನಸು ಹೊತ್ತು ಬಂದ ಶಾರುಖ್​ ಖಾನ್​ ಆಗಿದ್ದು ಮಾತ್ರ ರೊಮ್ಯಾಂಟಿಕ್​ ಹೀರೋ. ಚಿತ್ರರಂಗದಲ್ಲಿ 3 ದಶಕಕ್ಕೂ ಹೆಚ್ಚು ಸಮಯದಿಂದ ಗುರುತಿಸಿಕೊಂಡಿರುವ ಶಾರುಖ್​​ 2023ರಲ್ಲಿ ಕಂಪ್ಲೀಟ್​ ಆ್ಯಕ್ಷನ್ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದಾರೆ. ಜವಾನ್​ ಶಾರುಖ್​ ಅವರ ಎರಡನೇ ಆ್ಯಕ್ಷನ್​ ಸಿನಿಮಾ. ಹಾಗಾಗಿ ಸಿನಿಮಾ ಶಿಖರದಷ್ಟು ನಿರೀಕ್ಷೆ ಇದೆ.​

ಇದನ್ನೂ ಓದಿ: ಹೆಚ್ಚಿದ 'Jawan' ಚಿತ್ರದ ಕ್ರೇಜ್​​.. ಚಿತ್ರಮಂದಿರದಲ್ಲಿ ಟಿಕೆಟ್​ಗಾಗಿ ಮುಗಿಬಿದ್ದ ಅಭಿಮಾನಿಗಳು

ಎಸ್​ಆರ್​ಕೆ ದಂಪತಿಯ ರೆಡ್​ ಚಿಲ್ಲೀಸ್​ ಬ್ಯಾನರ್​​ ಜವಾನ್​​ ಸಿನಿಮಾವನ್ನು ನಿರ್ಮಿಸಿದೆ. ಸೌತ್​ ಸ್ಟಾರ್ ಡೈರೆಕ್ಟರ್​​ ಅಟ್ಲೀ ನಿರ್ದೇಶನದಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದ್ದು, ವಿಜಯ್​ ಸೇತುಪತಿ, ನಯನತಾರಾ ಸೇರಿದಂತೆ ಹಲವರು ನಟಿಸಿದ್ದಾರೆ. ಪಠಾಣ್​ ನಟಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಳೆ ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ.

Last Updated : Sep 6, 2023, 7:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.