ETV Bharat / entertainment

ಶಾರುಖ್​ ಬರ್ತ್​ಡೇ: ಅದ್ಧೂರಿ ಸಂತೋಷಕೂಟಕ್ಕೆ ಸಿದ್ಧತೆ; ಅಭಿಮಾನಿಗಳಿಂದ ವಿವಿಧ ಸಮಾಜಸೇವೆ - ಡಂಕಿ

Shah Rukh Khan Birthday celebration: ನವೆಂಬರ್ 2ರಂದು ಶಾರುಖ್​ ಖಾನ್​​ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು ಭರ್ಜರಿ ಸಿದ್ಧತೆ ನಡೆಯುತ್ತಿದೆ.

Shah Rukh Khan birthday
ಶಾರುಖ್ ಖಾನ್​ ಬರ್ತ್​ಡೇ
author img

By ETV Bharat Karnataka Team

Published : Oct 31, 2023, 3:38 PM IST

ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ಶಾರುಖ್ ಖಾನ್ ಬರ್ತ್‌ಡೇ ಸೆಲೆಬ್ರೇಶನ್​ಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್​ 2ರಂದು 58ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಕಿಂಗ್​ ಖಾನ್​ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಜ್ಜಾಗಿದ್ದಾರೆ. ನಾಲ್ಕು ವರ್ಷಗಳ ಬ್ರೇಕ್​ ಬಳಿಕ 'ಪಠಾಣ್' ಮತ್ತು 'ಜವಾನ್‌'ನಂತಹ ಬ್ಲಾಕ್​ಬಸ್ಟರ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ನವೆಂಬರ್ 2ರಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಯೋಜಿಸಲು ಯೋಜಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳೂ ಕೂಡಾ ತಮ್ಮ ಮೆಚ್ಚಿನ ನಟನ ಬರ್ತ್‌ಡೇ ಸೆಲೆಬ್ರೇಟ್​ ಮಾಡಲು ಉತ್ಸುಕರಾಗಿದ್ದಾರೆ. ಹಲವು ಅಭಿಮಾನಿ ಸಂಘಗಳು ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿಸಲು ಕಂಬಳಿ ದಾನ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವಂಥ ಹಲವು ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತಿವೆ.

ಶಾರುಖ್​ ಖಾನ್​ ಅವರಿಗೆ ಈ ಜನ್ಮದಿನಾಚರಣೆ ಬಹಳ ವಿಶೇಷವಾಗಿದೆ. ಕೆಲವು ಬದ್ಧತೆಗಳು, ಕೋವಿಡ್ ಹಿನ್ನೆಲೆ​ಯಿಂದಾಗಿ ಸಿನಿಮಾಗಳಿಂದ ಬ್ರೇಕ್​ ಪಡೆದಿದ್ದರು. ನಾಲ್ಕು ವರ್ಷಗಳ ಬಳಿಕ 'ಪಠಾಣ್'​ ಸಿನಿಮಾ ಮೂಲಕ ಬಂದ ಕಿಂಗ್​ ಖಾನ್​​, ಭರ್ಜರಿ ಯಶಸ್ಸು ಗಳಿಸಿದರು. ಕಳೆದ ತಿಂಗಳು ತೆರೆಕಂಡ 'ಜವಾನ್'​ ಕೂಡ ಸೂಪರ್‌ಹಿಟ್ ಆಗಿ ಒಂದು ಸಾವಿರ ಕೋಟಿ ರೂ. ಕ್ಲಬ್​ ಸೇರಿದೆ. ಇದೇ ಸಾಲಿನಲ್ಲಿ ತೆರೆಕಾಣಲು 'ಡಂಕಿ' ಸಿನಿಮಾ ಸಿದ್ಧವಾಗಿದೆ. ಹೀಗಾಗಿ 2023 ಎಸ್​ಆರ್​ಕೆ ಅವರಿಗೆ ವಿಶೇಷ. ಹಾಗಾಗಿ ತಮ್ಮ 58ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ರೆಡಿಯಾಗಿದ್ದಾರೆ. ಜನ್ಮದಿನಾಚರಣೆಗೆ ಭಾರತೀಯ ಚಿತ್ರರಂಗದ ಖ್ಯಾತನಾಮರನ್ನು ಆಹ್ವಾನಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ: ಕಾಕ್ಟೈಲ್ ಪಾರ್ಟಿಯಲ್ಲಿ ಅಲ್ಲು ಅರ್ಜುನ್, ರಾಮ್​ಚರಣ್ ಸೇರಿ ತಾರಾ ಕುಟುಂಬ ಭಾಗಿ​​

ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಕರಣ್ ಜೋಹರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಾಜ್‌ಕುಮಾರ್ ಹಿರಾನಿ, ಅಟ್ಲೀ ಸೇರಿದಂತೆ ಹಲವು ಗಣ್ಯರಿದ್ದಾರೆ. ಶಾರುಖ್ ಖಾನ್ ಆಪ್ತಸ್ನೇಹಿತ ಸಲ್ಮಾನ್ ಖಾನ್ ಕೂಡಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಮೀರ್ ಖಾನ್ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕು. ಏಕೆಂದರೆ ಅಮೀರ್ ಸದ್ಯ ತಮ್ಮ ತಾಯಿಯ ಜೊತೆಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್​​ ಖಾನ್ ಜನ್ಮದಿನದಂದು ಡಂಕಿ ಟೀಸರ್​ ರಿಲೀಸ್​​​: ಮುಂಬೈನಲ್ಲಿ ಅಭಿಮಾನಿಗಳಿಗಾಗಿ ಖಾನ್ ಬರ್ತ್​​ಡೇ ಪಾರ್ಟಿ!

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಶಾರುಖ್ ಜನ್ಮದಿನದಂದು ಮುಂಬರುವ ಚಿತ್ರ 'ಡಂಕಿ'ಯ ಟೀಸರ್ ಬಿಡುಗಡೆ ಮಾಡಲು ಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅಭಿಮಾನಿಗಳು ಕುತೂಹಲ ಹೆಚ್ಚಿಸಿದೆ. ಟೀಸರ್ ಕುರಿತು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್ ಬಿಡುಗಡೆಯ ನಂತರ ತಮ್ಮ ನಿವಾಸ ಮನ್ನತ್‌ನ ಹೊರಗೆ ಜಮಾಯಿಸಲಿರುವ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ. ಸಂಜೆ, ಈ ಮೇಲೆ ತಿಳಿಸಿದಂತೆ 'ಎನ್​ಎಂಎಸಿಸಿ' ನಲ್ಲಿ ಸ್ಟಾರ್-ಸ್ಟಡ್ ಪಾರ್ಟಿ ಆಯೋಜಿಸದ್ದಾರೆ. ಈ ಈವೆಂಟ್​ನಲ್ಲಿ ಬಣ್ಣದ ಲೋಕದ ಗಣ್ಯರು ಭಾಗಿಯಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.