ETV Bharat / entertainment

ನಟಿ ಆಲಿಯಾ ಭಟ್​ ಕಂಡು ಕುಣಿದು ಕುಪ್ಪಳಿಸಿದ ಶಾಲಾ ಮಕ್ಕಳು: ವಿಡಿಯೋ ವೈರಲ್​ - ಈಟಿವಿ ಭಾರತ ಕನ್ನಡ

ಬಾಲಿವುಡ್​ ನಟಿ ಆಲಿಯಾ ಭಟ್​ ಅವರನ್ನು ಕಂಡ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

Alia Bhatt
ನಟಿ ಆಲಿಯಾ ಭಟ್
author img

By

Published : Apr 3, 2023, 7:57 PM IST

ಬಾಲಿವುಡ್​ ನಟಿ ಆಲಿಯಾ ಭಟ್​ ಇಂದು ಬೆಳಗ್ಗೆ ಮುಂಬೈ ನಗರದ ಪಾಲಿ ಹಿಲ್​ ಪ್ರದೇಶದಲ್ಲಿ ಶೂಟಿಂಗ್​ಗೆಂದು ತೆರಳುತ್ತಿದ್ದ ವೇಳೆ ಅಭಿಮಾನಿಗಳಿಗೆ ಕಾಣಿಸಿಕೊಂಡರು. ಈ ವೇಳೆ ಅಲ್ಲೇ ಪಕ್ಕದ ಶಾಲೆಯಲ್ಲಿದ್ದ ಮಕ್ಕಳು ತಮ್ಮ ನೆಚ್ಚಿನ ನಟಿ ಕಂಡು ಕುಣಿದು ಕುಪ್ಪಳಿಸಿದರು. ಈ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಪಾಪರಾಜಿಗಳು ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗಿದೆ. ದೃಶ್ಯದಲ್ಲಿ ಆಲಿಯಾ ಗುಲಾಬಿ ಬಣ್ಣದ ಶರ್ಟ್​ ಮತ್ತು ವೈಟ್​ ಪ್ಯಾಂಟ್​ ಧರಿಸಿದ್ದರು.

ಅವರು ಶೂಟಿಂಗ್​ ಸ್ಥಳಕ್ಕೆ ತೆರಳುತ್ತಿರುವ ವೇಳೆ ಆಲಿಯಾ ಹೆಸರನ್ನು ಶಾಲಾ ಮಕ್ಕಳು ಕಿರುಚುವುದನ್ನು ವಿಡಿಯೋದಲ್ಲಿ ಕೇಳಬಹುದು. ತಮ್ಮ ನೆಚ್ಚಿನ ನಟಿ ಪಾಸಾಗುತ್ತಿದ್ದಂತೆ ಪುಣಾಣಿ ಮಕ್ಕಳು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು. ಇದನ್ನು ಕಂಡ ಆಲಿಯಾ ಮಕ್ಕಳತ್ತ ನಗು ಮುಖದಿಂದಲೇ ಕೈ ಬೀಸುತ್ತಾ ಸಾಗಿದರು. ನಟಿಯ ಪ್ರತಿಕ್ರಿಯೆಗೆ ಮಕ್ಕಳಂತೂ ಕುಣಿದು ಕುಪ್ಪಳಿಸಿದರು. ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ 20 ಸಾವಿರ ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: 'ಮರೆಯಲಾಗದ ಭಾರತದ ಮೊದಲ ಪ್ರವಾಸ'.. ಅಂಬಾನಿ ಕುಟುಂಬಕ್ಕೆ ಥ್ಯಾಂಕ್ಸ್​ ಎಂದ ಸೂಪರ್​ ಮಾಡೆಲ್​ ಜಿಜಿ ಹಡಿದ್​

ಇನ್ನು ಆಲಿಯಾ ಭಟ್​ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಆಲಿಯಾ ಭಟ್​ ಜೊತೆ ರಣವೀರ್​ ಸಿಂಗ್​ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಧರ್ಮೇಂದ್ರ, ಜಯಾ ಬಚ್ಚನ್​ ಮತ್ತು ಶಬಾನಾ ಅಜ್ಮಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವು ರಾಕಿ ಮತ್ತು ರಾಣಿಯ ಪ್ರೇಮ ಕಹಾನಿ ಹೇಳುತ್ತದೆ. ಈಗಾಗಲೇ ಸಿನಿಮಾವನ್ನು ಫೆಬ್ರವರಿ 14, ಪ್ರೇಮಿಗಳ ದಿನದಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಬರುವ ಜುಲೈ 23 ರಂದು ಬಿಡುಗಡೆಗೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದ​ ನಟಿ: ಕಳೆದ ವರ್ಷ ಏಪ್ರಿಲ್​ 14 ರಂದು ಬಾಲಿವುಡ್​ ನಟ ರಣಬೀರ್ ಕಪೂರ್​ ಜೊತೆ ನಟಿ ಆಲಿಯಾ ಭಟ್​ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಬಳಿಕ ನವೆಂಬರ್​ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪುತ್ರಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಕೆಲ ಸಮಯ ಆಲಿಯಾ ಭಟ್​ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು. ಇದೀಗ ಮತ್ತೆ ತಮ್ಮ ಸಿನಿಮಾಗಳೆಡೆಗೆ ಗಮನ ಹರಿಸಿದ್ದಾರೆ. ಮಾರ್ಚ್​ 1ರಂದು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಬಿಗಿ ಭದ್ರತಾ ಕ್ರಮಗಳ ನಡುವೆ ಗುಲ್ಮಾರ್ಗ್‌ ಪ್ರದೇಶದಲ್ಲಿ ಚಿತ್ರೀಕರಿಸಿದ್ದರು. ಈ ವೇಳೆ, ಆಲಿಯಾ ತಮ್ಮ 4 ತಿಂಗಳ ಮಗಳನ್ನು ಕಣಿವೆ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ರಶ್ಮಿ ಪ್ರಭಾಕರ್​ಗೆ 'ಸೂಪರ್​ ಕ್ವೀನ್​' ಪಟ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.