ETV Bharat / entertainment

ದೀಪಿಕಾ ಪಡುಕೋಣೆ ಎಲ್ಲ ರೀತಿಯಲ್ಲೂ ನಂಬರ್1: ಸಾರಾ ಅಲಿ ಖಾನ್​ - ಏ ವತನ್ ಮೇರೆ ವತನ್

ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಬಾಲಿವುಡ್​ ನಟಿಯರಾದ ಸಾರಾ ದೀಪಿಕಾ ಕಾಣಿಸಿಕೊಂಡಿದ್ದು, ಅಲ್ಲಿ ತೆಗೆದುಕೊಂಡ ಪೋಟೋವನ್ನು ಸಾರಾ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡಿದ್ದು ದೀಪಿಕಾ ಪಡುಕೋಣೆಗೆ ಎಲ್ಲಾ ರೀತಿಯಲ್ಲು ನಂಬರ್​ 1 ಎಂದು ಬರೆದುಕೊಂಡಿದ್ದಾರೆ.

Photo of Sara and Deepika
ಸಾರ ಅಲಿ ಖಾನ್​ ಹಾಗೂ ದೀಪಿಕಾ ಪಡುಕೋಣೆ
author img

By

Published : Jan 21, 2023, 7:47 AM IST

Updated : Jan 21, 2023, 8:55 AM IST

ಮುಂಬೈ: ಬಾಲಿವುಡ್​ ನಟಿ ಸಾರಾ ಅಲಿ ಖಾನ್ ನಟಿ ದೀಪಿಕಾ ಪಡುಕೋಣೆಯನ್ನು ಎಲ್ಲ ರೀತಿಯಲ್ಲೂ ನಂಬರ್ #1 ಎಂದು ಕರೆದಿದ್ದಾರೆ. ಹೌದು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್​ನಲ್ಲಿ ದೀಪಿಕಾನೊಂದಿಗಿನ ಪೋಟೋವನ್ನು ಹಂಚಿಕೊಂಡಿದ್ದು, ಅದಕ್ಕೆ ‘ ನೀವು ಎಲ್ಲ ರೀತಿಯಲ್ಲೂ ನಂಬರ್ #1 ’ಎಂದು ಬರೆದು ಸ್ಟೋರಿ ಹಾಕಿಕೊಂಡಿದ್ದಾರೆ.

Photo of Sara and Deepika
ನಿಶ್ಚಿತಾರ್ಥ ಸಮಾರಂಭದಲ್ಲಿ ತೆಗೆದುಕೊಂಡಿರುವ ಪೋಟೋ

ಗುರುವಾರ ರಾತ್ರಿ ಆಂಟಿಲಿಯಾದಲ್ಲಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ನಡೆದಿದ್ದು, ಆ ಸಮಾರಂಭಕ್ಕೆ ನಟಿಯರಾದ ದೀಪಿಕಾ ಮತ್ತು ಸಾರಾ ಕೂಡ ಆಗಮಿಸಿದ್ದರು. ಈ ವೇಳೆ, ಇಬ್ಬರು ಜೊತೆಗಿನ ಪೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ‘ಅತ್ರಂಗಿ ರೇ’ಯ ಸಾರ ಆಫ್-ವೈಟ್ ಘರಾರಾ ಉಡುಪು ಧರಿಸಿದ್ದರು, ಇನ್ನು ‘ಬಾಜಿರಾವ್ ಮಸ್ತಾನಿ’ ದೀಪಿಕಾ ಕೆಂಪು ಸೀರೆ ಧರಿಸಿದ್ದರು. ಇಬ್ಬರು ತಮ್ಮದೆ ಆದ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

25 ರಂದು ತೆರೆಕಾಣಲಿರುವ ‘ಪಠಾಣ್’: ಸದ್ಯ ಎಲ್ಲಾ ವಿವಾದಗಳ ನಂತರ ಅವೆಲ್ಲವನ್ನು ಮೀರಿ ದೀಪಿಕಾ ಅಭಿನಯಿಸಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಆಕ್ಷನ್ ಥ್ರಿಲ್ಲರ್ ಮೂವಿ ‘ಪಠಾಣ್’ ಜನವರಿ 25, 2023 ರಂದು ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶಾರುಖ್ ಖಾನ್​ ಹಾಗೂ ಜಾನ್ ಅಬ್ರಹಾಂ ಜೊತೆಗೆ ಶಾರುಖ್ ಖಾನ್​ಗೆ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

ದೊಡ್ಡ ಪ್ರಾಜೆಕ್ಟ್​ನಲ್ಲಿ ನಟಿಸುತ್ತಿರುವ ಪಡುಕೋಣೆ: ಪಠಾಣ್ ಇನ್ನು 4 ದಿನದಲ್ಲಿ ರೀಲೀಸ್​ ಆಗಲಿದೆ. ದೀಪಿಕಾ ಅವರು ಇದಲ್ಲದೇ ದಕ್ಷಿಣ ನಟ ಪ್ರಭಾಸ್ ಜೊತೆಗಿನ ಪ್ಯಾನ್ ಇಂಡಿಯಾ ಚಲನಚಿತ್ರ 'ಪ್ರಾಜೆಕ್ಟ್ ಕೆ' ಮತ್ತು ನಟ ಅಮಿತಾಬ್ ಬಚ್ಚನ್ ಜೊತೆ 'ದಿ ಇಂಟರ್ನ್' ನಲ್ಲಿ ಅಭಿನಯಿಸಿದ್ದಾರೆ.

ದಾಖಲೆ ಬರೆದ ಪಠಾಣ್​ನ ಮುಂಗಡ ಟಿಕೆಟ್​​ ಬುಕ್ಕಿಂಗ್: ಕಿಂಗ್​ ಖಾನ್​ ಶಾರೂಖ್​ ಹಾಗೂ ದೀಪಿಕಾರವರ ಜೊತೆಗಿನ 4 ನೇ ಸಿನೆಮಾ ಇದಾಗಿದ್ದು. ಅವರ ಅಭಿಮಾನಿಗಳಂತು 25 ರ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. 25 ಕ್ಕೆ ಈ ಚಿತ್ರ ತೆರೆ ಕಾಣಲಿದ್ದು, ಈಗಾಗಲೇ ಶಾರೂಖ್​ ಅಭಿಮಾನಿ ಬಳಗ ಒಂದು ಮುಂಬೈನ ಥಿಯೇಟರ್​ ಒಂದರ ಸಂಪೂರ್ಣ ಟಿಕೆಟ್​ನ್ನು ಖರೀದಿಸಿ ದಾಖಲೆ ಬರೆದಿದ್ದಾರೆ. ಕೇವಲ ಮುಂಗಡ ಬುಕ್ಕಿಂಗ್​ನಲ್ಲಿಯೆ ಸಿನಿಮಾ 3.68 ಕೋಟಿಗಳಿಸಿದ್ದು, ಇಡೀ ಬಾಕ್ಸ್​ ಆಫೀಸ್​ ಧೂಳೆಬ್ಬಿಸುವ ನಿರೀಕ್ಷೆ ಇದೆ. ​

ಇನ್ನು ಸಾರಾ ಅಲಿ ಖಾನ್​ರವರು ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಮುಂದಿನ ಹೆಸರಿಸದ ರೊಮ್ಯಾಂಟಿಕ್ ಡ್ರಾಮಾ ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದೊಂದಲ್ಲದೆ ವಿಕ್ರಾಂತ್ ಮಾಸ್ಸೆ ಮತ್ತು ಚಿತ್ರಾಂಗದಾ ಸಿಂಗ್ ಅವರೊಂದಿಗೆ 'ಗ್ಯಾಸ್ಲೈಟ್' ಮತ್ತು ಕರಣ್ ಜೋಹರ್ ಅವರ ಮುಂದಿನ 'ಏ ವತನ್ ಮೇರೆ ವತನ್' ಅಲ್ಲಿಯು ಕಾಣಿಸಿಕೊಳ್ಳಲಿದ್ದಾರೆ. 'ಏ ವತನ್ ಮೇರೆ ವತನ್' ನೈಜ ಕಥೆಯ ಆಧಾರಿತವಾಗಿದ್ದು, ಇದರಲ್ಲಿ ಸಾರಾ 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಕಥೆಯಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ನಟಿಸಲಿದ್ದಾರೆ.

'ಏ ವತನ್ ಮೇರೆ ವತನ್' ಚಿತ್ರ ಕಥೆಯನ್ನು ದಾರಬ್ ಫಾರೂಕಿ ಮತ್ತು ಕಣ್ಣನ್ ಅಯ್ಯರ್ ಬರೆದಿದ್ದು ಕರಣ್ ಜೋಹರ್ ನಿರ್ಮಾಣದಲ್ಲಿ ಈ ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿಶೇಷವಾಗಿ ಪ್ರೀಮಿಯರ್ನಲ್ಲಿ ಕಾಣಲಿದೆ. ಜೊತೆಗೆ ಅಲಿ ಖಾನ್​ ನಿರ್ದೇಶಕ ಅನುರಾಗ್ ಬಸು ಅವರ ಮುಂದಿನ ಚಿತ್ರ 'ಮೆಟ್ರೋ...ಇನ್ ಡಿನೋ' ನಲ್ಲಿ ನಟಿಸಲಿದ್ದು. ಆದಿತ್ಯ ರಾಯ್ ಕಪೂರ್, ಪಂಕಜ್ ತ್ರಿಪಾಠಿ, ಅನುಪಮ್ ಖೇರ್, ನೀನಾ ಗುಪ್ತಾ, ಕೊಂಕಣ ಸೇನ್ ಶರ್ಮಾ, ಫಾತಿಮಾ ಸನಾ ಶೇಖ್ ಮತ್ತು ಅಲಿ ಫಜಲ್ ರೊಂದಿಗೆ ತೆರೆ ಹಂಚಿಕೋಳ್ಳಲಿದ್ದಾರೆ.

ಇದನ್ನೂ ಓದಿ:ಪಠಾಣ್​ ಬಿಡುಗಡೆಗೆ ದಿನಗಣನೆ: ಥಿಯೇಟರ್​ನ ಸಂಪೂರ್ಣ ಟಿಕೆಟ್ ಖರೀದಿಸಿದ ಶಾರುಖ್​​ ಅಭಿಮಾನಿಗಳ ಸಂಘ

Last Updated : Jan 21, 2023, 8:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.