ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ಭಾರಿ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ಇನ್ನೇನು ಸಂಪೂರ್ಣ ದೂರವಾಗಲಿದ್ದಾರೆ ಎನ್ನುವ ಮಾತು ದಟ್ಟವಾಗುವಷ್ಟರಲ್ಲಿ ಈ ಜೋಡಿಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
- " class="align-text-top noRightClick twitterSection" data="
">
ಈ ದಂಪತಿ ಶೋ ಒಂದನ್ನು ಮಾಡುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. 'ಮಿರ್ಜಾ ಮಲಿಕ್ ಶೋ' ಕಾರ್ಯಕ್ರಮದ ಟೈಟಲ್ ಆಗಿದ್ದು, ಇದರಲ್ಲಿ ದಂಪತಿ ಜೊತೆಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ.
- " class="align-text-top noRightClick twitterSection" data="
">
ಸಾನಿಯಾ ಮತ್ತು ಶೋಯೆಬ್ 2010ರ ಏಪ್ರಿಲ್ನಲ್ಲಿ ಮದುವೆ ಆದರು. ಶೋಯೆಬ್ ಪಾಕಿಸ್ತಾನ ಮೂಲದವರಾಗಿದ್ದರಿಂದ ಆ ಸಮಯದಲ್ಲಿ ಈ ಇಬ್ಬರ ಮದುವೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆ ನಂತರ ಅಂತಹ ದೊಡ್ಡ ಸುದ್ದಿ ಏನೂ ಆಗಲಿಲ್ಲ. ಆದ್ರೆ ಕೆಲ ದಿನಗಳ ಹಿಂದೆ ಸಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ್ದ ಪೋಸ್ಟ್ನಿಂದ ಬೇರ್ಪಡೆ ವದಂತಿ ಶುರುವಾಗಿದೆ. ಆದ್ರೆ ಇದೀಗ 'ಮಿರ್ಜಾ ಮಲಿಕ್ ಶೋ'ನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದು, ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕಳಚಿತೇ ಸಾನಿಯಾ ಶೋಯೆಬ್ರ 12 ವರ್ಷಗಳ ಪ್ರೀತಿಯಬಂಧ..ಭಾರತ ಪಾಕ್ ಆಟಗಾರರ ಮಧ್ಯೆ ಪ್ರೀತಿ ಬೆಳೆದಿದ್ದೇಗೆ?
ಇನ್ನು, ವರದಿಗಳ ಪ್ರಕಾರ ಮುನ್ನೆಲೆಗೆ ಬಂದಿರುವ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ಸಾನಿಯಾ ಇತ್ತೀಚೆಗೆ ದುಬೈನ ಹೊಸ ಮನೆಗೆ ತೆರಳಿದ್ದಾರೆ. ಸಾನಿಯಾ ಈ ಹಿಂದೆ ಶೋಯೆಬ್ ಮಲಿಕ್ ಜೊತೆ ದುಬೈನ ಪಾಮ್ ಜುಮೇರಾದ ವಿಲ್ಲಾದಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಅವರು ದುಬೈನ ಬೇರೆ ಪ್ರದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಾನಿಯಾ-ಶೋಯೆಬ್ ದಾಂಪತ್ಯ ಜೀವನದಲ್ಲಿ ಬಿರುಕು?