2023 ಸ್ಯಾಂಡಲ್ವುಡ್ ಸ್ಟಾರ್ ಕಿಡ್ಸ್ ಹಾಗೂ ಪ್ರತಿಭಾನ್ವಿತ ಯುವ ಕಲಾವಿದರಿಗೆ ಲಕ್ಕಿ ವರ್ಷ ಆಗಿದೆ. ಹೌದು, ಈ ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚಕ್ಕೆ ಹೊಸಬರ ಆಗಮನ ನಿರಂತರವಾಗಿ ಆಗುತ್ತಿರುತ್ತದೆ. ಆ ಪೈಕಿ ಸ್ಟಾರ್ ಮಕ್ಕಳ ಜೊತೆ ಜೊತೆಗೆ ಕೆಲ ಕಂಟೆಂಟ್ ಆಧಾರಿತ ಚಿತ್ರಗಳಿಂದ ಹೊಸ ಪ್ರತಿಭೆಗಳು ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಲವರು ಈಗಾಗಲೇ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಹಾಗಾದ್ರೆ ಚಂದವನವನದ ತೋಟದಲ್ಲಿ ಅರಳಿರುವ ಹೊಸ ಹೂವುಗಳು ಯಾವುವು? ಯಾರೆಲ್ಲಾ ಆಗಮಿಸಿದ್ದಾರೆ? ಎಂಬುದನ್ನು ನೋಡೋಣ.
ಕನ್ನಡ ಚಿತ್ರರಂಗಕ್ಕೆ ಹೊಸ ನಟ ನಟಿಯರ ಆಗಮನವಾಗಿದೆ. ಪ್ರತೀ ವರ್ಷವೂ ನವ ನಟ ನಟಿಯರು ಬಂದು ಹೋಗುತ್ತಾರೆ. ಕೆಲವರು ಇಲ್ಲಿಯೇ ಗಟ್ಟಿಯಾಗಿ ಉಳಿಯುತ್ತಾರೆ. ಹಲವರು ಹಿಂದೆ ಸರಿಯುತ್ತಾರೆ. ತಮ್ಮ ಅಭಿನಯ ಸಾಮರ್ಥ್ಯದಿಂದ ಭವಿಷ್ಯದ ಉತ್ತಮ ನಟ ನಟಿ ಎಂಬ ಭರವಸೆ ಮೂಡಿಸ್ತಾರೆ.
ಅಮೃತಾ ಪ್ರೇಮ್: ಈ ಸಾಲಿನಲ್ಲಿ ಮೊದಲಿಗೆ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಬರುತ್ತಾರೆ. ಪ್ರೇಮ್ ಮುದ್ದಿನ ಮಗಳಾಗಿರೋ ಅಮೃತಾ ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆಂದು ಯಾರೂ ಊಹಿಸಿರಲಿಲ್ಲ. ಚೊಚ್ಚಲ ಚಿತ್ರದಲ್ಲೇ ಹಿಟ್ ಸಿನಿಮಾ ಕೊಡ್ತಾರೆ ಅಂತಾ ಕೂಡ ಅಂದುಕೊಂಡಿರಕ್ಕಿಲ್ಲ. ಡಾಲಿ ಧನಂಜಯ್ ನಿರ್ಮಾಣದ ಹಾಗೂ ಉಮೇಶ್ ಕೆ ಕೃಪ ನಿರ್ದೇಶನದ ಟಗರು ಪಲ್ಯ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಪ್ರೇಮ್ ಮಗಳು ನಟಿಸಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸ್ಯ ನಟ ನಾಗಭೂಷಣ್ ಜೊತೆ ಅಮೃತಾ ತೆರೆ ಹಂಚಿಕೊಂಡಿದ್ದರು. ಟಗರು ಪಲ್ಯ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಅಮೃತಾ ಪ್ರೇಮ್ ಅಭಿನಯಕ್ಕೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಯಿತು. ಪಕ್ಕಾ ಮಂಡ್ಯ ಶೈಲಿಯ ಕಥೆಯಾದ್ದರಿಂದ ಅಮೃತಾ ಪ್ರೇಮ್ ಬೆಳ್ಳಿತೆರೆ ಮೇಲೆ ಬಹಳ ಮುದ್ದಾಗಿ ಕಾಣುವ ಜೊತೆಗೆ ಚಿತ್ರರಂಗದ ಭವಿಷ್ಯದ ನಟಿ ಅನ್ನೋದನ್ನು ಪ್ರೂವ್ ಮಾಡಿದ್ದಾರೆ.
ಆರಾಧನಾ ರಾಮ್: ಪ್ರೇಮ್ ಮಗಳ ಬಳಿಕ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿರೋ ನಟಿ ಅಂದ್ರೆ ದಿ. ನಿರ್ಮಾಪಕ ರಾಮು ಹಾಗೂ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್. ಬಾಲ ನಟಿಯಾಗಿ ಅಮ್ಮನ ರೋಲ್ ಮಾಡಿದ್ದರು. ಆದರೆ ನಾಯಕಿಯಾಗಿ ಬರ್ತಾರೆ ಎನ್ನುವ ಸುಳಿವು ಇರಲೇ ಇಲ್ಲ. ಅದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜೋಡಿಯಾಗಿ ಆರಾಧನಾ ರಾಮ್ ಕಾಣಿಸಿಕೊಳ್ಳುತ್ತಿರೋದು ವಿಶೇಷ. ಬಾಲಿವುಡ್ ಆ್ಯಕ್ಟಿಂಗ್ ಇನ್ಸ್ಟಿಟ್ಯೂಟ್ನಿಂದ ಅಭಿನಯದ ತರಬೇತಿ ಪಡೆದಿರೋ ಆರಾಧನಾ ರಾಮ್ ಕಾಟೇರ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಕಾಟೇರ ಚಿತ್ರದ ಹಾಡುಗಳಲ್ಲಿ ಆರಾಧನಾ ರಾಮ್ ಕಾಣಿಸಿಕೊಂಡಿರುವ ಪರಿ ನೋಡಿದ್ರೆ ಅಮ್ಮನಂತೆ ಆರಾಧನಾ ರಾಮ್ ಕೂಡ ಚಿತ್ರರಂಗದ ಸ್ಟಾರ್ ನಟಿಯಾಗಿ ಬೆಳೆಯುವ ಲಕ್ಷಣಗಳು ಕಾಣಿಸಿವೆ. ಈ ತಿಂಗಳಾಂತ್ಯ ಸಿನಿಮಾ ಬಿಡುಗಡೆ ಆಗಲಿದೆ.
ಸುದೀಪ್ ಕುಟುಂಬಸ್ಥರ ಆಗಮನ: 2023ನೇ ವರ್ಷ ಸುದೀಪ್ ಕುಟುಂಬಕ್ಕೂ ಅದೃಷ್ಟದ ವರ್ಷವೇ. ಏಕೆಂದರೆ ಕಿಚ್ಚನ ಕುಟುಂಬದಿಂದ ಇಬ್ಬರು ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಹಾಗೂ ಸುದೀಪ್ ಮುದ್ದಿನ ಮಗಳು ಸಾನ್ವಿ ಸುದೀಪ್ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಂಜಿತ್ ಸಂಜೀವ್ 'ಜಿಮ್ಮಿ' ಎಂಬ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ಅಭಿನಯಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಇದೇ ಜಿಮ್ಮಿ ಸಿನಿಮಾದಲ್ಲಿ ಸುದೀಪ್ ಮಗಳು ಹಾಡೊಂದನ್ನು ಹಾಡುವ ಮೂಲಕ ಗಾಯಕಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಗಾಯಕಿಯಾಗಿರೋ ಸಾನ್ವಿ ಮುಂದಿನ ದಿನಗಳಲ್ಲಿ ಸಿನಿಮಾ ನಾಯಕಿ ಆಗುವ ಸಾಧ್ಯತೆಗಳೂ ಇವೆ.
ಸಮರ್ಜಿತ್ ಲಂಕೇಶ್: ಈ ಮಧ್ಯೆ ಕನ್ನಡದ ಖ್ಯಾತ ಪತ್ರಕರ್ತ ದಿ. ಪಿ. ಲಂಕೇಶ್ ಅವರ ಮೊಮ್ಮಗ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಕೂಡ ಈ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದ ಮೂಲಕ ಸಮರ್ಜಿತ್ ಲಂಕೇಶ್ ಯಂಗ್ ಹೀರೋ ಆಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಮುಂಬೈ ಆ್ಯಕ್ಟಿಂಗ್ ಇನ್ಸ್ಟಿಟ್ಯೂಟ್ನಲ್ಲಿ ನಟನೆ, ಆ್ಯಕ್ಷನ್, ಡ್ಯಾನ್ಸ್ ಬಗ್ಗೆ ತರಬೇತಿ ಪಡೆದಿರೋ ಸಮರ್ಜಿತ್ ಗೌರಿ ಚಿತ್ರದ ಮೂಲಕ ಮಿಂಚಲು ರೆಡಿಯಾಗಿದ್ದಾರೆ.
ಡೇರ್ ಡೆವಿಲ್ ಮುಸ್ತಫಾ ಕಲಾವಿದರು: ಈ ವರ್ಷ ಸಿನಿ ಪ್ರೇಮಿಗಳನ್ನು ರಂಜಿಸಿದ ಮತ್ತೊಂದು ಹಿಟ್ ಸಿನಿಮಾ ಡೇರ್ ಡೆವಿಲ್ ಮುಸ್ತಫಾ. ಈ ಸಿನಿಮಾ ಸಿಂಗಲ್ ಥಿಯೇಟರ್ ಅಲ್ಲದೇ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲೂ ಓಡಿತ್ತು. ಈ ಚಿತ್ರದಲ್ಲಿ ಹೊಸಬರೇ ಇದ್ದದ್ದು ವಿಶೇಷ. ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ ಕೂಡ ಈ ಚಿತ್ರದಲ್ಲಿ ನಟಿಸಿದ್ದರು. ಇವರ ಜೊತೆಗೆ ಪ್ರೇರಣಾ ಗೌಡ, ರಮಾಮಣಿ ಕೂಡ ಗಮನ ಸೆಳೆದಿದ್ದರು. ಇಡೀ ಚಿತ್ರದಲ್ಲಿ ಪ್ರೇರಣಾ ಪಾತ್ರ ತುಂಬಾನೇ ಗಮನ ಸೆಳೆದಿತ್ತು.
ಇದನ್ನೂ ಓದಿ: 'ಸಲಾರ್'ಗೆ ಸಿನಿಮ್ಯಾಟಿಕ್ ಏರ್ ಸೆಲ್ಯೂಟ್: ಕೆನಡಾ ಅಭಿಮಾನಿಗಳ ಅದ್ಭುತ ವಿಡಿಯೋ ನೋಡಿ
ಈ ಸಿನಿಮಾಗಳ ಮಧ್ಯೆ ಪ್ರೇಕ್ಷಕರ ಮನಗೆದ್ದ ಸಿನಿಮಾ 'ಆಚಾರ್ ಆ್ಯಂಡ್ ಕೋ' ಚಿತ್ರ. ಪುನೀತ್ ರಾಜ್‍ಕುಮಾರ್ ಅವರ ಪಿಆರ್ಕೆ ಬ್ಯಾನರ್ನಡಿ ಸಿನಿಮಾ ನಿರ್ಮಾಣಗೊಂಡಿತ್ತು. ಸಿಂಧು ಶ್ರೀನಿವಾಸಮೂರ್ತಿ ಕಥೆ ಬರೆಯುವದರ ಜೊತೆಗೆ ನಟಿಯಾಗಿ, ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ರೆಟ್ರೋ ಕಾಲದ ಕಥೆಯನ್ನು ಹೇಳುತ್ತಲೇ ಸಿಂಧು ಯಶಸ್ವಿಯಾದರು. ಸಿಂಧು ನಟನೆ ನೋಡಿದ್ಮಲೇ ಚಿತ್ರರಂಗದಲ್ಲಿ ಇವರಿಗೆ ಒಳ್ಳೆ ಭವಿಷ್ಯ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೀರೆಯಲ್ಲಿ ಆಲಿಯಾ ಅಂದ ವರ್ಣನಾತೀತ: ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ