ಟಾಲಿವುಡ್ ನಟಿ ಸಮಂತಾ ಸಿನಿ ಕೆರಿಯರ್ ಮತ್ತಷ್ಟು ವೇಗ ಪಡೆದಿದೆ. ಒಂದೆಡೆ ಅವರನ್ನು ಸಿನಿಮಾಗಳು ಹುಡುಕಿಕೊಂಡು ಬರಲಾಂಭಿಸಿದ್ದರೆ ಇನ್ನೊಂದೆಡೆ ವೆಬ್ ಸಿರೀಸ್ಗಳು ಅವರನ್ನು ಕೈ ಹಿಡಿಯುತ್ತಿದೆ. ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿರುವ ಸಮಂತಾ, ಇದೀಗ ‘ಸಿಟಾಡೆಲ್ ಇಂಡಿಯಾ’ ಎಂಬ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೆಬ್ ಸಿರೀಸ್ ಶೀಘ್ರದಲ್ಲೇ ತೆರೆಗೆ ಬರಲಿದೆ.
![Samantha is undergoing special training for a new web series](https://etvbharatimages.akamaized.net/etvbharat/prod-images/15493253_1_0810newsroom_1665205865_441.jpg)
ಪಾತ್ರಕ್ಕಾಗಿ ಹೆಚ್ಚು ಮುತುವರ್ಜಿ ವಹಿಸುವ ಸಮಂತಾ ಸದ್ಯ ತಮ್ಮ ಪಾತ್ರಕ್ಕಾಗಿ ವಿಶೇಷವಾಗಿ ತಯಾರಿ ಕೂಡ ನಡೆಸುತ್ತಿದ್ದಾರೆ. ಹಿಂದಿ ಭಾಷೆಯನ್ನು ಮತ್ತಷ್ಟು ಅರಿತುಕೊಳ್ಳುವ ಮತ್ತು ಸುಲಲಿತವಾಗಿ ಉಚ್ಛಾರಣೆ ಮಾಡುವ ವಿಶೇಷ ತರಬೇತಿಯನ್ನು ಅವರು ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
1990ರ ದಶಕದ ಹಿನ್ನೆಲೆಯುಳ್ಳ ಕಥೆಯನ್ನು ಈ ವೆಬ್ ಸಿರೀಸ್ ಹೊಂದಿದೆ. ಚಿತ್ರೀಕರಣಕ್ಕಾಗಿ ನವೆಂಬರ್ ಮೊದಲ ವಾರದಲ್ಲಿ ವರ್ಕ್ ಶಾಪ್ ನಡೆಸಲು ಚಿತ್ರತಂಡ ವಿಶೇಷ ವ್ಯವಸ್ಥೆ ಮಾಡಿಕೊಂಡಿದೆಯಂತೆ. ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆಯಂತೆ.
![Samantha is undergoing special training for a new web series](https://etvbharatimages.akamaized.net/etvbharat/prod-images/15493253_6_0810newsroom_1665205865_1048.jpg)
ರುಸ್ಸೋ ಬ್ರದರ್ಸ್ ನಿರ್ಮಿಸುತ್ತಿರುವ ಈ ಸರಣಿಯು ವಿವಿಧ ದೇಶಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ತಯಾರಾಗಲಿದೆ. ‘ಸಿಟಾಡೆಲ್ ಇಂಡಿಯಾ’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಕೂಡ ನಟಿಸಲಿದ್ದಾರೆ. ವರುಣ್ ಧವನ್ ಮುಖ್ಯ ಭೂಮಿಕೆಯಲ್ಲಿರುವ 'ಸಿಟಾಡೆಲ್ ಇಂಡಿಯಾ' ಚಿತ್ರವನ್ನು ರಾಜ್ ಮತ್ತು ಡಿಕೆ ನಿರ್ದೇಶಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಬರುತ್ತಿದೆ.
ಇದನ್ನೂ ಓದಿ: ನಿರ್ಮಾಪಕಿಯಾಗಿ ಮಿಂಚಲು ರೆಡಿಯಾದ ಬಾಲಿವುಡ್ ಬೇಬೋ ಕರೀನಾ ಕಪೂರ್