ETV Bharat / entertainment

ಕಹಿ ಘಟನೆಗಳಿಂದ ಕಲಿತ ಪಾಠ ಮರೆಯುವುದಿಲ್ಲ: ನಟಿ ಸಮಂತಾ - ಸಮಂತಾ ಡಿವೋರ್ಸ್

ನಟಿ ಸಮಂತಾ ರುತ್ ಪ್ರಭು ಸಂದರ್ಶನವೊಂದರಲ್ಲಿ ಯಾವುದೇ ನೆನಪುಗಳನ್ನು ಮರೆಯಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

Samantha Ruth Prabhu
ನಟಿ ಸಮಂತಾ ರುತ್ ಪ್ರಭು
author img

By

Published : Apr 11, 2023, 1:24 PM IST

ನಟಿ ಸಮಂತಾ ರುತ್ ಪ್ರಭು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಶಾಕುಂತಲಂ ಇದೇ ಶುಕ್ರವಾರದಂದು ತೆರೆಕಾಣಲಿದೆ. ಈ ಹಿನ್ನೆಲೆ ಕಳೆದ ಕೆಲ ದಿನಗಳಿಂದ ನಟಿ ಸಿನಿಮಾದ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಬ್ಯಾಕು ಟು ಬ್ಯಾಕ್​​ ಸಂದರ್ಶನಗಳನ್ನು ಕೊಡುವುದರ ಮೂಲಕ ಸಖತ್​ ಬ್ಯುಸಿಯಾಗಿದ್ದಾರೆ ಟಾಲಿವುಡ್ ಟಾಪ್​​ ನಟಿ.

ನಟಿ ಸಮಂತಾ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಹಿ ಕ್ಷಣಗಳನ್ನು ಅನುಭವಿಸಿದ್ದಾರೆ. ಅದರಿಂದ ಹೊರಬಂದು ವೃತ್ತಿಜೀವನದಲ್ಲಿ ಏಳಿಗೆ ಕಾಣಲು ಇಚ್ಛಿಸಿದ್ದಾರೆ. ಆದರೆ ನಟಿ ಯಾವುದೇ ನೆನಪುಗಳನ್ನು ಮರೆಯಲು ಬಯಸುವುದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ಮಾತನಾಡುವ ಮನಸ್ಥಿತಿಯಲ್ಲೂ ಇಲ್ಲ ಅವರು. ಶಾಕುಂತಲಂ ಪ್ರಚಾರದ ವೇಳೆ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಶೇರ್​ ಮಾಡಿಕೊಂಡಿರುವ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ತಾವು ಜೀವನದಲ್ಲಿ ಕಲಿತ ಪ್ರತೀ ಪಾಠವನ್ನು ಹಿಡಿದಿಟ್ಟುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ಸಮಂತಾ ರುತ್ ಪ್ರಭು, ಕಳೆದ ಎರಡು ವರ್ಷಗಳಲ್ಲಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಹಲವು ಏರಿಳಿತಗಳನ್ನು ಕಂಡಿದ್ದಾರೆ. 2017ರಲ್ಲಿ ದಾಂಪತ್ಯ ಜೀವನ ಆರಂಭಿಸಿ, 2021ರ ಕೊನೆಯಲ್ಲಿ ನಾಗ ಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದರು. ನಂತರ, ಅಪರೂಪದ ಕಾಯಿಲೆ ಮಯೋಸಿಟಿಸ್​ನಿಂದ ಬಳಲುತ್ತಿರುವುದಾಗಿ ಘೋಟಿಸಿದರು. ಕೆಲ ದಿನಗಳ ಕಾಲ ಸಿನಿಮಾದಿಂದ ಬ್ರೇಕ್​ ತೆಗೆದುಕೊಂಡು, ಸೂಕ್ತ ಚಿಕಿತ್ಸೆ ಪಡೆದಿರುವ ಅವರು ಸದ್ಯ ತಮ್ಮ ಚಿತ್ರಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಡಿವೋರ್ಸ್​ ಆಗಿ ಕೆಲ ದಿನಗಳ ನಂತರ ಬಿಡುಗಡೆ ಆದ, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರದ ಊ ಅಂಟಾವಾ ಹಾಡಿನ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು. ಹಾಡು ಸೂಪರ್​ ಹಿಟ್ ಆಗುವ ಮುಖೇನ ಪ್ಯಾನ್ ಇಂಡಿಯನ್ ಖ್ಯಾತಿ ಗಳಿಸಿದರು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮರೆಯಲು ಬಯಸುವ ನೆನಪು ಇದೆಯೇ? ಎಂಬ ಪ್ರಶ್ನೆ ನಟಿಗೆ ಎದುರಾಯಿತು. "ನೀವು ಸಂಬಂಧದ ಬಗ್ಗೆ ಕೇಳುತ್ತಿದ್ದೀರಾ?" ಎಂದು ಸಮಂತಾ ಗೊಂದಲ ನಿವಾರಿಸಿಕೊಳ್ಳಲು ಯತ್ನಿಸಿದರು. ಅದಕ್ಕೆ ಸಂದರ್ಶಕರು "ಯಾವುದಾದರೂ" ಆಯ್ಕೆ ನಿಮ್ಮದು ಎಂದು ತಿಳಿಸಿದರು. "ನೀವು ನನ್ನನ್ನು ತೊಂದರೆಗೆ ಸಿಲುಕಿಸುತ್ತಿದ್ದೀರಿ" ಎಂದು ನಟಿ ತಮಾಷೆ ಮಾಡಿದರು.

ಇದನ್ನೂ ಓದಿ: 'ವಿಚ್ಛೇದನ'ವೆಂಬ ಕರಾಳ ಕ್ಷಣ-ನೋವಿನಿಂದ ಚೇತರಿಸಿಕೊಂಡಿಲ್ಲವೆಂದ ನಟಿ ಸಮಂತಾ

ಬಳಿಕ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಂತಾ, "ನಾನು ಏನನ್ನೂ ಮರೆಯಲು ಬಯಸುವುದಿಲ್ಲ, ಏಕೆಂದರೆ ಜೀವನದಲ್ಲಿ ಎಲ್ಲವೂ ನನಗೆ ಯಾವುದಾದರೊಂದು ಪಾಠ ಕಲಿಸಿದೆ. ಹಾಗಾಗಿ, ನಾನು ಯಾವುದನ್ನೂ ಮರೆಯಲು ಬಯಸುವುದಿಲ್ಲ. ನಾನು ಆ ಬಗ್ಗೆ ಜೋರಾಗಿ ಮಾತನಾಡಬೇಕೇ?. ಇಲ್ಲ, ನಾನು ತೊಂದರೆಗೆ ಸಿಲುಕುವುದಿಲ್ಲ. ಈ ಪ್ರಶ್ನೆಗೆ ನಾನು ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ನಾನು ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಬಯಸುತ್ತೇನೆ ಏಕೆಂದರೆ ಎಲ್ಲವೂ ನನಗೆ ಪಾಠ ಕಲಿಸಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಮಾಡದ ಅಪರಾಧಕ್ಕೆ ನಾನೇಕೆ ನರಳಬೇಕು?: ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ

ಶಾಕುಂತಲಂ ಸಿನಿಮಾ ಕಥೆ ಮಹಾಭಾರತದ ರಾಜ ದುಷ್ಯಂತ್ ಮತ್ತು ಶಕುಂತಲಾ ನಡುವಿನ ಪ್ರಣಯದ ಮೇಲೆ ಕೇಂದ್ರೀಕೃತವಾಗಿದೆ. ದೇವ್ ಮೋಹನ್ ಮತ್ತು ಸಮಂತಾ ಈ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗುಣಶೇಖರ್ ನಿರ್ದೇಶನದ ಚಲನಚಿತ್ರವು ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ಸಮಂತಾ ಅವರು ರಾಜ್ ಮತ್ತು ಡಿಕೆ ನಿರ್ದೇಶನದ ಸಿಟಾಡೆಲ್‌ ಹಿಂದಿ ಆವೃತ್ತಿಯಲ್ಲಿ ನಿರತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.