ETV Bharat / entertainment

ಅನುಷ್ಕಾ ಶರ್ಮಾ ಜೊತೆ ತೆರೆ ಹಂಚಿಕೊಳ್ಳಲಿರುವ ಸಮಂತಾ ರುತ್​ ಪ್ರಭು - Anushka Sharma upcoming movies

ಸಮಂತಾ ರುತ್​ ಪ್ರಭು ಮತ್ತು ಅನುಷ್ಕಾ ಶರ್ಮಾ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

Samantha and Anushka Sharma
ಸಮಂತಾ ರುತ್​ ಪ್ರಭು ಅನುಷ್ಕಾ ಶರ್ಮಾ ಸಿನಿಮಾ
author img

By

Published : May 4, 2023, 8:00 PM IST

ಇತ್ತೀಚೆಗಷ್ಟೇ ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡ 'ಶಾಕುಂತಲಂ' ಸಿನಿಮಾ ಸೋಲನ್ನನುಭವಿಸಿದೆ. ಬಾಕ್ಸ್​ ಆಫೀಸ್​ ಸಂಖ್ಯೆ ನಿರೀಕ್ಷೆ ತಲುಪಿಲ್ಲ. ಸೋಲಿನ ರುಚಿ ಕಂಡ ನಾಯಕ ನಟಿ ಸಮಂತಾ ರುತ್​ ಪ್ರಭು ಆ ಸಿನಿಮಾದ ಫಲಿತಾಂಶವನ್ನು ಬದಿಗೊತ್ತಿ ತಮ್ಮ ಮುಂದಿನ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಭಾರತೀಯ ಆವೃತ್ತಿಯ (ಹಾಲಿವುಡ್​ ಸೀರಿಸ್​ನ ರೂಪಾಂತರ) 'ಸಿಟಾಡೆಲ್' ವೆಬ್ ಸೀರಿಸ್​ನಲ್ಲಿ ನಿರತರಾಗಿದ್ದಾರೆ. ಗೆಲುವಿನ ಉದ್ದೇಶದೊಂದಿಗೆ ಸಂಪೂರ್ಣವಾಗಿ ಗಮನ ಹರಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿದ್ದಾರೆ. ಈ ಕ್ರಮದಲ್ಲಿ ಇತ್ತೀಚೆಗಷ್ಟೇ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಸ್ಯಾಮ್ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್​​ ಕೊಹ್ಲಿ ಪತ್ನಿ, ಬಾಲಿವುಡ್​ ಬಹುಬೇಡಿಕೆ ನಟಿ ಅನುಷ್ಕಾ ಶರ್ಮಾ ಜೊತೆ ಕೆಲಸ ಮಾಡಲಿದ್ದಾರೆ.

ಕಳೆದ ಕೆಲ ದಿನಗಳಿಂದ ಇಬ್ಬರೂ ಜೊತೆಯಾಗಿ ಪ್ರಾಜೆಕ್ಟ್ ಒಂದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದರೆ ಇದು ವೆಬ್ ಸೀರಿಸ್ ಅಥವಾ ಸಿನಿಮಾಗಾಗಿಯೇ? ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಪ್ರಾಜೆಕ್ಟ್​​ಗೆ ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ನಿರ್ಮಾಪಕರಾಗಲಿದ್ದಾರೆ ಎನ್ನಲಾಗುತ್ತಿದೆ.

ಇದರ ನಡುವೆ ಸಮಂತಾ ಮುಖ್ಯ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಮಾತುಕತೆ ಮುಕ್ತಾಯವಾದ ನಂತರ ಪೂರ್ಣ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಯೋಜನೆಯಲ್ಲಿ ಸಮಂತಾ ಜೊತೆಗೆ ಅನುಷ್ಕಾ ಶರ್ಮಾ ಕೂಡ ನಟಿಸುತ್ತಾರಾ? ಅಥವಾ ಅವರು ತಮ್ಮ ಸಹೋದರನಿಗೆ ಕೈ ಜೋಡಿಸಿ ಸಿನಿಮಾ ನಿರ್ಮಾಪಕಿ ಆಗಲಿದ್ದಾರೋ? ಅಥವಾ ನಟಿ ಸಮಂತಾ ರುತ್​ ಪ್ರಭು ಅವರೇ ನಿರ್ಮಾಪಕಿಯಾಗಲಿದ್ದಾರಾ, ನಟಿಸಲಿದ್ದಾರಾ? ಇಬ್ಬರೂ ಪ್ರಮುಖ ಪಾತ್ರ ವಹಿಸಲಿದ್ದಾರೋ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ.

ನಟಿ ಸಮಂತಾ ರುತ್​ ಪ್ರಭು ಅವರ ಸಿನಿಮಾ ವಿಚಾರಕ್ಕೆ ಬಂದರೆ, ಶಾಕುಂತಲಂ ಏಪ್ರಿಲ್​ 14ರಂದು ತೆರೆಕಂಡು ಸೋತಿದೆ. ಸದ್ಯ ಸಿಟಾಡೆಲ್ ಹಿಂದಿ ಆವೃತ್ತಿಯ ವೆಬ್ ಸೀರಿಸ್​ನಲ್ಲಿ ಬ್ಯುಸಿಯಾಗಿದ್ದಾರೆ. ಆ್ಯಕ್ಷನ್​ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲಿವುಡ್​ ನಟ ವರುಣ್​ ಧವನ್​ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಾಲಿವುಡ್​ ಸೀರಿಸ್​ನ ರೀಮೇಕ್​ ಆಗಿದ್ದು, ಅದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಇದರ ಜೊತೆಗೆ ಹಾರರ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಆದರೆ ಈ ಹಾರರ್ ಚಿತ್ರದ ಬಗ್ಗೆ ಚಿತ್ರತಂಡ ಇದುವರೆಗೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ತೆಲುಗಿನ ಸೆನ್ಸೇಷನ್ ಹೀರೋ ಅರ್ಜುನ್​ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಲವ್ ಸ್ಟೋರಿ ಸಿನಿಮಾ ಕೂಡ ಮಾಡುತ್ತಿದ್ದಾರೆ. ಖುಷಿ ಈ ಫ್ಯಾಮಿಲಿ ಲವ್​ ಸ್ಟೋರಿ ಚಿತ್ರದ ಟೈಟಲ್​​​. ಸದ್ಯ ಈ ಚಿತ್ರದ ಚಿತ್ರೀಕರಣ ಜೋರಾಗೇ ನಡೆಯುತ್ತಿದೆ. ಶಾಕುಂತಲಂ ವಿಫಲವಾಗಿದ್ದು, ಸ್ಯಾಮ್ ಮುಂದಿನ ಸಿಟಾಡೆಲ್ ಮತ್ತು ಖುಷಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.

ಇದನ್ನೂ ಓದಿ: ಪವಿತ್ರಾ ಲೋಕೇಶ್ - ನರೇಶ್ 'ಮತ್ತೆ ಮದುವೆ'ಗೆ ಡೇಟ್​ ಫಿಕ್ಸ್​​

ನಟಿ ಅನುಷ್ಕಾ ಶರ್ಮಾ ಸಿನಿಮಾ ಬಗ್ಗೆ ಹೇಳುವುದಾದರೆ, ಅವರು ಕೊನೆಯದಾಗಿ 2018ರಲ್ಲಿ ಶಾರುಖ್ ಖಾನ್ ಅವರ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ನಿರೀಕ್ಷೆ ತಲುಪಲಿಲ್ಲ. ಬಳಿಕ ನಿರ್ಮಾಪಕಿಯಾಗಿ ಸಹೋದರನೊಂದಿಗೆ ಚಲನಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ನಿರತರಾದರು. ಕಾಲಾ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ತಾಯಿಯಾಗಿ ಕೆಲ ಕಾಲ ಮಗುವಿನ ಪೋಷಣೆಯಲ್ಲಿ ತೊಡಗಿದ ಅನುಷ್ಕಾ 'ಚಕ್ಡಾ ಎಕ್ಸ್‌ಪ್ರೆಸ್' ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಮಹಿಳಾ ಕ್ರಿಕೆಟರ್​ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಇದು. ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಈ ಹೊತ್ತಲ್ಲಿ ಮತ್ತೊಂದು ಹೊಸ ಚಿತ್ರದ ಕಡೆ ಗಮನ ಹರಿಸಿದ್ದಾರೆ. ಇದರ ಭಾಗವಾಗಿ ಸಮಂತಾ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಅಪರ್ಣಾ ಸಮಂತಾ ಪ್ರೀತಿಯಲ್ಲಿ ಜೆಕೆ.. ನಿಶ್ಚಿತಾರ್ಥ ಮಾಡಿಕೊಂಡ್ರಾ ಅಶ್ವಿನಿ ನಕ್ಷತ್ರ ಹೀರೋ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.