ETV Bharat / entertainment

ಕನ್ನಡ ಗೊತ್ತಿಲ್ಲವೆಂದು ಅವಮಾನ: ಸಲ್ಮಾನ್ ಯೂಸುಫ್ ಖಾನ್ ಆರೋಪ

ಕನ್ನಡ ಭಾಷೆ ತಿಳಿಯದಿದ್ದಕ್ಕೆ ಬೆಂಗಳೂರಿನ ಅಧಿಕಾರಿ ಓರ್ವರು ಅವಮಾನ ಮಾಡಿದ್ದಾರೆಂದು ನೃತ್ಯ ನಿರ್ದೇಶಕ ಸಲ್ಮಾನ್ ಯೂಸುಫ್ ಖಾನ್ ಆರೋಪಿಸಿದ್ದಾರೆ.

Salman Yusuff Khan
ಸಲ್ಮಾನ್ ಯೂಸುಫ್ ಖಾನ್
author img

By

Published : Mar 15, 2023, 5:27 PM IST

Updated : Mar 15, 2023, 5:33 PM IST

ಕನ್ನಡ ಭಾಷೆ ಗೊತ್ತಿಲ್ಲದ ಕಾರಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಪರಿಶೀಲನಾ ಅಧಿಕಾರಿಯೊಬ್ಬರು (immigration officer) ತನಗೆ ಅವಮಾನ ಮಾಡಿದ್ದಾರೆ ಎಂದು ನೃತ್ಯಗಾರ, ನೃತ್ಯ ನಿರ್ದೇಶಕ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಇಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿದ್ದರೂ ಕನ್ನಡ ಭಾಷೆ ತಿಳಿಯದಿದ್ದಕ್ಕೆ ಅಧಿಕಾರಿ ತನ್ನನ್ನು ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ಸಲ್ಮಾನ್ ಯೂಸುಫ್ ಖಾನ್ ದೂರಿದ್ದಾರೆ.

'ಸ್ಥಳೀಯ ಭಾಷೆಯನ್ನು ಕಲಿಸಿಕೊಡಿ': "ನಾನು ಹೆಮ್ಮೆಯ ಬೆಂಗಳೂರಿಗ. ಆದರೆ, ಇಂದು ನಾನು ಎದುರಿಸುತ್ತಿರುವ ಸಮಸ್ಯೆ ಸ್ವೀಕಾರ್ಹವಲ್ಲ. ನೀವು ಯಾವಾಗಲೂ ಯಾವುದೇ ಸ್ಥಳೀಯ ಭಾಷೆಯನ್ನು ಕಲಿಯಲು ಜನರನ್ನು ಪ್ರೋತ್ಸಾಹಿಸಬೇಕು. ಆದರೆ ಯಾರನ್ನೂ ಕೂಡ ಭಾಷೆ ಗೊತ್ತಿಲ್ಲವೆಂದು ಕೀಳಾಗಿ ಕಾಣಬೇಡಿ. ಮತ್ತು ಪೋಷಕರ ಹೆಸರನ್ನು ಎಳೆದು ತರಬೇಡಿ" ಎಂದು ಸಲ್ಮಾನ್ ಯೂಸುಫ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

ಕನ್ನಡ ಅರ್ಥಮಾಡಿಕೊಳ್ಳಬಲ್ಲರು.. ಸಲ್ಮಾನ್ ಯೂಸುಫ್ ಖಾನ್ ದುಬೈನಿಂದ ಹಿಂದಿರುಗಿದ ವೇಳೆ ಘಟನೆ ನಡೆದಿದೆ. ಅಧಿಕಾರಿಯೊಬ್ಬರು ನೃತ್ಯ ಸಂಯೋಜಕರೊಂದಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ. ಸಲ್ಮಾನ್ ಕನ್ನಡ ಅರ್ಥಮಾಡಿಕೊಳ್ಳಬಲ್ಲರು ಆದರೆ ನಿರರ್ಗಳವಾಗಿ ಮಾತನಾಡಲು ಕಷ್ಟಸಾಧ್ಯ ಎಂದು ತಿಳಿಸಲು ಪ್ರಯತ್ನಿಸಿದರು.

ಬೆಂಗಳೂರಿನಲ್ಲಿ ಜನನ, ವಿದೇಶದಲ್ಲಿ ಬೆಳವಣಿಗೆ: ತನ್ನ ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳ ಬೆಂಗಳೂರು ಎಂದಿತ್ತು. ಅದನ್ನು ಗುರಿಯಾಗಿಸಿ ಆ ಅಧಿಕಾರಿ ಮಾತನಾಡಿದ್ದಾರೆ. "ನೀವು ಮತ್ತು ನಿಮ್ಮ ತಂದೆ ಬೆಂಗಳೂರಿನಲ್ಲಿ ಹುಟ್ಟಿದ್ದೀರಿ ಮತ್ತು ನಿಮಗೆ ಕನ್ನಡ ಮಾತನಾಡಲು ಬರುವುದಿಲ್ಲ'' ಎಂದು ಹೇಳಿದರು. ಅದಕ್ಕೆ ನಾನು ''ಬೆಂಗಳೂರಿನಲ್ಲಿ ಹುಟ್ಟಿದ್ದೇನೆ ಎಂದರೆ ನಾನು ಭಾಷೆಯೊಂದಿಗೆ ಹುಟ್ಟಿದ್ದೇನೆ ಎಂದು ಅರ್ಥವಲ್ಲ ಎಂದು ಉತ್ತರಿಸಿದೆ'' ಎಂದು ಸಲ್ಮಾನ್​ ತಿಳಿಸಿದ್ದಾರೆ.

ಇದನ್ನೂ ಓದಿ: 'ಭಾರತ ಅಂದ್ರೆ ಕೇವಲ ಹಿಂದಿ, ಬಾಲಿವುಡ್ ಮಾತ್ರವಲ್ಲ': ಆಸ್ಕರ್‌ ಸಾಧನೆ ಮೆಚ್ಚಿ ನಟಿ ರಮ್ಯಾ ಟ್ವೀಟ್‌

ನನಗೆ ಹಿಂದಿ ತಿಳಿದಿದೆ ಮತ್ತು ನಾನು ಕನ್ನಡವನ್ನು ಏಕೆ ತಿಳಿದಿರಬೇಕು ಎಂದು ನಾನು ಅವರಲ್ಲಿ ಪ್ರಶ್ನಿಸಿದೆ. ಅಲ್ಲದೇ ನನ್ನ ಬಗ್ಗೆ ಯಾವ ವಿಚಾರವಾಗಿ ಅನುಮಾನಿಸುತ್ತೀರಿ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ನಾನು ನಿಮ್ಮನ್ನು ಯಾವ ವಿಚಾರವಾಗಿಯಾದರೂ ಅನುಮಾನಿಸಬಹುದು ಎಂದು ಹೇಳಿದರು. ಅದಕ್ಕೆ ಪ್ರಯತ್ನಿಸಿ ಎಂದು ಜೋರಾಗಿ ಹೇಳಿದೆ. ಬಳಿಕ ಅವರು ಸುಮ್ಮನಾದರು.

ಇದನ್ನೂ ಓದಿ: ಭಾತರದ ಲೋಕಲ್​ ರೈಲಿನಲ್ಲಿ "ದಿ ಕ್ವಿಕ್ ಸ್ಟೈಲ್" ಡ್ಯಾನ್ಸ್​: ಫಿದಾ ಆದ ಅಭಿಮಾನಿಗಳು..

ನಿಮ್ಮಂತಹ ಅವಿದ್ಯಾವಂತರು ಈ ದೇಶದಲ್ಲಿದ್ದರೆ ಈ ದೇಶ ಎಂದಿಗೂ ಬೆಳೆಯುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅದಕ್ಕೆ ಅವರು ತಲೆ ತಗ್ಗಿಸಿ ಗೊಣಗಿದರು. ಈ ಘಟನೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಲು ಪ್ರಯತ್ನಿಸಿದೆ. ಆದರೆ ಯಾರೂ ನನಗೆ ಮಾರ್ಗದರ್ಶನ ನೀಡುವಂತೆ ತೋರಲಿಲ್ಲ ಎಂದು ಖಾನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಗುಳಿಕೆನ್ನೆ ಚೆಲುವೆಗೆ ಜನ್ಮದಿನದ ಸಂಭ್ರಮ: ಅಭಿನಯದಿಂದ ಆಕರ್ಷಿಸುವ ಆಲಿಯಾ ಭಟ್ ಫೋಟೋಗಳನ್ನು ನೋಡಿ

Last Updated : Mar 15, 2023, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.