ETV Bharat / entertainment

ಕೊಲೆ ಬೆದರಿಕೆ ಬೆನ್ನಲ್ಲೇ ಮತ್ತೊಂದು ಬುಲೆಟ್​ ಪ್ರೂಫ್​​ SUV ಕಾರು ಖರೀದಿಸಿದ ಸಲ್ಮಾನ್​ ಖಾನ್​! - ಸಲ್ಮಾನ್​ ಖಾನ್ ಲೇಟೆಸ್ಟ್ ನ್ಯೂಸ್

ನಟ ಸಲ್ಮಾನ್​ ಖಾನ್​​​ ಹೊಸ ಬುಲೆಟ್​ ಪ್ರೂಫ್​​ ವಾಹನ ಖರೀದಿಸಿದ್ದಾರೆ.

Salman Khan bulletproof car
ಸಲ್ಮಾನ್​ ಖಾನ್​ ಬುಲೆಟ್​ ಪ್ರೂಫ್​​ ಎಸ್​ಯುವಿ
author img

By

Published : Apr 7, 2023, 5:55 PM IST

ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​​​ ಬುಲೆಟ್​ ಪ್ರೂಫ್​​ ಕಾರು ಖರೀದಿಸಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ನಟ, ತಮ್ಮ ಪಾರ್ಕಿಂಗ್​ ಏರಿಯಾಗೆ ಮತ್ತೊಂದು ಹೊಸ, ಲಕ್ಷುರಿ ಕಾರನ್ನು ತಂದು ನಿಲ್ಲಿಸಿದ್ದಾರೆ. ಕಳೆದ ವಾರಾಂತ್ಯ ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭಕ್ಕೆ ನಟ ಹೊಸ ಕಾರಿನಲ್ಲೇ ಆಗಮಿಸಿದ್ದರು.

ಕಳೆದ ವರ್ಷ ಕೊಲೆ ಬೆದರಿಕೆಗಳನ್ನು ಸ್ವೀಕರಿಸಿದ ನಂತರ, ಸಲ್ಮಾನ್​ ಖಾನ್ ಅವರು ಬುಲೆಟ್ ಪ್ರೂಫ್ ಕಾರುಗಳನ್ನು ಬಳಸುತ್ತಿದ್ದಾರೆ. ಮೊದಲು ಅವರು ಟೊಯೋಟಾ ಲ್ಯಾಂಡ್ ಕ್ರೂಸರ್ LC200 ಬಳಸುತ್ತಿದ್ದರು. ಇದೀಗ ನಿಸ್ಸಾನ್ ಪ್ಯಾಟ್ರೋಲ್ ಎಸ್​ಯುವಿ (Nissan Patrol luxury SUV) ಖರೀದಿಸಿದ್ದಾರೆ. ಈ ಮಾದರಿಯು ಭಾರತದಲ್ಲಿ ಮಾರಾಟವಾಗದ ಕಾರಣ ಸಲ್ಮಾನ್ ಈ ಕಾರನ್ನು ಹೊರದೇಶದಿಂದ ಆಮದು ಮಾಡಿಕೊಂಡಿದ್ದಾರೆ. ಸಲ್ಮಾನ್ ಹೊಸದಾಗಿ ಖರೀದಿಸಿದ ಕಾರು ಬುಲೆಟ್ ಪ್ರೂಫಿಂಗ್ ವಿಷಯದಲ್ಲಿ ಅತ್ಯುತ್ತಮವಾಗಿದೆ ಎಂದು ವರದಿಯಾಗಿದೆ. ಈ ನಿಸ್ಸಾನ್ ಕಂಪನಿಯ ಎಸ್​ಯುವಿಗಾಗಿ ನಟ ಕೋಟಿ ಕೋಟಿ ಹಣ ಸುರಿದಂತಿದೆ. ಏಕೆಂದರೆ ಖಾಸಗಿಯಾಗಿ ಆಮದು ಮಾಡಿಕೊಂಡರೆ ಬುಲೆಟ್ ಪ್ರೂಫ್ ಇಲ್ಲದೇ ಸುಮಾರು 2 ಕೋಟಿ ರೂ. ಆಗಲಿದೆ. ಇದು ಬುಲೆಟ್ ಪ್ರೂಫ್ ಆಗಿದ್ದು, ಕಾರಿನ ಸಂಪೂರ್ಣ ಮೌಲ್ಯ ತಿಳಿದುಕೊಳ್ಳುವ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್‌ನಿಂದ ಸಲ್ಮಾನ್​​ ಖಾನ್‌ ಅವರಿಗೆ ಇತ್ತೀಚೆಗೆ ಕೊಲೆ ಬೆದರಿಕೆಗಳು ಬಂದಿವೆ. ಕಳೆದ ತಿಂಗಳು, ನಟ ಇ-ಮೇಲ್‌ನಲ್ಲಿ ಹೊಸ ಕೊಲೆ ಬೆದರಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬುಲೆಟ್​ ಪ್ರೂಫ್​​ ಕಾರು ಬಳಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಶುಕ್ರವಾರ 'ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್​' ಉದ್ಘಾಟನೆ ಆಗಿದೆ. ಮುಂಬೈನ ಬಾಂದ್ರಾ - ಕುರ್ಲಾ ಕಾಂಪ್ಲೆಕ್ಸ್​ನ ಜಿಯೋ ವರ್ಲ್ಡ್​ ಗಾರ್ಡನ್ಸ್​ನಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದೆ. ಈ ಮೂರು ದಿನಗಳ ಸಮಾರಂಭಕ್ಕೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ತಾರೆಯರು ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಸಮಾರಂಭದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟ ಸಲ್ಮಾನ್​ ಖಾನ್​​ ಕೂಡ ಉಪಸ್ಥಿತರಿದ್ದರು. ಅವರು ಈ ಕಾರ್ಯಕ್ರಮಕ್ಕೆ ಎಸ್​ಯುವಿ (Sports Utility Vehicle) ಕಾರಿನಲ್ಲೇ ಆಗಮಿಸಿದ್ದರು ಎನ್ನಲಾದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: 'ಬಾಲಿವುಡ್​ ಬ್ಯಾಡ್​ ಬಾಯ್'​​ ಬಳಿ ಇವೆ ಕೋಟ್ಯಂತರ ಮೌಲ್ಯದ ಕಾರುಗಳು!: ಬೆಂಜ್​ನಿಂದ ಔಡಿವರೆಗೆ ಸಲ್ಲು ಕಲೆಕ್ಷನ್ ನೋಡಿ

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌' ಸಲ್ಮಾನ್​ ಖಾನ್​ ಅವರ ಮುಂಬರುವ ಚಿತ್ರ. ಪೂಜಾ ಹೆಗ್ಡೆ ಜೊತೆ ತೆರೆ ಹಂಚಿಕೊಂಡಿದ್ದು, ರಾಘವ್ ಜುಯಲ್, ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ಶೆಹನಾಜ್ ಗಿಲ್, ಪಲಕ್ ತಿವಾರಿ, ವಿನಾಲಿ ಭಟ್ನಾಗರ್ ಸೇರಿದಂತೆ ದೊಡ್ಡ ತಾರಾಗಣವಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಹಾಡುಗಳು ಅಭಿಮಾನಿಗಳ ಮೆಚ್ಚುಗೆ ಸಂಪಾದಿಸಿದೆ. ಫರ್ಹಾದ್ ಸಾಮ್ಜಿ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಇದೇ 21 (ಈದ್​ ಸಂದರ್ಭ) ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: 'ಪುಷ್ಪ - ದಿ ರೂಲ್'​ ಟೀಸರ್​ ರಿಲೀಸ್​: ಭಾರಿ ಕುತೂಹಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.