ETV Bharat / entertainment

ಅರ್ಬಾಜ್​ ಖಾನ್​ ಬರ್ತ್​ಡೇ ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಹೊಸ ಲುಕ್: 'ಬಾರ್ಬಿ'ಗೆ ಹೋಲಿಸಿದ ನೆಟ್ಟಿಗರು​ - ಈಟಿವಿ ಭಾರತ ಕನ್ನಡ

ನಟ ಹಾಗೂ ನಿರ್ಮಾಪಕ ಅರ್ಬಾಜ್​ ಖಾನ್​ ಬರ್ತ್​ಡೇ ಪಾರ್ಟಿಯಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಭಾಗವಹಿಸಿ ಗಮನ ಸೆಳೆದರು.

Salman Khan
ಸಲ್ಮಾನ್​ ಖಾನ್​
author img

By

Published : Aug 5, 2023, 12:56 PM IST

ಬಾಲಿವುಡ್​ ನಟ ಹಾಗೂ ನಿರ್ಮಾಪಕ ಅರ್ಬಾಜ್​ ಖಾನ್​ ನಿನ್ನೆಯಷ್ಟೇ ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರು ತಮ್ಮ ಆತ್ಮೀಯರಿಗಾಗಿ ಗ್ರ್ಯಾಂಡ್​ ಪಾರ್ಟಿಯನ್ನು ಆಯೋಜಿಸಿದ್ದರು. ಅರ್ಬಾಜ್​ ಖಾನ್​ ಹಿರಿಯ ಸಹೋದರ ಮತ್ತು ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಈ ಪಾರ್ಟಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ಸದ್ಯ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಲ್ಮಾನ್​ ಖಾನ್​ ಅವರ ಹೊಸ ಲುಕ್​ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಕಪ್ಪು ಟೀ ಶರ್ಟ್​ ಮೇಲೆ ಬೂದು ಬಣ್ಣದ ಜಾಕೆಟ್​ ಮತ್ತು ಅದಕ್ಕೆ ಮ್ಯಾಚಿಂಗ್​ ಆಗುವಂತಹ ಗುಲಾಬಿ ಬಣ್ಣದ ಪ್ಯಾಂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್​ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ನೆಟ್ಟಿಗರು ಸಲ್ಮಾನ್​ ಖಾನ್​ ಲುಕ್​ ಅನ್ನು ಇತ್ತೀಚೆಗೆ ಬಿಡುಗಡೆಯಾದ 'ಬಾರ್ಬಿ' ಸಿನಿಮಾಗೆ ಹೋಲಿಸುತ್ತಿದ್ದಾರೆ. ಸದ್ಯ ಇದುವೇ ಇಂಟರ್ನ್​ನೆಟ್​ನಲ್ಲಿ ಸದ್ದು ಮಾಡುತ್ತಿದೆ.

ಇನ್ನೂ ಸಲ್ಮಾನ್​ ಖಾನ್​ ಅವರ ಸಿನಿಮಾ ವಿಚಾರ ನೋಡುವುದಾದರೆ, ಅವರು ಕೊನೆಯದಾಗಿ ಕಿಸಿ ಕಾ ಭಾಯ್​​ ಕಿಸಿ ಕಿ ಜಾನ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಪೂಜಾ ಹೆಗ್ಡೆ, ಶಹನಾಜ್ ಗಿಲ್, ರಾಘವ್ ಜುಯಲ್ ಮತ್ತು ಪಾಲಕ್ ತಿವಾರಿ ನಟಿಸಿದ್ದರು. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಟೈಗರ್​ 3'. ದೀಪಾವಳಿ ಸಂದರ್ಭದಲ್ಲಿ ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆಯುತ್ತಿದ್ದು, ಕತ್ರಿನಾ ಕೈಫ್​ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: 'ಸಹ ನಟರ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ..': ನಟಿ ತಮನ್ನಾ ಭಾಟಿಯಾ

ಬಹುನಿರೀಕ್ಷಿತ ಚಿತ್ರ ಟೈಗರ್​ 3: ಟೈಗರ್​ 3 ಸಿನಿಮಾದ ಆ್ಯಕ್ಷನ್ ಸೀನ್​ ಇಡೀ ಭಾರತೀಯ ಚಿತ್ರರಂಗದಲ್ಲಿ ಚಿತ್ರೀಕರಿಸಲಾಗುವ ಅತ್ಯಂತ ದುಬಾರಿ ಸೀನ್​​ ಆಗಲಿದೆ ಎಂದು ವದಂತಿಗಳಿವೆ. ಈವರೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸೀನ್​ ನಿರ್ಮಾಣಗೊಂಡಿಲ್ಲ. ಈ ಹಿನ್ನೆಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಸಲ್ಮಾನ್​​ ಎದುರಾಳಿಯಾಗಿ ಇಮ್ರಾನ್ ಹಶ್ಮಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್​ ವಿರುದ್ಧ ಹೋರಾಡುವ ಐಎಸ್‌ಐ ಏಜೆಂಟ್ ಜೋಯಾ ಪಾತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ.

ಸಲ್ಮಾನ್​ ಖಾನ್​ ಜೊತೆ ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್​ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ತೆರೆಕಂಡಿರುವ ಟೈಗರ್​ 1 ಮತ್ತು 2 ಚಿತ್ರದಲ್ಲೂ ಸಲ್ಮಾನ್​ ಮತ್ತು ಕತ್ರಿನಾ ಸ್ಕ್ರೀನ್​ ಶೇರ್ ಮಾಡಿದ್ದರು. ಟೈಗರ್ 3 ಆ್ಯಕ್ಷನ್ ಚಿತ್ರದ ಮೂರನೇ ಭಾಗವಾಗಿದೆ. ಇದರ ಮೊದಲ ಅಧ್ಯಾಯವು 'ಏಕ್ ಥಾ ಟೈಗರ್ ಥಾ' 2012 ರಲ್ಲಿ ಬಿಡುಗಡೆಯಾಯಿತು. ಕಬೀರ್ ಖಾನ್ ನಿರ್ದೇಶಿಸಿದ್ದರು. ಇದರ ನಂತರ 2017 ರಲ್ಲಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಟೈಗರ್ ಜಿಂದಾ ಹೈ' ರಿಲೀಸ್​ ಆಯಿತು. ಇದೀಗ ಟೈಗರ್​ 3ಯನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: 'ಮತ್ತೆ ಅಭಿಮಾನಿಗಳಿಗಾಗಿ ಮಾತ್ರ ಹಿಂತಿರುಗುತ್ತೇನೆ': ನಟ ಸಲ್ಮಾನ್​ ಖಾನ್​ ಹೀಗೆ ಅಂದಿದ್ದು ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.