ಮುಂಬೈ(ಮಹಾರಾಷ್ಟ್ರ): ಬಿ-ಟೌನ್ ಬ್ಯಾಡ್ ಬಾಯ್, ಬಜರಂಗಿ ಭಾಯಿಜಾನ್ ಸಿನಿಮಾ ಜನಪ್ರಿಯತೆಯ ಸಲ್ಮಾನ್ ಖಾನ್ ಬಣ್ಣದ ಲೋಕದಲ್ಲಿ 34 ವರ್ಷ ಪೂರೈಸಿದ್ದಾರೆ. ಈ ಖುಷಿಯಲ್ಲಿ ತಮ್ಮ ಹೊಸ ಚಿತ್ರದ ಘೋಷಣೆ ಮಾಡಿದ್ದಾರೆ. ಕಾಮಿಡಿ, ಆ್ಯಕ್ಷನ್, ಡ್ರಾಮಾ ಎಲ್ಲ ರೀತಿಯ ಸಿನಿಮಾ ಮಾಡಿ ಯಶಸ್ಸು ಪಡೆದಿರೋ ನಟ ತಮ್ಮ ಮುಂದಿನ ಚಿತ್ರ 'ಕಿಸಿ ಕಾ ಭಾಯ್.. ಕಿಸಿ ಕಿ ಜಾನ್'(Kisi Ka Bhai.. Kisi Ki Jaan) ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಟ್ವಿಟರ್ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಸಲ್ಮಾನ್, ತಮ್ಮ ಅಭಿಮಾನಿಗಳಿಂದ ಸಿಗುತ್ತಿರುವ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಆಗಸ್ಟ್ 26, 1988ರಲ್ಲಿ ಸಿನೆಮಾ ಕ್ಷೇತ್ರಕ್ಕೆ ಬಂದಿದ್ದ ಸಲ್ಲು, ಬಿವಿ ಹೋ ತೋ ಐಸಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ 1989ರಲ್ಲಿ ಮೈನೆ ಪ್ಯಾರ್ ಕಿಯಾದಲ್ಲಿ ಅದ್ಭುತವಾಗಿ ನಟಸಿ ಗಮನ ಸೆಳೆದಿದ್ದರು.
34 ವರ್ಷ ಬಣ್ಣದ ಪ್ರಪಂಚದಲ್ಲಿ ಹಾದಿ ಸವೆಸಿದ ಸಲ್ಮಾನ್ ಖಾನ್ ಸಮೀರ್, ರಾಧೆ, ಚುಲ್ಬುಲ್ ಪಾಂಡೆಯಂತಹ ಅನೇಕ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. 34 ವರ್ಷಗಳ ಹಿಂದೆ ಮತ್ತು 34 ವರ್ಷಗಳ ನಂತರದ ನನ್ನ ಜೀವನದ ಪ್ರಯಾಣ ಇಲ್ಲಿಗೆ ಬಂದು ನಿಂತಿದೆ. ನನ್ನೊಂದಿಗೆ ಸಹಕರಿಸಿದ, ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ಘೋಷಿಸಿದರು.
ಇದನ್ನೂ ಓದಿ: 2022ರ ಅತಿ ದೊಡ್ಡ ನಟ ನಾನೇ.. ಬಿಗ್ ಬಜೆಟ್ ಸಿನಿಮಾಗಳಿಗೆ ಅನುಪಮ್ ಖೇರ್ ಟಾಂಗ್
ಹಮ್ ಅಪ್ಕೆ ಹೈ ಕೌನ್, ಸಾಜನ್, ಖಾಮೋಶಿ, ಹಮ್ ದಿಲ್ ದೆ ಚುಕೆ ಸನಮ್, ಹರ್ ದಿಲ್ ಜೊ ಪ್ಯಾರ್ ಕರೆಗಾ, ಚೋರಿ ಚೋರಿ ಚುಪ್ಕೆ ಚುಪ್ಕೆ, ತೇರೆ ನಾಮ್, ಬಾಡಿ ಗೌರ್ಡ್, ಟೈಗರ್, ಭಜರಂಗಿ ಬಾಯಿಜಾನ್ ಸೇರಿ ಹಲವು ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ.
ತಮ್ಮ ಜೀವನದಲ್ಲಿ ಸಂಗೀತ ಬಿಜಲಾನಿ, ಐಶ್ವರ್ಯ ರೈ, ಕತ್ರಿನಾ ಕೈಫ್ ಸೇರಿ ಹಲವು ನಟಿಯರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ ಸಲ್ಲು, ಇಂದಿಗೂ ಕೂಡ ವಿವಾಹ ಬಂಧನಕ್ಕೆ ಒಳಗಾಗದೆ ಬಾಲಿವುಡ್ ಬ್ಯಾಚುಲರ್ ಆಗಿದ್ದಾರೆ. ರಾಜಸ್ಥಾನದಲ್ಲಿ ಸಿನಿಮಾ ಶೂಟಿಂಗ್ ವೇಳೆ ಕೃಷ್ಣ ಮೃಗ ಬೇಟೆಯಾಡಿದ್ದು, ಬೇಕರಿ ಮುಂದೆ ಮಲಗಿದದ್ದವರ ಮೇಲೆ ಕಾರು ಹತ್ತಿಸಿ ಹಿಟ್ ಅಂಡ್ ರನ್ ಮಾಡಿದ್ದು ಅವರ ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕೆಗಳಾಗಿಯೇ ಉಳಿದಿವೆ.